ಎಲ್ಲಿ ಹೋದರೂ
ಚಿನ್ನಾರಿ ಪೇಪರಿನಲಿ
ಜೋಪಾನ ಮಾಡಿ
ಎತ್ತೊಯ್ಯುತ್ತಾಳೆ ತನ್ನ
ಪ್ರೀತಿಯ ಸೂಜಿಯನ್ನೂ!
ಸೂಜಿಯೊಂದಿಗೇ
ರೀಲುಗಟ್ಟಲೆ
ಗಟ್ಟಿದಾರ
ಹೊತ್ತು ಸಾಗಿ
ಪಿಸುಗಿಹೋದ
ಎಲ್ಲ ಎಲ್ಲವನ್ನೂ
ಹೊಲಿಯುತ್ತಾಳೆ
ಹರಕುಗಳು
ಕಾಣದಂತೆ
ಮುಚ್ಚುತ್ತಾಳೆ!
ಹೋದ ಬಂದೆಡೆ
ಎಲ್ಲಾ ಇವಳ
ಸೂಜಿ-ದಾರ
ಹೊಲಿಗೆಯದ್ದೇ ಸುದ್ದಿ!
ಎತ್ತರಕ್ಕೇರಿದೆನೆಂದು
ತನ್ನ ಸಮ
ಯಾರಿಲ್ಲವೆಂದು
ಸುಮ್ಮನೆ ಬೀಗುತ್ತಾಳೆ ಪೆದ್ದಿ!
ಹೊಲಿದದ್ದು ಮತ್ತೆ ಮತ್ತೆ
ಹರಿಯದುಳಿದೀತೇ?
ಹರಿದದ್ದೆಲ್ಲವ ಶಾಶ್ವತ
ಹೊಲಿಯಲಾದೀತೇ?
*****