ಬುದ್ವಾದ

ಕಾಸಿಗ್ ಕಾಸ್ ಗಂಟಾಕಿ
ಒಟ್ಟೆಗ್ ಬೆನ್ ಅಂಟಾಕಿ
’ನಾನೂ ಒಬ್ ಸೆಟ್ಟಿ
ದುಡ್ಡೈತೆ ಗಟ್ಟಿ’
ಅಂತಂತಿ ಮುನ್ಯ!
ಚಂದಾನ ಮುನ್ಯ? ೧

ಯೆಚ್ಚ್ ಅಳತೆ ಕೊಡವಲ್ಲೆ!
ಬಿಡಕಾಸೂ ಬಿಡವಲ್ಲೆ!
ನೀನೂ ತಿನ್ವಲ್ಲೆ!
‘ಕೋ’ ಅಂತನ್ವೊಲ್ಲೆ!
ಚಂದಾನ ಮುನ್ಯ?
ನೀನೇ ಯೋಳ್ ಮುನ್ಯ! ೨

ಯಿಂಗೆಲ್ಲ ಗಂಟ್ಮಾಡಿ
ತೈಲ್ ತೈಲಿ ದುಡ್ಮಾಡಿ
ನೀ ಸತ್ರೆ ನಿಂಗೆ
ಸುಡಗಾಡೆ ಕೊನ್ಗೆ!
ಸಾಸ್ವತವ ನೀನು?
ಬುಟ್ಟೀಗ್ ಬಿದ್ ಮೀನು! ೩

ಸುಂಸುಂಕೆ ಒದ್ದಾಡ್ತಿ
ಮೂರೊತ್ತೂ ದುಡ್ಮಾಡಿ
ಅನಭೋಸ್ದೆ ಸಾಯ್ತಿ!
ನಿಂಗೇನ್ ಕಿಪಾಯ್ತಿ?
ಬಿಡಕಾಸ್ಗೆ ನಡಗು!
ಮಕ್ಕಳ್ಗೆ ಮಡಗು! ೪

ನಿನ್ ಮಕ್ಕಳ್ ಜೂಜಾಡಿ
ದುಡ್ನೆಲ್ಲ ಪೋಲ್ಮಾಡಿ
ಪಡಕಾನೇಗ್ ತೆತ್ರೆ
ಸೂಳೆಮನೆಗ್ ಒತ್ರೆ
ನಿಂಗೇನ್ ಬತ್ ಮುನ್ಯ?
ಸತ್ ಮೇಲೆ ಸೂನ್ಯ! ೫

ಅದ್ರಿಂದ ಕೇಳ್ದಂಗೆ
ಯೆಂಡ ಬಿಟ್ ಯೋಳ್ದಂಗೆ
ಕೇಳಿದ್ರೆ ನೋಡು-
ಇಲ್ಲಾಂತ್ ಅನಬೇಡ-
ನೀನಾಗ್ತಿ ಮುನ್ಯ
ಜಗದೊಳ್ಗೆ ಮಾನ್ಯ! ೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಗಸ್ತ್ಯ
Next post ಸ್ತ್ರೀ-ಪುರುಷ ತಾರತಮ್ಯ ಮತ್ತು ಸಾಮಾಜಿಕ ನಿಲುವು

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…