ಸೂಜಿ ಮತ್ತು ಅವಳು

ಎಲ್ಲಿ ಹೋದರೂ ಚಿನ್ನಾರಿ ಪೇಪರಿನಲಿ ಜೋಪಾನ ಮಾಡಿ ಎತ್ತೊಯ್ಯುತ್ತಾಳೆ ತನ್ನ ಪ್ರೀತಿಯ ಸೂಜಿಯನ್ನೂ! ಸೂಜಿಯೊಂದಿಗೇ ರೀಲುಗಟ್ಟಲೆ ಗಟ್ಟಿದಾರ ಹೊತ್ತು ಸಾಗಿ ಪಿಸುಗಿಹೋದ ಎಲ್ಲ ಎಲ್ಲವನ್ನೂ ಹೊಲಿಯುತ್ತಾಳೆ ಹರಕುಗಳು ಕಾಣದಂತೆ ಮುಚ್ಚುತ್ತಾಳೆ! ಹೋದ ಬಂದೆಡೆ ಎಲ್ಲಾ...

ಮಿಕ್ಕಿಲ್ಲವೇ ನನಗೆ ನಾನು?

ಬೊಗಸೆಯಲ್ಲಿನ ನೀರು ಸೋರಿ ಹೋದರೆ ಏನು? ತೇವವಿಲ್ಲವೇ ಒಂದಿಷ್ಟು ಮೊಳಕೆಯೊಡೆಯುವಷ್ಟು? ಎಷ್ಟೊಂದು ಮಾತುಗಳು ತುಟಿ ಮೀರಿ ಹೋದರೆ ಏನು? ಅವ್ಯಕ್ತ ಭಾವಗಳೇ ಎದೆ ತುಂಬದೇನು? ಅಲೆಗಳೊಂದೂ ದಡಕುಳಿಯದಿದ್ದರೇನು? ಅಪ್ಪಿಲ್ಲವೇ ಮರಳು ಶಂಖ, ಚಿಪ್ಪಿನೊಂದಿಗೇ ದಡವನು?...

ಪ್ರಯತ್ನಗಳು

ಕೈ ಕಾಲು ಕಟ್ಟಿ ಹಾಕಿ ದೇಹದೊಂದಿಂಚೂ ಹೊಸಗಾಳಿಗೆ, ಹೊಸ ಬೆಳಕಿಗೆ ಸೋಕದಂತೆ ಮುಸುಕೆಳೆದು ಕೂರಿಸಿ ಎಷ್ಟೊಂದು ದಿನಕಳೆದವೋ ಕೂತಲ್ಲೇ ಕೆಟ್ಟು! ಸಮುದ್ರದ ಅದದೇ ಅಲೆಗಳೂ ವ್ಯರ್ಥ ದಂಡೆಗಪ್ಪಳಿಸಿ ಹಿಂದಿರುಗುವಂತೆ ಅದದೇ ನಿಟ್ಟುಸಿರು ಮತ್ತೆ ಮತ್ತೆ...

ಅಡುಗೆ ಮನೆ ಸಾಹಿತ್ಯ

ಹೌದು ಗೆಳೆಯಾ ಇದು ಅಡುಗೆ ಮನೆ ಸಾಹಿತ್ಯವೇ! ಒಗ್ಗರಣೆಯ ಸಾಸಿವೆ ಸಿಡಿದಾಗ ಮನವೂ ಸಿಡಿದು ಸಾವಿರ ಹೋಳಾಗಿ ಒಲೆಯ ಮೇಲೆ ಹುಳಿ ಕುದಿವಾಗ ಎದೆಯೂ ಕುದ್ದು ಕುದ್ದು ಹದವಾಗಿ ಚಾಕು ಈಳಿಗೆ ಮಣೆಗಳು ತರಕಾರಿ...

ರೆಕ್ಕೆ ಬಿಚ್ಚಿದ ಹಕ್ಕಿ

ಎಡಬಿಡದೆ ಸುರಿದ ಮಹಾ ಮಾರಿ ಮಳೆಗೆ ರೆಕ್ಕೆಪುಕ್ಕಗಳೆಲ್ಲಾ ಒದ್ದೆಮುದ್ದೆಯಾಗಿ ನೆಲಕ್ಕೆ ಕವುಚಿಬಿದ್ದ ಮರಿ ಹಕ್ಕಿ ಛಳಿಗೋ, ತೇವಕ್ಕೋ ಗಡಗಡನೆ ನಡುಗುತ್ತಾ ರೆಕ್ಕೆ ಬಿಚ್ಚಲಾಗದೇ ಮತ್ತಷ್ಟು ಮುದುಡುತ್ತಾ ತನ್ನ ಅಸಹಾಯಕತೆಗೆ ಬಿಕ್ಕುತ್ತಾ ಮನದೊಳಗೆ ಒಂದೇ ಪ್ರಶ್ನೆ...

ಎಂದೆಂದೂ ಕೇಳಲಾಗದ ಪ್ರಶ್ನೆಗಳು

ನನ್ನ-ನನ್ನಂತವರ ಹುಟ್ಟಿನೊಂದಿಗೇ ಆಳ ಬೇರು ಬಿಟ್ಟು ಬೆಳೆದ ಎಷ್ಟೊಂದು ಎಂದೆಂದೂ ಕೇಳಲಾಗದ ಪ್ರಶ್ನೆಗಳು! ಸೀತೆ ಸಾವಿತ್ರಿ ಅಹಲ್ಯೆ ಎಂದೂ ಕೇಳದ ಪ್ರಶ್ನೆಗಳು ದ್ರೌಪದಿ, ಗಾರ್ಗಿ, ಸಂಚಿಹೊನ್ನಮ್ಮ ಕೇಳಿಯೂ ಉಳಿದ ಪ್ರಶ್ನೆಗಳು! ಆದಿ ಅಂತ್ಯವಿಲ್ಲದೇ ದಶಮಾನ...

ಸೂಜಿಗಳು

ಯಾಕೆ ಚುಚ್ಚುತ್ತವೋ ಹೀಗೆ ಹೋದೆಡೆ ಬಂದೆಡೆ ಎಲ್ಲಾ ಈ ಸೂಜಿಗಳು ಅಂಗಾತ ಮಲಗಿದಾಗ ಹೊಟ್ಟೆಗೆ ಬೋರಲಾದಾಗ ಬೆನ್ನಿಗೆ ಆಸೆ-ಕನಸುಗಳ ಬೆಲೂನಿಗೆ ಗಾಳಿ ತುಂಬಿ ಎತ್ತರೆತ್ತರಕ್ಕೆ ಹಾರುವಾಗ ಫಕ್ಕನೆ ಚುಚ್ಚಿ ಸೂಜಿ, ಅಟ್ಟಹಾಸಗೈಯುವಾಗ ಜೀವ ಕಳೆದುಕೊಂಡ...

ರಂಗಪ್ರವೇಶ

ಹೊತ್ತು ಮೀರುತ್ತಿದೆ ಇನ್ನೇನು ಈಗಲೋ ಆಗಲೋ ತೆರೆ ಮೇಲೇಳುವ ಸಮಯ! ಗಿಜಿಗುಡುತಿದೆ ಸಭಾಂಗಣ ಸುತ್ತ ಹಬ್ಬಿದೆ ಮಬ್ಬು! ಸಾಕಿನ್ನು ಮೇಲೇಳು ಮುಗಿದಿಲ್ಲವೇ ಇನ್ನೂ ಪ್ರಸಾಧನ? ತುಟಿಬಣ್ಣ ಒಂದಿನಿತು ಢಾಳಾಯ್ತು ಕೆನ್ನೆಗಿನ್ನೊಂದಿಷ್ಟು ಕೆಂಪಿದ್ದರಾಗಿತ್ತು! ಸರಿಪಡಿಸು ಸುಕ್ಕಾದ...

ಪ್ರತಿಬಿಂಬ

ಕನ್ನಡಿಯೊಳಗೇ ಅವಿತು ಕುಳಿತು ಬಿಂಬಕ್ಕೆ ಪಾದರಸದ ಪರದೆಯೆಳೆದು ಪಾರದರ್ಶಕದ ಪ್ರತಿಬಿಂಬವಾಗಿ ಕನ್ನಡಿಯಾಚೆಯ ಮೂರ್ತಬಿಂಬದ ಅಮೂರ್ತ ಪಡಿಯಚ್ಚು ಭೂಮಿ ಮೇಲೆಷ್ಟೋ ಒಳಗೂ ಅಷ್ಟೇ! ಕನ್ನಡಿಗೆ ಮುಖಾಮುಖಿಯಾದ ಪ್ರತಿಯೊಂದು ಬಿಂಬಕ್ಕೆ ತಕ್ಕ ಪ್ರತಿರೂಪ ಪಾತ್ರೆಯಾಕಾರಕ್ಕೆ ತಕ್ಕ ಪಾತ್ರ...

ಅಮ್ಮ ಹೇಳಿದ್ದು

ಇದು ನನ್ನ ಕಲ್ಪನೆಯ ಕಥೆಯಲ್ಲ ಮಗಳೇ ನನ್ನಮ್ಮ ನನಗೆ ಹೇಳಿದ್ದು ಅವಳಮ್ಮ ನನ್ನಮ್ಮನಿಗೆ ಹೇಳಿದ್ದಂತೆ ಈಗ ನಾ ನಿನಗೆ ಹೇಳಿದಂತೆ ನಾಳೆ ನೀ ನಿನ್ನ ಮಗಳಿಗೆ ಹೇಳುವಂತೆ ಇದೊಂದು ರೀತಿ ಚಕ್ರದಂತೆ! ಇದು ಕಥೆಯ...