`ಈ ಮನೆಯ ಬಳ್ಳಿ ನನೆಕೊನೆ ಹೋಗಿ ಮುದ್ದು ಮಗು- ಗಳ ಮಧುರನಗೆಯ ಹೂಬಿಡಲಿ ನರುಗಂಪಿಡಲಿ ತಲೆತಲೆಯ ಹಳನಡತೆ ಬೇರೂರಿ ಪಸರಿಸಲಿ ‘ ಎಂಬ ಕನಸನು ಹೊತ್ತು ನನಸುಗೊಳಿಸಲಿಕೆಂದು ಕಲ್ಪವಲ್ಲರಿಯಂತೆ ತುಂಬಿದುಕ್ಕಂದದಲಿ ನೀನೆಮ್ಮ ಸಂಸಾರದಲಿ ಬೆರೆತು ಬಂದೆಯೌ. ಕೈ ಹಿಡಿದ ನಲ್ಲೆಯನು ಹಡೆದ ತಾಯಾಗಿ ನೀ ಬೆಳೆವೆನ್ನ ಮನ...

ಬಾಲ್ಯ ಕಳೆದೆಯೆಂದು ಲಜ್ಜೆ- ಯೇನು ಕವನ ಕಾಮಿನಿ? ಮೊಗವ ತೋರದೆನಗೆ ನೀನು ಕವಿಸುತಿರುವೆ ಯಾಮಿನಿ ಮೊದಲು ತೊದಲುನುಡಿಯೊಳಾದ- ರೇನು ಭಾವವೆರೆದೆ ನೀ ಸಹಜ ಕಲ್ಪನಾ ವಿಲಾಸ ಹಾಸವಿತ್ತು ಪಡಿದನಿ ಆದರೀಗ ನಿನ್ನ ಸುಳಿವು ವಿರಳವಿರುವುದೀಕಡೆ ನೆಲಸಲೆಂದು ನನ...

ಜೀವನ ಝರಿಯಲ್ಲಿ ಜಾರುತಿಹೆ ನಾನು ಭಾವರಸ ಸುಪ್ತಿಯಲಿ ಸಂದು, ಮನಸಿಜನ ಮರೆಯಲ್ಲಿ, ಸುಳಿಗಾಳಿ ತೆರೆಯಲ್ಲಿ ತೂರುತಿಹೆ ಸಾದರದ ಸವಿಯನೆಣಿಸಿ, ಪ್ರೇಮಮಯ ಪಾವನದಿ ಮೂಡುವಲಿ ಭಾನು, ಬಾಗಿರುವೆ ಮೈದೋರಿ ಬಕುತಿ ತೋರಿ, ಅಭ್ಯುದಯ ಸಂಪತ್ತು, ಹುಮ್ಮಸದ ಹುರುಪ...

ಪ್ರೀತಿಯ ಕಿಟಿ, ಡ್ಯಾಡಿ, ಮಮ್ಮಿ ಮತ್ತು ಮಾರ್‍ಗೊಟ್ ಪ್ರತಿ ಕಾಲುಗಂಟೆಗೊಮ್ಮೆ ಸಮಯ ತಿಳಿಸಲು ಸದ್ದು ಮಾಡುವ ವೆಸ್ಟರ್‌ಟೋರೆನ್ ಗಡಿಯಾರದ ಸದ್ದನ್ನು ಸಹಿಸುತ್ತಿರಲಿಲ್ಲ. ಆದರೆ ನನಗೆ ಅದು ಮೊದಲಿನಿಂದಲೂ ಬಹಳ ಇಷ್ಟ. ಅದರಲ್ಲೂ ರಾತ್ರಿ ಹೊತ್ತು ನಂಬಿ...

ನಿನ್ನ ನದಿಗಳ ಹೆಸರು ನನಗೆ ಗೊತ್ತಿಲ್ಲ, ಓ ಫ್ರಾನ್ಸ್‌! ಆದರೆ ಇಂಥ ಚಲುವಿನ ಹೊನಲೇ ಹರಿದಿಹುದು ನನ್ನ ನಾಡಿನಲ್ಲಿ. ನಿನ್ನ ವನ-ವೃಕ್ಷಗಳ ಹೂ-ಬಳ್ಳಿಗಳ ಪ್ರೀತಿಯನು ಗಳಿಸಿಲ್ಲ ಓ ಫ್ರಾನ್ಸ್‌! ಇವನೆಲ್ಲ ನೋಡಿ ನಾನೊಸೆದ ತರುಲತೆಗಳ ನೆನಪಾಗುವದು ಮಾತ್...

ಬನ್ನೂಯ ಮರಹುಟ್ಟಿ, ಹೊನ್ನಿಽನ ಮಳೆಗರೆದು ಚೆನ್ನಪಟ್ಟಣಕ ಹೊಳೆ ಹರಿದು | ಹಂಪ್ಯಾಗ ಬನ್ನಾಣ ವೀರರು ಗುಟ್ಟ್ಯಾಗೊ ೧ ಹುಕ್ಕ ಬುಕ್ಕರು ಕೂಡಿ, ಚಿಕ್ಕ ರಾಜ್ಯವ ಕಟ್ಟಿ, ಮಿಕ್ಕ್ಯಾರೊ ಸುತ್ತ ನಾಡಾಗೊ | ಹಂಪೆಽಯ ಅಕ್ಕರದಿ ವಿರಪಾಕ್ಷ ವರ ಕೊಟ್ಟೊ ೨ ಲಕ್ಕ...

ಆ ಸಂಗತಿ ನಡೆದು ಒಂದು ವರುಷವಾಗಿ ಹೋದರೂ ವೆಂಕಣ್ಣನ ತಲೆಯಿಂದ ಅದು ತುಸುವೂ ಮಾಸದು. ಏತಕ್ಕೂ ಇಲ್ಲದೆ ಒಂದು ಕೆಟ್ಟ ಹೆಸರು ಬಂದಿತೆಂದು ಅವನು ಬಹಳ ನೊಂದುಕೊಂಡಿದ್ದಾನೆ. ಇಂದಿಗೂ ಆ ಸಂಗತಿಯನ್ನು ಹೇಳಿ ತನಗೆ ಬೊಟ್ಟು ಮಾಡಿ ತೋರಿಸುವವರಿದ್ದಾರೆ; ತಾನ...

೧ ದಿವಸ ದಿವಸ ಕಳೆದು ಇಂದು ವರುಷ ತುಂಬಿ ನಿಂತಿದೆ ನೂರು ನೋವನೆಣಿಸಿ ಗುಣಿಸಿ ಮನಕೆ ಮಂಕು ಕವಿದಿದೆ ಹಗಲು ಇರುಳು ನೆನವೆ ಬುತ್ತಿ ಹೃದಯದೊರತೆಯಲ್ಲ ಬತ್ತಿ ದೇಹವೆಲ್ಲ ಕರಗಿ ಸೊರಗಿ ಬಾಳು ಬೇಸರೆನಿಸಿದೆ. ಜೀವ ಮೌನ ತಾಳಿದೆ. ೨ ಇಂದು ನಗುವೆ ಇಲ್ಲವಾಯ...

ಊರೂರಿಗೆ ಚ್ಯಾ-ಪಾಣಿ ತಂಬಾಕದ ಹೊಗೆಯು. ಬತ್ತಲಾಟ ಕತ್ತಲಾಟ ಸಿನೇಮಾದ ಸಂತೆ ಹರಟಲಿಕ್ಕೆ ಹಾರ ಸುದ್ದಿ ಹಿಂದೆ ಕುಂಟ ಬುದ್ಧಿ ಹೇಸಿ ರೋಸಿ ಓಸಿಯಾಟ ಕಳ್ಳ-ಭಟ್ಟಿ ಕುಡಿತ ಸಿಲೋನ್‌ ಗೀತ ಕಿವಿಗೆ ಹಿತ ಕೈಗೆ ಮೈಗೆ ತಾಲ. ತುಡುಗರಾರೊ? ಲೋಭಿ ಯಾರೂ? ಲಂಚವೆ...

ಒಬ್ಬ ವಯೋವೃದ್ಧ ತನ್ನ ಜೀವಮಾನದಲೆಲ್ಲಾ ಒಂದು ಕರಿಯ ಬೆಣಚು ಕಲ್ಲನ್ನು ತುಂಬಾ ಪ್ರೀತಿಸುತ್ತಿದ್ದ. ಅವನು ಅದನ್ನು ಸದಾ ಕಾಲವೂ ಕೈಯಲ್ಲಿಟ್ಟು ಕೊಂಡಿರುತ್ತಿದ್ದ. ಕೈಯಲ್ಲಿ ಕೆಲಸವಿದ್ದಾಗ ಅದನ್ನು ಬಾಯಿಯಲ್ಲಿ ಹಾಕಿಕೊಂಡು ದವಡೆಯಿಂದ ದವಡೆಗೆ ಬದಲಾಯಿ...

ನೇಸರು ಮೂಡಿತು ಮೂಡಲಲಿ ತೇಜೋವಧೆಯೆದೆಯಾಳದಲಿ ನಗೆ ಮಿನುಗಿತು ಹೊಸ ಮೊಗದಲ್ಲಿ ಭಾವೋನ್ಮೀಲಿತ ಸಿಡಿಲಲ್ಲಿ! ಕನಸಿನ ಕಣ್ಣಿನ ಬಣ್ಣದಲಿ ಮನಸಿನ ಮಣ್ಣಿನ ಹಣ್ಣಿನಲಿ ಕಾಣುವ ಕಾಣದ‌ ರೂಪಿನಲಿ ಬಾಣದ ಭೀಕರ ವೇಗದಲಿ ಹಿಡಿಯಲು ನೆಗೆವುದು ನೆಗೆಯಲು ಸಿಡಿವುದು...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...