ನನ್ನ ದೇಶದ ವಿಶಾಲ ಹೂದೋಟದಿಂದ
ವಿವಿಧ ಹೂಗಳ ಒಂದುಗೂಡಿಸಿ,
ಒಂದು ಹೂದಾನಿ ಅಲಂಕರಿಸಿ,
ಮೇಜಿನ ಮೇಲಿಟ್ಟು
ಜಗತ್ತಿಗೇ ತೋರಿಸಿ ಹೇಳಿದೆ-
ನೋಡಿ ಇಲ್ಲಿ ಕಾಶಿ, ಮಥುರಾ,
ಅಜಮೀರ, ಅಮೃತಸರ್
ಕಾಶ್ಮೀರ್, ಕನ್ಯಾಕುಮಾರಿಯ
ಸುಂದರ ಹೂಗಳಿವೆ-
ಮಂದಿರವೂ ಇಲ್ಲಿದೆ-
ಮಜ್ಜಿದವೂ ಇಲ್ಲಿದೆ ಮತ್ತೇ
ತಾಜಮಹಲಿನ ನೆರಳುಗಳೂ ಇಲ್ಲಿವೆ-
ಪೈಗಂಬರರ ಪರಿಛಾಯೆ-
ರಾಮನ ನಾಮವೂ ಇಲ್ಲಿದೆ
ಹಿಂದು-ಮುಸಲ್ಮಾನರಿಬ್ಬರೂ
ಭಾರತಾಂಬೆಯ ಎರಡು ಕಣ್ಣುಗಳು,
ಅವರ ರಕ್ತದ ಓಕುಳಿ
ಅಶುಭದ ಸಂಕೇತ;
ಉನ್ನತ ಹಿಮಾಲಯದ ಎತ್ತರ
ಜಗತ್ತಿನ ದೃಷ್ಟಿಯಲ್ಲಿ
ಕುಬ್ಜವಾಗಲೆಂದೂ ಬಿಡೆವು ನಾವು.
ಮಾನವೀಯ ಮೌಲ್ಯಗಳು
ನಾಶವಾಗುವದನೆಂದೂ ಸಹಿಸೆವು ನಾವು
ದೇಶದ ಸರಹದ್ದುಗಳಿಗೆ
ಮಮತೆಯಿಂದ ಚುಂಬಿಸಿ,
ಹರಡಿದ ನಮ್ಮ ಕನಸುಗಳನು
ಒಟ್ಟುಗೂಡಿಸುವೆವು ನಾವು.
ಪರದೇಶಿ ಹದ್ದುಗಳ ನೆರಳು
ಪವಿತ್ರ ಭಾರತದ ಮೇಲೆ
ಎಂದಿಗೂ ಸಹಿಸೆವು ನಾವು.
ಸ್ನೇಹದ ಹಸ್ತ ನೀಡದೇ
ಗುಲಾಮಿಯ ಕೋಳ ತೊಡಿಸುವ
ಸಾಮ್ರಾಜ್ಯ ಶಾಹಿಗಳ ನೀತಿಗೆ
ಪಾಠ ಕಲಿಸುವೆವು ನಾವು
ಗುಲಾಮಗಿರಿಯ ಕೊಳವನು,
ಕತ್ತರಿಸುವ ಖಡ್ಗವ ವಾಗುವೆವು ನಾವು.
ಭಾರತದ ಸ್ವತಂತ್ರ ಸೂರ್ಯನ
ಪ್ರಖರ ತೇಜಸ್ಸನ್ನು ಜಗತ್ತಿಗೇ
ತೆಗೆದು ತೋರುವೆವು ನಾವು.
ಸ್ವಾತಂತ್ರ ಗೀತೆಯನು
ಸಂಭ್ರಮದಿಂದ ಹಾಡುವೆವು ನಾವು.
*****