ಬೆಂಕಿ

ಒಡಲಿನಾಗೆ ಸಿಡಿಲು ಕುಂತು ಕೂಗು ಹಾಕಿತು. ನೆತ್ತರಾಗೆ ತತ್ತಿಯಿಟ್ಟು ತೇಲಿಬಿಟ್ಟಿತು. ಕೆಂಡದುಂಡೆಯಂಥ ತತ್ತಿ ಕನಸು ಕಟ್ಟಿತು- ಅದು ಬಿರುಕು ಬಿಟ್ಟಿತು, ನೆತ್ತರಲ್ಲಿ ತತ್ತಿಯೊಡೆದು ಬಂದುಬಿಟ್ಟವು- ಮರಿಗಳು ಬಂದುಬಿಟ್ಟವು. ಮೌನದಾಗೆ ಮೈಯ ತಿಂದು ಮಾತಾಡಿದವು- ಮರಿಗಳು...

ಇತಿಹಾಸ

ಇಲ್ಲಿ ಹರಿಯೋ ನೀರು ನೀರಲ್ಲ ಸ್ವಾಮಿ, ತೀರ್ಥವೆನ್ನುವರು ಇಲ್ಲಿ ನೆಟ್ಟ ಕಲ್ಲು ಕಲ್ಲಲ್ಲ ಸ್ವಾಮಿ, ದೇವರೆನ್ನುವರು ಇಲ್ಲಿ ಬಡಿಯೋ ಸಾವು ಸಾವಲ್ಲ ಸ್ವಾಮಿ, ಮೋಕ್ಷವೆನ್ನುವರು. ಇಲ್ಲಿರುವ ಬಡತನಕೆ ಇಲ್ಲಿ ಕಾರಣವಿಲ್ಲ ಕಳೆದ ಜನ್ಮದ ಪಾಪವಂತೆ...

ಪ್ರೀತಿ

ಮುಖವಿದ್ದರು ಮಾತಿಲ್ಲದ ಮನಸಿದ್ದರು ಕನಸಿಲ್ಲದ ಬರಿ ಮಸಣದ ಬಾಳು ಕಪ್ಪು ಕೂದಲ ಕೆದರಿ ಕೋರೆ ಹಲ್ಲಿನ ಮಾರಿ ಕಗ್ಗತ್ತಲ ಕಾವಲು. ಕಪ್ಪು ಕೋಟೆಯ ಒಳಗೆ ಬಲಿಯಾದ ಪ್ರೀತಿಯ ರಕ್ತ ನಂಟಿನಂಟನು ತೊಳೆದು ಮುಳುಗಿ ತೇಲುವ...

ಬೂದಿಯ ಬೆಳಕು

ರಕುತದ ಕಣದಾಗೆ ಬಡತನದ ಸುಗ್ಗಿ ಮೆದೆ ಮೆದೆಯ ಸದೆಬಡಿದು ಹಿರಿದಾಗಿ ಹಿಗ್ಗಿ ಬೆವರು ಹರಿಸಿದಾ ಕನಸು ಬತ್ತಿಹೋಯ್ತು ಮೂಳೆಮೂಳೆಯ ಮಾತು ಸತ್ತುಹೋಯ್ತು. ಮನೆ, ಮಡಕೆ, ಮಂಚದಲಿ ಮನಮನದ ಮೂಲೇಲಿ ಬುಸುಗುಡುವ ಬರ ಹರಿದು ಹಸಿರು...

ಬಡವನ ಆಸೆ

ಜೀವ ಚಿಮ್ಮಿರುವ ಹೂವೇ ಹಾಡು ಹೊಮ್ಮಿರುವ ಹಗಲೇ ಮಾತಾಡುವಾಸೆ ನನಗೆ ನಿಮ್ಮೊಂದಿಗೆ ಮಿನುಗು ಹೆಜ್ಜೆಯ ತಾರೆಯೇ ಚಂದ್ರ ಚುಂಬಿತ ರಾತ್ರಿಯೇ ಬೆರೆಯುವಾಸೆ ನನಗೆ ನಿಮ್ಮೊಂದಿಗೆ. ಬಿಸಿಲ ಬಂಧನ ಮುರಿದು ಹಸಿರ ಹಾದಿಗೆ ಜಿಗಿದು ನಲಿಯುವಾಸೆ...

ಮಳೆ

ಬಸಿರು ತುಂಬಿದ ಮೋಡ ಕಾದು ಕರೆಯೊ ಭೂಮಿ- ಮುಗಿಲಿನ ಗಂಡ; ಮಳೆ ಮಗುವು ಎಲ್ಲೊ? ತೊಟ್ಟಿಲ ಸಿಂಗರಿಸಿ ಕಾದು ಕಣ್ಣರಳಿಸಿ ಕೂತೆವು ನಾವು ಕೂಸಂತು ಇಲ್ಲೊ. ಮುಗಿಲ ಮೈಯಿಳಿಯಿತೆ? ಕೆಟ್ಟ ಮುನಿಸಾಯಿತೆ? ನೆಲ ಮುಗಿಲು...

ಸಾಲ ಸರ್ಪ

ಸಾಲ ಸರ್ಪವು ಬಂದು ಸಂಸಾರ ಸೇರಿತು ಚಿತ್ತ ಚಿತ್ತವನೆಲ್ಲ ಹುತ್ತವ ಮಾಡಿತು. ಸಣ್ಣ ಸಂದೀಲಿ ತೂರಿ ಬಂದಾ ಸರ್ಪ ಹೆಡೆಯತ್ತಿ, ಸತಿಗೆ ಆಯ್ತಲ್ಲ ಸವತಿ ಸವತಿಯ ಸಂತತಿ ಬುಸುಗುಟ್ಟಿ ಬೆಳೆದಂತೆ ಸಂಸಾರದಾಗೆ ಇನ್ನೆಂಥ ಶಾಂತಿ!...

ಶ್ರಮಜೀವಿಗಳ ಹಾಡು

ನಾವು ಕಟ್ಟಿದ ಗೆದ್ದಲಗೂಡು ನಿಮಗಾಯಿತು ಹುತ್ತ. ನಾವು ಹೊತ್ತ ಮಣ್ಣಿನ ಕನಸು ನಿಮಗಾಯಿತು ನನಸು. ನಾವು ನೀರೆರೆದ ಹೂವು ಹಣ್ಣು ನಮಗಾದವು ಹುಣ್ಣು. ಮೂಸಿ ನೋಡದ ಕಾಡು ಕಲ್ಗಳ ಮುದ್ದಾಡಿದೆವು ನಾವು ಕಲ್ಲು ಕಂದಗಳ...

ಸಂಬಂಧಗಳು

ಬಡತನ ಬಂದಾಗ ಸಂಬಂಧ ಸುಟ್ಟಿತು ನಮ್ಮ ಕರುಳೇ ನಮಗೆ ಕೈಕೊಟ್ಟು ನಕ್ಕಿತು. ಬಿರುಕು ಬಿಟ್ಟ ಗೋಡೆ ಮುರುಕು ಮಾಳಿಗೆ ಮನೆ ಮಳೆಯು ಸುಂಟರಗಾಳಿ ಮನಸಾಗಿ ಮೂಡಿತು. ಸುಟ್ಟ ಬೂದಿಯ ಮ್ಯಾಲೆ ಸತ್ತ ಸಂಬಂಧಗಳು ಕೊಂಡಿ...

ನೋವಿನ ಬೆಳಕು

ನನ್ನ ನುಂಗುತಿಹ ನೋವುಗಳೇ ಬಾಳ ತುಂಬುತಿಹ ಬೇವುಗಳೇ ಕಾಳ ರಾತ್ರಿಯಲಿ ಕಾಡಾಗದಿರಿ ಬಾಳ ಬೀದಿಯಲಿ ಹಾವಾಗದಿರಿ ಮೋಡದ ಮುಸುಕ ಮೆಲ್ಲನೆ ಸರಿಸಿ ನಗುವ ಚಂದ್ರ ಬೇಕು ಕಾಡುವ ಕತ್ತಲ ಕತ್ತನು ತರಿದು ನೆಗೆವ ಸೂರ್ಯ...