ಈಡಿಪಸ್‌ಗೊಂದು ಪ್ರಶ್ನೆ

ಓ ಈಡಿಪಸ್ ನಿನ್ನೆದೆಂತಹ ಬದುಕು
ಅಮಾನುಷ ವಿಧಿಬರಹಕೆ ಈಡಾಗಿ
ಅರಿಯದೆ ಹಿಂದೆಂದೂ ನಡೆಯದಿದ್ದ
ಮುಂದೆಂದೂ ನಡೆಯದಿರುವ
ಘನಘೋರ ದುರಂತಕ್ಕೆ ಬಲಿಯಾದೆ

ನವಮಾಸಗಳು ತನ್ನೊಡಲಲಿ
ನಿನ್ನನಿರಿಸಿಕೊಂಡ ಹೆತ್ತವಳಿಗೆ
ಮಾಲೆ ಹಾಕಿ ಅವಳೊಡೆಯನಾದೆ
ಅವಳ ನಗ್ನತೆಯಲಿ ಸುಖವುಂಡು
ನೀ ಸೃಷ್ಟಿಯಾದಲ್ಲಿಯೇ ನಿನ್ನ ಭ್ರೂಣವನ್ನೂ
ಸೃಷ್ಟಿಸಿ ಹೇಯದಾಖಲೆಯ ಪಿತನಾದೆ

ದುರ್ದೈವ ಈಡಿಪಸ್ ಗೊತ್ತಿತ್ತೇ
ನಿನ್ನೆದೆಂತಹ ಹೀನಬದುಕೆಂದು
ಯುಗ ಯುಗ ಕಳೆದರೂ
ಸೂರ್ಯ ಚಂದ್ರರಿರುವ ತನಕವೂ
ನಿನ್ಹೆಸರು ಅಳಿಯದೆಂದು
ಹೆತ್ತವಳನ್ನೇ ಭೋಗಿಸಿದ ಕೀರ್ತಿ ನಿನ್ನದೆಂದು

ಓ ಈಡಿಪಸ್ ಘನ ಘೋರ ಸತ್ಯಕೆ
ಬೆಚ್ಚಿ, ಜನನಿಯ ನಗ್ನತೆ ಕಂಡ
ಈ ಕಣ್ಣುಗಳಿರಬಾರದೆಂದು ಕುರುಡಾದೆ
ಆದರೇನು ಮರೆಯಾದಿತೇ ಆ ದೃಶ್ಯ
ನಿನ್ನ ಅಂತರಂಗದ ಅಂತರಾಳದಲಿ
ಅಮ್ಮ ಎಂದವಳ ಕರೆಯಬಲ್ಲೆಯ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂಜಿ ಮತ್ತು ಅವಳು
Next post ಗ್ರಹಣ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…