ರಕುತದ ಕಣದಾಗೆ ಬಡತನದ ಸುಗ್ಗಿ
ಮೆದೆ ಮೆದೆಯ ಸದೆಬಡಿದು ಹಿರಿದಾಗಿ ಹಿಗ್ಗಿ
ಬೆವರು ಹರಿಸಿದಾ ಕನಸು ಬತ್ತಿಹೋಯ್ತು
ಮೂಳೆಮೂಳೆಯ ಮಾತು ಸತ್ತುಹೋಯ್ತು.
ಮನೆ, ಮಡಕೆ, ಮಂಚದಲಿ
ಮನಮನದ ಮೂಲೇಲಿ
ಬುಸುಗುಡುವ ಬರ ಹರಿದು
ಹಸಿರು ಹಾಸಿಗೆಯೆಲ್ಲ ಉರಿದುಹೋಯ್ತು
ಮಣ್ಣ ಕಣಕಣವೆಲ್ಲ ಬೂದಿಯಾಯ್ತು.
ಬೂದಿ ಬದುಕಿನ ಒಳಗೆ ಉರಿ ಅರಳುವಾ ಆಸೆ
ಒಣಮರದ ಮನದಾಗೆ ಹಕ್ಕಿಯಾಗುವ ಆಸೆ
ಮನೆ ಮೈ ಮನಕೆಲ್ಲ ಬಡಿದಂಥ ಬರವನ್ನು
ಸುಟ್ಟು ಸುವಾಸನೆಯ ಕೊಡುವ ಆಸೆ
ಬೂದೀಲೆ ಬೆಳಕು ಉರಿಸುವಾಸೆ
*****