ಬಡತನ ಬಂದಾಗ
ಸಂಬಂಧ ಸುಟ್ಟಿತು
ನಮ್ಮ ಕರುಳೇ ನಮಗೆ
ಕೈಕೊಟ್ಟು ನಕ್ಕಿತು.
ಬಿರುಕು ಬಿಟ್ಟ ಗೋಡೆ
ಮುರುಕು ಮಾಳಿಗೆ ಮನೆ
ಮಳೆಯು ಸುಂಟರಗಾಳಿ
ಮನಸಾಗಿ ಮೂಡಿತು.
ಸುಟ್ಟ ಬೂದಿಯ ಮ್ಯಾಲೆ
ಸತ್ತ ಸಂಬಂಧಗಳು
ಕೊಂಡಿ ಕಳಚಿ ಬಿದ್ದ
ಕೈ ಕಾಲು ಮೂಳೆಗಳು.
ಅಕ್ಕ ತಂಗೇರೆಲ್ಲ
ಬಿರಿದ ಬೇಳೆಕಾಳು
ಅಣ್ಣ ತಮ್ಮದಿರೆಲ್ಲ
ಉರಿವ ಹುರುಳಿಕಾಳು.
ಹೆಂಡತಿ ಮಕ್ಕಳಿಗೆ
ಏನ ಹೇಳಲಿ ನಾನು?
ತಟ್ಟೆ ತಂಗಳು ತುಂಬಿ
ತೊನ್ನು ಹತ್ತಿದ ಬಾನು.
*****
ತುಂಬಾ ಸ್ವಾರಸ್ಯಕರ ವಾಗಿದೆ ಕವಿತೆ
ಧನ್ಯವಾದಗಳು ಸರ್