ಲೋಕದಲಿ ಕಷ್ಟಗಳು ಬಂದರೆ
ನಿನ್ನ ಮನೆ ಬಾಗಿಲಿಗೇ
ಏಕೆ ಬಂದವು ಹೇಳು?
ನಿನ್ನ ಕಷ್ಟಗಳೇ ಲೋಕವಲ್ಲ
ಹೆರವರ ಕಾಲಿಗೆ ಚುಚ್ಚಿದ
ಮುಳ್ಳನೊಮ್ಮೆ ತೆಗೆದಾದರೂ ನೋಡು
ಆಗ ಹೇಳು ನಿನಗೆ ಹೇಗನಿಸುತ್ತದೆ?
ಖಡ್ಗದಿಂದಾದ ಗಾಯಕ್ಕಿಂತ
ನಾಲಿಗೆಯ ಮಾತುಗಳ ನೋವು
ಎಷ್ಟಿದೆ ನೋಡು ಸಹಿಸಲಾಗುತ್ತಿಲ್ಲ.
ತನುವಿಗಾದ ಗಾಯ ಮಾಯುತ್ತದೆ
ಮನಸಿನ ಗಾಯ ಮಾಯದು ನೋಡು
ನಾಲಿಗೆಯ ನೋವಿನ ಮುಂದೆ
ಖಡ್ಗದ ನೋವು ಸೋಲುತ್ತದೆ ನೋಡು!
ಆಗೊಮ್ಮೆ ನೀರು ಸಮುದ್ರವೇ ಅವರಾಗಿದ್ದರು
ಖಾಲಿ ಕೊಡ ಹಿಡಿದು ಈಗ ನಿಂತಿದ್ದಾರೆ ನೋಡು
ತಮ್ಮ ಮಹಲುಗಳ ಕಳೆದುಕೊಂಡು
ಗುಡಿಸಲಿಗಾಗಿ ತುಂಡು ಭೂಮಿ
ಭಿಕ್ಷೆ ಕೇಳಲು ಬಂದಿದ್ದಾರೆ ನೋಡು.
ಬದುಕಿಗೆ ಕಾಲಿಂದ ಒದ್ದುಹೋದ ಅವರೇ
ಇಂದು-ಬದುಕಿನ ಭಿಕ್ಷೆ ಕೇಳುತ್ತಿದ್ದಾರೆ ನೋಡು!
*****