ಉಮರನ ಒಸಗೆ – ೩೯

ನೀಂ ಕುಡಿವ ಮದಿರೆಯುಂ ನೀನೊತ್ತುವಧರಮುಂ ಮಿಕ್ಕೆಲ್ಲ ಪುರುಳಂತೆ ಶೂನ್ಯಮೆಂಬೆಯೊ?- ಕೇಳ್, ಅಂತಾದೊಡೇಂ? ನೀನೆ ಶೂನ್ಯನಪ್ಪವನಲ್ತೆ? ಶೂನ್ಯತೆಯೆ ನಿನಗಿರಲ್ಕವುಗಳಿಂ ಕುಂದೇಂ? *****

ಬುದ್ಧನ ಮಾಡಿ

ಬುದ್ಧನ ಮಾಡಿ ಹೇಗಾದರು ಮಾಡಿ ಮರದಿಂದ ಮಾಡಿ ಮಣ್ಣಿಂದ ಮಾಡಿ ಕಲ್ಲಿಂದ ಮಾಡಿ ಹುಲ್ಲಿಂದ ಮಾಡಿ ದಂತದಿಂದ ಮಾಡಿ ಚಂದ್ರಕಾಂತದಿಂದ ಮಾಡಿ ಬುದ್ಧನೆಂದರೆ ಬುದ್ಧ ಮಾಯಾದೇವಿಯ ಕನಸು ಬುದ್ಧ ಶುದ್ಧೋದನನ ನನಸು ಬುದ್ಧ ಯಶೋಧರಾ...

ಅವನು-ಅವಳು

ಕಲನಾದಿನಿ ಕಾವೇರಿಯ ತೀರದಿ ತನ್ನನೆ ನೆನೆಯುತಲವನಿದ್ದ; ತನ್ನ ಬಿಜ್ಜೆ ಕುಲ ಶೀಲ ಸಂಪತ್ತು ತನ್ನ ರೂಪು ತನ್ನೊಳೆ ಇದ್ದ. ತನ್ನವರೊಲ್ಲದ ಸರಸತಿ ನವವಧು ಗಂಡನ ಮಡಿವಾಳಿತಿಯಾಗಿ ಹಿಂಡುಬಟ್ಟೆಗಳ ಹಿಂಡಲು ಬಂದಳು ಜವ್ವನದುಲ್ಲಸದೊಳು ತೂಗಿ. ಕರೆಯೊಳಗಿಬ್ಬರೆ-ಆರೋ...