ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ...
ಅಂದೊಂದು ದಿನದಲ್ಲಿ,- ನಿಶಿಯ ನೀರವದಲ್ಲಿ- ಇಂದುವಿನ ತಿಳಿಯಾದ ಬೆಳದಿಂಗಳಲ್ಲಿ- ಒ೦ದಿಯಾನಂದವನು ಬಗೆಯ ಬೇಸರ ಕಳೆಯೆ, ಮಂದಿರದ ಹೊರಜಗಲಿಯಲ್ಲೊರಗಿದೆ ೨ ಮೇಲೆ ನೀಲಾಕಾರವನ್ನ ದಿಟ್ಟಿಯನಟ್ಟೆ- ಲೀಲೆಯಿಂದಲಿ ಚಂದ್ರ ಸಾಗುತಿಹನು. ಹಲಕೆಲವು ತಾರೆಗಳು ತಮ...
ಪ್ರೀತಿಯ ಕಿಟಿ, ನಮ್ಮ ವಾಸದ ಸಂಗತಿಗಳ ಕುರಿತು ನನ್ನ ದೀರ್ಘ ಲಂಬಿತ ವಿವರಣೆಗಳಿಂದ ನಿನ್ನನ್ನು ಸಾಕಷ್ಟು ಬೇಸರಗೊಳಿಸಿದೆ ಎಂದುಕೊಳ್ಳುತ್ತೇನೆ. ಆದರೂ ನಿನಗೆ ನಾವೆಲ್ಲಿ ಬಂದು ತಲುಪಿದೆವು ಎಂಬುದು ತಿಳಿದಿರಲಿ ಎಂಬುದು ನನ್ನ ವಿಚಾರ. ನೋಡಿಲ್ಲಿ, ನನ...
ಇರಬಹುದು ಭೂಲೋಕದಲ್ಲಿ ನಂದನವನವು; ಬರಬಹುದು ಮುಗಿಲೆಲ್ಲ ನಾಳೆ ನಮ್ಮೆಡೆಗಿಳಿದು; ತರಬಹುದು ಇಂದ್ರನೈರಾವತವ ಮತ್ತೊಂದು ದಿನ ಪಾರ್ಥನಿನ್ನೊರ್ವನು! ಇನ್ನೆಲ್ಲಿ ಕಂಡಿರದು ಇಂಥ ಭೂವೈಕುಂಠ; ಮುನ್ನಡೆದು ಬಂದೆ ಸೀಜರರ ಸಾಲನು ದಾಟಿ ಘನ್ನಮಹಿಮರ ನೋಡಿ ಸಾ...
ಹಂಪಿಯು ಶರಣರಿಗೆ, ಸಂಪಾದ ಪಟ್ಟಣ ಕಂಪಲಿದು ನೆರಳು ಶರಣರಿಗೊ | ತುರುಕರಿಗೆ ಕಂಪನವು ಕೇಳಿ ಎದೆಯಾಗೊ ೧ ಕಂಪಽಲಿ ರಾಯಽಗ, ಹಂಪಿ ವಿರುಪನ ಶಾಪ ದಂಪತಿಗೆ ಬಂತೊ ವನವಾಸೊ । ಕಂಪಲಿಯು ಸಿಂಪಾಗಿ ಸಿಡಿದು ಹಾಳಾತೊ ಬೆಚ್ಚಪ್ಪ ಲಿಂಗಯ್ಯ, ಹೆಚ್ಚಿನಽ ಮಂತ್ರಿ...
“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕ...
೧ ಕವಿಯ ಕನಸಿನ ಎದೆಯ ಪರದೆಯ ಸರಿಸಿ ಝಣರಿಸಿ ಕಂಕಣ; ಗಾಳಿಯಲೆಯಲೆಯೊಡನೆ ನರ್ತನ ಕಾಲ ಗೆಜ್ಜೆಯ ಝಣ್…. ಝಣ ೨ ಮುಂದೆ ಬಾರದೆ ತಡೆದಳಲ್ಲಿಯೆ ಬಾಗಿಲಲಿ ಬಂದಂತೆಯೆ; ದೃಷ್ಟಿಯೂ ನೆಲಕಿಳಿದು ಹೋಯಿತು. ಯಾರು…? ಏನೆನುವಂತೆಯೇ. ೩ ಇಲ್ಲಿ...
ದೊಂಗಲುನ್ನಾರೂಽರೇ-ಜಾಗ್ರತಽ ಎಚ್ಚರಿದೊಂದೇ ಆಗಲಿ ವ್ರತಾ || ಪಲ್ಲ|| ಇನ್ನಾರು ನಿಮ್ಮಽಽ| ಎಚ್ರಾ ಕೊಡಾವ್ರಣ್ಣಾ ಹಾದಿ ಐತೀ ಬಲೂ ಬಲೂ ದೂರಾ ಗಂಟಽ ಬೀಳ್ತಾನ ಅಲ್ಲಿನೆ ಚೋರಾ ನಿದ್ದೀ ಬ್ಯಾಡ್ರೆಪ್ಪಾ, ಬಂದೀತು ಘೋರಾ || ದೊಂಗಲು…. ಕಳ್ಳಾ ಅಂಬ...
“ತಂದೆ ತಾಯಿ, ಮಕ್ಕಳ ಹುಟ್ಟು ಹಬ್ಬ ಆಚರಿಸುವುದು ಏಕೆ”? ಎಂದು ಶಿಷ್ಯ ಗುರುಗಳಲ್ಲಿ ಕೇಳಿದ. “ಅದು ಚೈತನ್ಯದ ಹಬ್ಬ. ಚೈತನ್ಯದ ಬೆಳವಣಿಗೆ, ವೃದ್ಧಿ ಇದರ ಸಂತೋಷವೇ ಹುಟ್ಟು ಹಬ್ಬ” ಎಂದರು ಗುರುಗಳು. “ಅದು ಸಾವಿನಲ್ಲಿ ಕೊನೆ ಮುಟ್ಟುವು...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...








