ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ
ಯಾವಾಗಲೂ ಇರುತಾನ
ನಾನೆಚ್ಚರಿರಲಿ ನಿದ್ರಿಸುತಿರಲಿ
ತನ್ನಿಚ್ಛೆಯಂತೆ ಕುಣಿಸುತಾನ
ಕುಣಿಸುತಾನ ದಣಿಸುತಾನ
ಮನಸೋ‌ಇಚ್ಛೆ ಮಣಿಸುತಲು ಇರುತಾನ

ಎಲ್ಲರನು ಬಯ್ಯುತಾನ
ಬಡಿಯಲು ಕೈಯೆತ್ತುತಾನ
ಕೊಂದು ಕೂಗುತಾನ
ಯಾವಾಗಲೂ ಏನೊ ಒಂದು
ಸಂಚು ನಡೆಸುತಿರುತಾನ
ನಡೆವವರ ಕಾಲೆಳೆದು
ಬೀಳೋದು ನೋಡಿ ನಗುತಾನ

ಸತ್ಯ ಹೇಳಲು ಹೊರಟರೆ
ಇಕ್ಕಳ ಹಾಕಿ ಎಳೀತಾನ
ನ್ಯಾಯ ನುಡಿಯಲು ಹೊರಟರೆ
ಬೀಗ ಬಡಿದುಬಿಡುತಾನ

ಕಣ್ಣಿಗೆ ಪರದೆ ಕಟ್ಟುತಾನ
ಕಿವಿಗೆ ಗಂಗಳ ಮೆತ್ತುತಾನ
ಮನಕೆ ಮಂಕು ಹೊದಿಸುತಾನ
ಎದೆಗೆ ಸೀಸ ಹೊಯ್ಯುತಾನ
ಅಫೀಮು ತಿನ್ಸಿ ಮಲಗಿಸ್ತಾನ
ಕುಡಿಸಿ ನನ್ನ ತಲೀನೆ ಕೆಡಿಸಿಬಿಡ್ತಾನ

ದೇವರೆಂದರೆ ಅದು ಸೋಹಂ ಅಂತಾನ
ದೈವವೆಂದರೆ ಅದೂ ಸ್ವಯಂ ಅಂತಾನ
ಸ್ವರ್ಗ ಇರೋದು ತನ್ನೊಳಗೆ
ಸರ್‍ವಸಾಧನಾ ಮಾರ್‍ಗ ತನ್ನೊಳಗೆ
ಯಾರು ಯಾರಿಗೋ ಶರಣಾಗ್ತಿ
ತನಗೇ ಆಗು ಅಂತಾನ

ಮೊದಲ ಕೊಲೆಯೇ ಕಷ್ಟಂತ
ಅಮೇಲದೇ ಮಜಂತ
ಮೊದಲ ಹಾದರವೆ ಭೀತೀಂತ
ಆಮೇಲದೇ ಪ್ರೀತೀಂತ

ಪಾಪ ಪುಣ್ಯಗಳಿಲ್ಲಂತ
ಇರುವುದೊಂದೇ ಸ್ವಂತಾಂತ
ಸ್ವಂತಕೇನು ಬೇಕೋ ಅದ
ನೀಡೋದೆ ನಿನ್ನ ಸುಖಾಂತ

ಅಂತನೆ ಇರ್‍ತಾನೇನ ಮಾಡಲಿ
ಹೆಂಗೆ ಹೋರಾಡಲಿ ಇವನ
ನನ್ನೊಳಗೇ ಇರುವಾತನ
ನನ್ನ ಕೊಲ್ಲದೆ ನಾನಿವನ
ಹೆಂಗೆ ಕೊಲ್ಲಲಿ ಒಳಗಿನವನ
ಇವನಿರದೆ ನಾನಾದರು
ಹೆಂಗಿರಲಿ ಜೀವಸಹಿತ

ನಾ ಗಾಳಿಪಟವಾದರೆ
ಇವನೇ ದಾರಾಂತ
ಇವ ಜಗ್ಗದಿದ್ದರೆ ನಾ
ಬೀಳೋದು ಖಚಿತಾಂತ
ಎಳೆದಾಗಲೇ ನಾ ಮೇಲಕೆ ಮೇಲಕೆ
ಏರೋದಂತ
ಸ್ವರ್‍ಗವ ಕಂಡಂತನಿಸೋದಂತ
ಓ ದೇವರೆ ನನ್ನ
ಕ್ಷಮಿಸೂ ಅಂತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದಿರುಳು
Next post ಉಮರನ ಒಸಗೆ – ೧೮

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…