ಪ್ರಾರ್ಥನೆ

ಗಣಪತಿಯೇ ನಮಿಪೆವು || ನಿನ್ನ || ಗಣಪತಿಯೇ ನಮಿಪೆವು || ನಾವು || ವಿದ್ಯಾರಂಭಕೆ ಸಿದ್ಧಿ ಸಾಧನೆಗೆ ವಿಧ ವಿಧ ಕಲೆಗಳ ಕಲಿಕೆಗೆ ವಿಜಯದ ಗಳಿಕೆಯ ಸುಲಭದ ಹಾದಿಗೆ ವಿಘ್ನರಾಜನೇ ನಮಿಪೆವು ನಿನಗೆ ||೧||...

ಎಡವೂರ ವೀರಭದ್ರನ ಸ್ತೋತ್ರ

ಎಡವೂರ ತಳದಲ್ಲಿ ಏನೇನ ಶಡಗರ ಎಡಕ ನಂದೀಕೋಲ ಬಲಕ ಪಲ್ಲಕಿ ಪಂಕ ಶಡಗರದ ಛತ್ತರಕಿ ಎಡಬಲ ಬತಾಗೀರಿ ಹಾರೂವ ಹೂಬಾಣ ಹೊಬತ್ತಿ ಕಂಡಿಽರಿ ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ...

ಫಂಢರಪುರದ ವಿಠೋಬನ ಸ್ತೋತ್ರ

ಇಟ್ಟೀಗಿ ಕಲ್ಲ ಮ್ಯಾಲ ಊರಿ ನಿಂತಾನೆರಡು ಪಾದ | ಜರದ ಮಂದೀಲ ಶಾಲ ಇಳಿಯ ಬಿಽಟ್ಟಾರ ಜೋಲ ನಾದ ಬ್ರಹ್ಮ ಮೇಘ ಶಾಮ ಸೃಷ್ಟಿ ಕರ್ತ ಸರ್ವ ಗೋಮ ಸಾದು ಸಂತಽರ ಪ್ರೇಮ ಹ್ಯಾಂಗ...

ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ತೋತ್ರ

ಬಾಗಿಲದಾಗಿನ ಕೋಗಿಲ ಕೂಗಿ ಕೂಗಿ ಮರನೇರಿ | ನಾಗರ್‍ಹೆಡಿಯಂಗಾಡ್ಯಾವೇಳಯ್ಯಾ | ಸಿದ್ಧರಾಮಾ | ನಾಗರ್‍ಹೆಡಿಯುಗಾಡ್ಯಾವೇಳಯ್ಯಾ ||೧|| ಅತ್ತಿಽಯ ಮಽರನೇರಿ ಸತ್ತು ಸೊರಗಿ ನಾನೆ ಬಂದ | ಮುತ್ತಿನೊಸ್ತಾ, ತೋರ್‍ಯಾರೇಳಯ್ಯಾ | ಸಿದ್ಧರಾಮಾ | ಮುತ್ತಿ...

ಗಣಪತಿಯ ಸ್ತೋತ್ರ

ಗಂಧ ಕಸ್ತುರಿ ಪುನಗಽ | ಗೌರವ್ವನ | ಕಂದಗ ಧರಿಸಿದರಽ | ಅಂದದ ಬಿಳಿ‌ಎಲಿ ಆಡಕಿ ಕಾಚವು ಸುಣ್ಣ | ಮುಂದ ಮಡೆಚಿನಿಟ್ಟು ಮಲ್ಲಿಽಗಿ ಮಳೆಗರೆದ | ಮತಿಯ ಪಾಲಿಸೊ ಎನಗಽ | ಶ್ರೀಗಣರಾಯಾ...

ತಾಯಿ ಸರಸ್ವತಿ

ಬೇಗನೆ ಬಾರಮ್ಮಾ ತಾಯಿ ಸರಸ್ವತಿ ಬೇಗನೆ ಬಾರೇ ಮನಮಂದಿರಕೆ || ಪ || ಚಿತ್ತ ಸರಸಿಯನು ತಿಳಿಗೊಳಿಸಮ್ಮಾ ನಿತ್ಯವು ಅರಳಲಿ ಹೃದಯಕಮಲವಲ್ಲಿ ಭಾವ ಸುಗಂಧವ ಎಲ್ಲಿಡೆ ಬೀರಲಿ ಪಾವನಗೊಳಿಸೇ ಅದರಲಿ ಕುಳಿತು || ೧...

ಜಗದಂಬೆ

ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ || ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ ನಿನ್ನ ರೂಪ...

ಕರುಣೆ ತೋರು ನೀನೆನಗೆ

ಕರುಣೆ ತೋರು ನೀನೆನಗೆ ನನ್ನ ಬಾಳ ಏಳಿಗೆಗೆ | ದಾರಿದೀಪವಾಗೆನಗೆ ನನ್ನ ಬಾಳ ಈ ಹಾದಿಗೆ || ಗುರುನೀನೇ ಗುರಿತೋರಿಸು ನೀನೇ ಇನ್ನಾರಿಹರೆನಗೆ ನೀನಲ್ಲದೀಬಾಳಿಗೆ| ಬದುಕ ಬವಣೆಯ ಬಿಡಿಸು ಬಾಳ ಮಹಿಮೆಯ ತಿಳಿಸು|| ಏಕೆ...

ದೇವ ಕರುಣಿಸು

ದೇವ ಕರುಣಿಸು ನನಗೊಂದು ಕುಡಿಯ| ಜನ್ಮನೀಡಿ ಈ ಜನ್ಮವ ಪಾವನವಾಗಿಸುವೆನು| ಅಮ್ಮನೆಂದೆನಿಸಿಕೊಂಡೊಮ್ಮೆ ಆ ಮಮತೆಯನು ಸವಿಯುವೆನು|| ಆ ಹಸುಗೂಸು ಮಡಿಲಲಿ ಮಲಗಿ ಪುಟ್ಟ ಕಾಲಲಿಂದ ಒದೆಯುವುದ ನಾ ಕಲ್ಪಿಸಿ, ಅದರ ಬರುವಿಕೆಗಾಗಿ ಕಾದಿರುವೆ ಕಾತರಿಸಿ...

ದೇವಾ ನಿನ್ನ ನಾಮಾಮೃತವ

ದೇವಾ ನಿನ್ನ ನಾಮಾಮೃತವ ಸದಾ ಸವಿಯುತಲಿದ್ದರೆ ಹಸಿವು ಎನಿಸುವುದಿಲ್ಲಾ | ಸಮಯ ಸವೆಯುವುದೇ ತಿಳಿಯುವುದಿಲ್ಲಾ|| ಚಿತ್ತದೊಳು ನಿನ್ನನ್ನಿರಿಸಿ ಮನದಿ ನಿನ್ನ ಸ್ಮರಿಸಿ ನಿತ್ಯ ಕೆಲಸ ಪ್ರಾರಂಭಿಸೆ ಯಾವ ವಿಘ್ನಗಳಿಲ್ಲ| ತಿನ್ನುವ ಅನ್ನವನು ನೀನಿತ್ತ ಪ್ರಸಾದವೆಂದು...