ಎಲ್ಲಾ ಚಂದದ ಕನಸುಗಳೂ

ಎಲ್ಲಾ ಚಂದದ ಕನಸುಗಳೂ ಮಾಗಿಯಲೇ ಯಾಕೆ ಬರುತಾವೆ ಬಂದೆಮ್ಮ ನಿದ್ದೆಯ ಕೆಡಿಸುತ್ತಾವೆ ಹೊರಗೋ ತುಂತುರು ಹೇರಳ ಮಂಜು ಹಗಲೋ ಇರುಳೋ ತಿಳಿಯೋದೆ ಇಲ್ಲ ನಿದ್ದೆಯು ಒಂದೇ ಎಚ್ಚರವು ಒಂದೇ ಎನಿಸುವುದೇ ಕುಳಿರ್‍ಗಾಳಿಯಲಿ ಹೊದ್ದಿಕೆ ಎರಡ್ಮೂರಿದ್ದರು...

ಅವರು

ಇಲ್ಲಿ ಅವನು ಅಲ್ಲಿ ಅವಳು ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು. ಅದರ ಲಲ್ಲೆಯಲ್ಲಿ ನಲವಿ- ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು. ಬಿಸಿಲ ಹೊಳಪನೊಳಗೆ ಚೆಲ್ಲಿ ನೋಟದಿಂದ ಆಸೆಸರಳನವಳಿಗೆಸೆಯುತ ನಡೆವನೊಬ್ಬ ಗುಡಿಯ ಕಡೆಗೆ, ಮನದ ಗೂಡ, ನೆನಪುದುಂಬಿಯೇಳೆ,...