ಇಟ್ಟೀಗಿ ಕಲ್ಲ ಮ್ಯಾಲ ಊರಿ ನಿಂತಾನೆರಡು ಪಾದ |
ಜರದ ಮಂದೀಲ ಶಾಲ
ಇಳಿಯ ಬಿಽಟ್ಟಾರ ಜೋಲ
ನಾದ ಬ್ರಹ್ಮ ಮೇಘ ಶಾಮ
ಸೃಷ್ಟಿ ಕರ್ತ ಸರ್ವ ಗೋಮ
ಸಾದು ಸಂತಽರ ಪ್ರೇಮ
ಹ್ಯಾಂಗ ನಿಂತಾರೆನಗ ಪೇಳಿರೇ | ಶ್ರೀಪಾಂಡುರಂಗ |
ಹ್ಯಾಂಗ ನಿಂತಾರೆನಗ ಪೇಳಿರೇ ||೧||
ಟೊಂಕದ ಮ್ಯಾಲ ಕೈಯನಿಟ್ಟು ಹೃದಯದಲ್ಲಿ ಲತ್ತಿಪೆಟ್ಟು
ತೆಗ್ಗು ಬಿತ್ತು ಒಳ್ಳೆ ಎಷ್ಟು
ದುಕ್ಕ ಇಲ್ಲ ಎಳ್ಳಿನಷ್ಟು
ತುಳಸಿ ಮಾಳಿ ಬುಽಕ್ಕಿಟ್ಟು
ಹಗಲ ಇರಳ ಭಜನಿಗೋಳು
ಅವಂದೇ ಅಂಸ ಮೃದುಂಗ ತಾಳ
ಮದನ ಮೂರ್ತಿ ಗೋಽಪಾಳ
ಸಾದು ಸಂತಽರ ಮ್ಯಾಳ
ಹ್ಯಾಂಗ ನಿಂತಾರೆನಗ ಪೇಳಿರೇ | ಶ್ರೀಪಾಂಡುರಂಗ |
ಹ್ಯಾಂಗ ನಿಂತಾರೆನಗ ಫೇಳಿರೇ ||೨||
ಟಿಪ್ಪಿಗೀ ಲಿಂಗಕಾರ ಟಿಳಕ ಬಣ್ಣ ಚಂದ್ರತಾರಾ
ಮುಂದ ಹರಿವ ಭೀಮ ತೀರ
ಪುಣ್ಯಕ್ಷೇತ್ರ ಪಂಡರಿಪೂರ
ಪುಂಡಲೀಕ ಗೋಪುಕಾರ
ಚಾತುರ್ಮಾನ ಪರಸಿ ಭಾಳ
ಯೋಗಿ ಜನರಿಗಽಪರೂಪ
ನೇಮದಿಂದ ಸುಡುವ ಪಾಪ
ಈತನೇನ ಬೌದ್ಧ್ಯ ರೂಪ
ಹ್ಯಾಂಗ ನಿಂತಾರೆನಗ ಪೇಳಿರೇ | ಶೀಪಾಂಡುರಂಗ |
ಹ್ಯಾಂಗ ನೀಂತಾರೆನಗ ಪೇಳಿರೇ ||೩||
ಹಾಸ್ಯನದನ ಕಮಲನಯನ ಶೇಷಶಯನ ಗರುಡವಾಹನ
ಶಿಷ್ಯಮೂಳ ನಿಜಧಾಮ
ರಾಮರಸ ರಸದಿಂದ
ಎಂದಿಗೀ ದೊರಕ್ಯಾನಂದ
ಹವಳ ಕೂಡಸ್ತ ಛೆಂದ
ಹ್ಯಾಂಗ ನಿಂತಾರೆನಗ ಪೇಳಿರೇ | ಶ್ರೀಪಾಂಡುರಂಗ |
ಹ್ಯಾಂಗ ನಿಂತಾರೆನಗ ಪೇಳಿರೇ ||೪||
*****