ಸಾವಿರಾರು ನದಿಗಳು ಸೇರುವಂತೆ ಸಾಗರ ಸೇರಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಊರು ಕೇರಿ ಹಿತ್ತಿಲು ಆಗುವಂತೆ ಜನಪದ ಆಗಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಪಚ್ಚೆ ಪೈರು ನೆಲ ಮನೆ ತುಂಬುವಂತೆ ಹರುಷ ತುಂಬಬೇಕು ಕನ್ನಡ ಸಾವಿರ...

ದಿವಸಾವಸಾನದೊಳು ಬುವಿಯ ನುತಿಗೆಚ್ಚರಿಸೆ ‘ಮುನಸ್ಸೀನ’ನಂದದೊಳು ಅಸ್ತಗಿರಿಯ ರವಿಯಡರಿ ರಂಜಿಸಿಹ- ನವನ ಪಾವನ ಕಾಂತಿ ಅವತರಿಸಿ ಹರಸುತಿದ ಅಂಜುವಿಳೆಯ. ಇನಿಯನೊಲಿಯಲಿ ಎಂದೊ ಮನದಾಸೆ ಸಲಲೆಂದೊ- ಎನಗರಿಯದಾ ಹರಕೆ-ಮುಗಿಲ ಕರೆಯ ಹೊನಲಿನೊಳು...

ಲೋಕದಲಿ ಕಷ್ಟಗಳು ಬಂದರೆ ನಿನ್ನ ಮನೆ ಬಾಗಿಲಿಗೇ ಏಕೆ ಬಂದವು ಹೇಳು? ನಿನ್ನ ಕಷ್ಟಗಳೇ ಲೋಕವಲ್ಲ ಹೆರವರ ಕಾಲಿಗೆ ಚುಚ್ಚಿದ ಮುಳ್ಳನೊಮ್ಮೆ ತೆಗೆದಾದರೂ ನೋಡು ಆಗ ಹೇಳು ನಿನಗೆ ಹೇಗನಿಸುತ್ತದೆ? ಖಡ್ಗದಿಂದಾದ ಗಾಯಕ್ಕಿಂತ ನಾಲಿಗೆಯ ಮಾತುಗಳ ನೋವು ಎಷ್ಟಿ...

ರಾಗ ಯಮುನಾಕಲ್ಯಾಣಿ-ತಾಳ ಧುಮಾಳಿ ಯಾವ ಭಾಗ್ಯದಿಂದಿಲ್ಲಿಗೆ ಬಂದೆ? ನಿನ್ನ ಕಂಡು ಧನ್ಯನಾದೆ ತಂದೆ! ಇನ್ನಾದಡಮೆನಿಸೆನ್ನೆದೆಯಿಂದೆ- ಜಯ ಜಯ ಪಂಢರಿನಾಥ ವಿಠೋಬಾ! ||೧|| ತುಕಾರಾಮ ನಾಮದೇವರಿಲ್ಲಿ ಕುಣಿದ ರಂಗಸಿಲೆಯಿಂ ೧ಸೆಲೆವಲ್ಲಿ ನಿನ್ನ ನಾಮಮೆದೆಯೊ...

ಬಂಡವಾಳವಾಗುತಿದೆ ಕನ್ನಡ ಭಾಷೆ – ನಮ್ಮ ಕನ್ನಡ ಭಾಷೆ ಬಂಡವಾಳವಾಗುತಲಿ ಅಳಿದು ಹೋಗುತ್ತಲಿದೆ ಕನ್ನಡ ಭಾಷೆ – ನನ್ನ ಕನ್ನಡ ಭಾಷೆ ಓಟಿಗಾಗಿ ಸೀಟಿಗಾಗಿ ಜನರ ಕುಣಿಸೊ ನೋಟಿಗಾಗಿ ಕನ್ನಡವನೆ ನಂಬಿಹರು ಸ್ವಾರ್ಥಭರಿತ ಧೂರ್ತರು ಎತ್ತ ಹೋದರ...

ಹಿಗ್ಗುತ್ತಿರುವ ವೃತ್ತದಾಕಾರದಲ್ಲಿ, ಸುತ್ತುತ್ತ ಸುತ್ತುತ್ತ, ಕೇಳಿಸದು ಡೇಗೆಗೆ ಡೇಗೆಗಾರನ ಕೂಗು; ಕಳಚಿಕೊಳ್ಳುತ್ತಲಿದೆ ಅಂಗಾಂಗ, ಒಟ್ಟಾಗಿ ಹಿಡಿಯಲಾರದ ಕೇಂದ್ರ, ಛೂಬಿಟ್ಟ ಹಾಗಿದೆ ಅನಾಯಕತೆಯನ್ನೇ ಇಡಿಯ ಲೋಕದ ತುಂಬ; ರಕ್ತಮಂದ ಪ್ರವಾಹ ಕಟ್ಟೊಡೆ...

ಮೆಲ್ಲಮೆಲ್ಲನೆ ಅಂಬುದಗಳ ಬಂಬಲು ಬಂದು ಹುಣ್ಣಿಮೆಯ ಹೊಂಗದಿರನನು ಮುತ್ತಲೆಳಸುವದು ತಾರೆಗಳ ಬಳಗವನು ಚದರಿಸುತ ಬಳಸುವದು,- ಮುಗಿಲ ಮಂಡಲದೀಚೆ ಕಾರ್‍ಮುಗಿಲೊ ಎನೆ ನಿಂದು, ಮಿಡುಕಿದೆನು ಮನದೊಳಗೆ ಏಕಿದೀ ಬಗೆಯೆಂದು. ಕಾರಣವನರಿಯದಲೆ ಲೋಕ ಕಳವಳಿಸುವುದು...

ಶಿವಯೋಗಿ ಲಂಗೋಟಿ ಕಟ್ಕೊಂಡು ಕಾಡು ಸೇರುವ ಯೋಗಿ ನೀನೊಬ್ಬ ಹೆಂಬೇಡಿ ಅಂಜುಬುರುಕ ಇದ್ದ ಜೀವನದಲ್ಲಿ ಇದ್ದಂತೆ ಎದೆಯೊಡ್ಡು ಶೂರನೇ ಶಿವಯೋಗಿ ಮುದ್ದುಕಂದ ಲಾಂಛನ ಪ್ಯಾಂಟು ತೊಟ್ಟರು ಶರಣ ಬೂಟು ತೊಟ್ಟರು ಶರಣ ಲಾಂಛನದ ಪ್ರಿಂಟಿನಲಿ ಶರಣನಿಲ್ಲ ಮಾರ್‍ಕೆ...

ಕಾಸಿಗ್ ಕಾಸ್ ಗಂಟಾಕಿ ಒಟ್ಟೆಗ್ ಬೆನ್ ಅಂಟಾಕಿ ’ನಾನೂ ಒಬ್ ಸೆಟ್ಟಿ ದುಡ್ಡೈತೆ ಗಟ್ಟಿ’ ಅಂತಂತಿ ಮುನ್ಯ! ಚಂದಾನ ಮುನ್ಯ? ೧ ಯೆಚ್ಚ್ ಅಳತೆ ಕೊಡವಲ್ಲೆ! ಬಿಡಕಾಸೂ ಬಿಡವಲ್ಲೆ! ನೀನೂ ತಿನ್ವಲ್ಲೆ! ‘ಕೋ’ ಅಂತನ್ವೊಲ್ಲೆ! ಚಂದಾನ ಮುನ್ಯ? ನೀನೇ ಯೋಳ್ ಮು...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...