ವರ್ಷಗಳೇ ಕಳೆದವು
ಭೂಪಾಲದ ಬಿಕ್ಕುಗಳು
ನಿಂತು ಹೋಗಲಿಲ್ಲ.
ರೋದನ ಶಾಂತವಾಗಲಿಲ್ಲ.
ಕಾರ್ಖಾನೆಗಳು ಉಗುಳಿದ
ಕಪ್ಪನೆಯ ವಿಷಗಾಳಿ
ಕೊಲೆಯಾಯ್ತು ಊರೆಲ್ಲಾ
ಸ್ಮಶಾನವಾಯ್ತು.
ರಹಸ್ಯ ರಾತ್ರಿಯಲಿ
ಕರಾಳ ಕೈಗಳು-
ಛಸನಾಲಾ ದುರಂತದ
ಗಣಿಯಿಂದ ಇಣುಕುತ್ತಿರುವ
ಅಸಹಾಯಕ ನೋಟಗಳು
ಬೇರುಗಳು ಪಸರಿಸಿ
ಆಳದಲ್ಲಿ ಹರಿಬಿಟ್ಟು
ಅಸನ್ಸೂಲ್ ಗಣಿಯಲ್ಲಿ
ಉಸಿರುಗಟ್ಟಿ ಬೆಂದುಹೋದ
ಸಮಾಧಿಯಾದ ಜೀವಗಳು
ಸಂಸ್ಕಾರವಿಲ್ಲದೇ
ಕೊನೆಯಾದ ದೇಹಗಳು
ಶ್ರಮಿಕರ ರಕ್ತದಿಂದ ತೋಯ್ದ
ಅಸ್ತಿಗಳನ್ನು ಬಚ್ಚಿಡುವುದೆಲ್ಲಿ?
ಪರಿಹಾರ ಕೊಡುವುದಿರಲಿ
ಆಸ್ತಿಯನ್ನು ದಕ್ಷಿಸಿಕೊಳ್ಳಲು
ಶವಗಳ ರಾಶಿಗಳ ಮೇಲೆ
ಶಾಪಗ್ರಸ್ತ ಅಹವಾಲುಗಳಿಗೆ
ಕೋರ್ಟಿನ ಚೌಕಟ್ಟಿನಲ್ಲಿ
ನ್ಯಾಯ ಹೇಗೆ
ಪಡೆಯುವಿರಿ ?
*****