ಕರುಣೆ ತೋರು ನೀನೆನಗೆ

ಕರುಣೆ ತೋರು ನೀನೆನಗೆ
ನನ್ನ ಬಾಳ ಏಳಿಗೆಗೆ |
ದಾರಿದೀಪವಾಗೆನಗೆ
ನನ್ನ ಬಾಳ ಈ ಹಾದಿಗೆ ||

ಗುರುನೀನೇ ಗುರಿತೋರಿಸು ನೀನೇ
ಇನ್ನಾರಿಹರೆನಗೆ ನೀನಲ್ಲದೀಬಾಳಿಗೆ|
ಬದುಕ ಬವಣೆಯ ಬಿಡಿಸು
ಬಾಳ ಮಹಿಮೆಯ ತಿಳಿಸು||

ಏಕೆ ಮತ್ತೆ ಮತ್ತೆ ಪುನರಪಿಸುವೆವೋ ಕಾಣೆ
ನಾನಿದರ ಮರ್ಮವನರಿಯೆ?|
ನಿನ್ನ ಹೆಜ್ಜೆಯಲೆನ್ನ ಹೆಜ್ಜೆಯ ನೀನಿರಿಸು
ಈ ಸಾಗರದ ದಡವ ನೀ ಸೇರಿಸು||

ಪಾಪವೋ, ಶಾಪವೋ, ಪೂಣ್ಯವೋ
ನನ್ನ ಹಿಂದಿನ ಅಕರ್ಮವೊ ಕಾಣೆ|
ಕೊನೆಗಾಣಿಸಿ ಜನ್ಮದಲಿ ಎಲ್ಲದನು
ನೀ ದಯತೋರಿ ಪರಿಪೂರ್ಣಗೊಳಿಸೆನ್ನಾ
ಮತ್ತೆ ಮರುಕಳಿಸದಂತೆ ಈ ನರಜನ್ಮ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀಮಂತ
Next post ಹೀಗಿರಲಿ ಭಕ್ತಿ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…