ಸಾವಿನ ಕಪ್ಪು ಛಾಯೆ

ಕಾರ್ಖಾನೆಗಳಿಂದ ಹೊರ ಬರುವ ಹೊಗೆ, ವಾಹನಗಳಿಂದ ಬರುವ ಪೆಟ್ರೋಲಿನ ವಾಸನೆಗೆ ಉಸಿರುಗಟ್ಟಿಸುವ ಧಗೆ ದುರ್ಗಂಧದ ಅಲೆಗೆ ಹೆದರಿ ಓಡೋಡಿ ಸುಸ್ತಾಗಿ ಶುದ್ಧ ಗಾಳಿ ಸಿಗದೆ ಕಲುಷಿತಗೊಳಿಸಿದ ಕೃತಕ ನಾಗರೀಕತೆಯ ರಣ ಹದ್ದಿನ ಗೂಡಿಗೆ ವಿಧಿಯಿಲ್ಲದೇ...

ಗರತಿ

ಮಂಗಳ ಸೂತ್ರಕ್ಕೆ ಮೂರ್‍ಹೊತ್ತು ಪೂಜಿಸಿ ಕಣ್ಣಿಗೊತ್ತಿಕೊಳ್ಳುವ ನಮ್ಮೂರ ಗರತಿ ಗಂಡನಿಲ್ಲದ ಹೊತ್ತು ಪಕ್ಕದ ಮನೆಯವನ ಒಳಗಿಟ್ಟುಕೊಂಡು ಬಾಗಿಲಿಗೆ ಚಿಲಕ ಜಡಿದದ್ದು ಕಂಡು ಬೆರಗಾಗಿ ನಿಂತೆ *****

ಪರಿಸರ ಗೀತೆ

ಬದುಕಿನ ದೀರ್ಘ ಪಯಣದಲ್ಲಿ ಹೊಳೆದಂಡೆಗೆ ಕುಳಿತು ನೀನು ಯೋಚಿಸುವೆ ಏನನ್ನು? ನೀನೆಲ್ಲಿ ಹೋದರೂ ಹಿಂದೆಯೇ ಬರುತ್ತವೆ ನಿನ್ನ ಭೂತದ ನೆನಪುಗಳು. ಘೋರ ರಾತ್ರಿ ಕಳೆದು ಮುಂಜಾವಿನ ನಸುಕು ನಿನ್ನ ಗೋಳನ್ನು ಮೀರಿ ಉದಯಿಸುತ್ತಿರುವ ಸೂರ್ಯ...

ಕೈಗಾರೀಕರಣ ಮತ್ತು ಸೈತಾನ

ನೀವು ಕೇಳುತ್ತೀರಿ ವಿಂಡ್ಸರ್ ಮ್ಯಾನರ್ ರಸ್ತೆ ಬದಿಯಲ್ಲಿರುವ ಡೇರಿ ಹೂಗಳ ಮೇಲೆ ಕಪ್ಪು ಎಣ್ಣೆ ಸವರಿದವರ್‍ಯಾರೆಂದು? ಗುಲಾಬಿ, ಹೂಗಳ ಬಣ್ಣ ಕಪ್ಪಾಗಿರುವುದು ಯಾಕೆಂದು ವಿಸ್ತರಣೆಯ ನೆಪದಲ್ಲಿ ಕೈಗಾರಿಕೀಕರಣ ಶಾಸ್ತ್ರದಲ್ಲಿ ಹುದುಗಿರುವ ಸಂಸ್ಕೃತಿ ಇದುವೆಯೇ? ಎಂದು....

ದುರಂತ

ವರ್ಷಗಳೇ ಕಳೆದವು ಭೂಪಾಲದ ಬಿಕ್ಕುಗಳು ನಿಂತು ಹೋಗಲಿಲ್ಲ. ರೋದನ ಶಾಂತವಾಗಲಿಲ್ಲ. ಕಾರ್ಖಾನೆಗಳು ಉಗುಳಿದ ಕಪ್ಪನೆಯ ವಿಷಗಾಳಿ ಕೊಲೆಯಾಯ್ತು ಊರೆಲ್ಲಾ ಸ್ಮಶಾನವಾಯ್ತು. ರಹಸ್ಯ ರಾತ್ರಿಯಲಿ ಕರಾಳ ಕೈಗಳು- ಛಸನಾಲಾ ದುರಂತದ ಗಣಿಯಿಂದ ಇಣುಕುತ್ತಿರುವ ಅಸಹಾಯಕ ನೋಟಗಳು...

ಹೊಸಕಿದ ವಸಂತಗಳು

ಕಣ್ಣೀರು ಬತ್ತಿಹೋದ ನನ್ನ ಗುಳಿಬಿದ್ದ ಕಣ್ಣುಗಳಲ್ಲಿ ನೋವಿನ ಸೆಳಕು ಏಕೆಂದರೆ ಮೊಗ್ಗಗಳು ಬಿರಿವಾಗ ಹಸಿರುಟ್ಟು ನಲಿವಾಗ ನನ್ನ ಸುಕ್ಕುಗಟ್ಟಿದ ಕಪ್ಪು ಮುತ್ತಿದ ಕಣ್ಣುಗಳು ಯಾತನೆಯಿಂದ ಹನಿಗೂಡುತ್ತಿದ್ದವು. ಎಣ್ಣಿಗಟ್ಟಿ ಮಸುಕಾದ ಭಾರವಾಗಿ ಜೋತುಬಿದ್ದ ನನ್ನ ಮೂಗುತಿ...

ರೂಪಕನ್ವರ

ಭಾರತ ಮಾತೆಯೇ ನಿನ್ನ ಕರುಳ ಕುಡಿಗಳು ನಿನ್ನದೇ ಮಾಂಸ ಹಂಚಿಕೊಂಡಿರುವ ತುಣುಕುಗಳನು ಬೆಂಕಿಗೆ ದೂಡಿ, ಸತಿಯಾಗಿಸುವದ ಕಂಡು ಸುಮ್ಮನೇಕಿರುವೆ? ಪತಿಸತ್ತರೆ ಸತಿ ಚಿತೆಯೇರಬೇಕು ಬದುಕಿರುವಾಗಲೇ ಬದುಕನ್ನು ಜಿವುಟಿ ಕರಕಾಗಿಸಿದ ಗಂಡು ಸತ್ತ ಮೇಲೂ ಅವಳ...

ವಿಷವೃಕ್ಷ

ಕವಲು ಕವಲಾಗಿ ಚಾಚಿ ಕೊಂಡಿರುವ ಆಲದ ಮರ ವಂಶ-ವೃಕ್ಷಗಳ ಬಿಡುವಂತೆ ಎಷ್ಟೋ ದುಷ್ಟ ಶಕ್ತಿಗಳು ಹುಲುಸಾಗಿ ಈ ಭೂಮಿಯಲಿ ಬೇರು ಬಿಟ್ಟು ಬೆಳೆಯುತ್ತಿವೆ. ಆಳವಾಗಿ ಬೇರು ಬಿಡುತ್ತ ಸತ್ವಹೀರಿ ಬೆಳೆಯುತ್ತಿರುವ ಕೋಮುವಾದಿ ವಿಷವೃಕ್ಷ ತನ್ನನ್ನೇ...

ಸ್ವಾತಂತ್ರ ಗೀತೆ

ನನ್ನ ದೇಶದ ವಿಶಾಲ ಹೂದೋಟದಿಂದ ವಿವಿಧ ಹೂಗಳ ಒಂದುಗೂಡಿಸಿ, ಒಂದು ಹೂದಾನಿ ಅಲಂಕರಿಸಿ, ಮೇಜಿನ ಮೇಲಿಟ್ಟು ಜಗತ್ತಿಗೇ ತೋರಿಸಿ ಹೇಳಿದೆ- ನೋಡಿ ಇಲ್ಲಿ ಕಾಶಿ, ಮಥುರಾ, ಅಜಮೀರ, ಅಮೃತಸರ್ ಕಾಶ್ಮೀರ್, ಕನ್ಯಾಕುಮಾರಿಯ ಸುಂದರ ಹೂಗಳಿವೆ-...

ಮುಮ್ತಾಜಳ ಮಹಲು

ನನ್ನ ಅಖಂಡ ಪ್ರೀತಿಯನ್ನು ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು ತೂಗಬೇಡ ಮುಮ್ತಾಜ್ ದೌಲತ್ತಿನ ಆಸರೆಯಿಂದ ನಿನ್ನ ಜಹಾಂಪನಾಹ್ ನಿನಗೊಂದು ಇಮಾರತ್ತು ಕಟ್ಟಿಸಿ, ಅದರಲ್ಲಿ ನಿನ್ನ ಗೋರಿ ಮಾಡಿರಬಹುದು ಆದರೆ ನನ್ನ ಪ್ರೀಯತಮನ ಹೃದಯಲೇ ಕಟ್ಟಿದ ಭಾವ...