ಕಚ್ಚಾ

ಕಚ್ಚಾ ಸ್ವಾಮೀ ಬಹಳ ಕಚ್ಚಾ ಕಚ್ಚಾ ಬರೀ ಕಚ್ಚಾ ತೆರೆದು ನೋಡಿದರೂ ಕಚ್ಚಾ ಅರೆದು ನೋಡಿದರೂ ಕಚ್ಚಾ ಕೊರೆದು ನೋಡಿದರೂ ಕಚ್ಚಾ ಬರೆದು ನೋಡಿದರೂ ಕಚ್ಚಾ ಆಕಾಶ್ದಾಗೆ ಚುಕ್ಕೀ ಎಣಿಸಾಕ ಸೃಷ್ಟೀ ಚೆಂದಾ ಬಣ್ಣಿಸಿ...

ಇಲ್ಲವಲ್ಲಾ

ಹಾಲಿದ್ದರೂ ಪಾತ್ರೆ ಇಲ್ಲವಲ್ಲಾ ಪಾತ್ರೆ ಇದ್ದರೂ ಗಾತ್ರವಿಲ್ಲವಲ್ಲಾ ಸಕಲ ಸಂಬಾರವಿದೆ ಅಡಿಗೆಯವರಿಲ್ಲ ಒಲೆಯೇಸೋ ಇದೆ ಉರಿಯೇ ಇಲ್ಲವಲ್ಲಾ. ಕಟ್ಟಿಗೆಗಳಿದ್ದರೂ ಕಡ್ಡಿ ಇಲ್ಲವಲ್ಲಾ ಭಾವಗಳಿದ್ದರೂ ಬಂಥುರ ಇಲ್ಲವಲ್ಲಾ. ರಾಗವಿದ್ದರೂ ಮಧುರ, ತಾಳತಪ್ಪಿತಲ್ಲಾ ಶಕ್ತಿ ಇದ್ದರೂ ಶೀಲವಾಗಿಲ್ಲವಲ್ಲಾ....

ತೊಟ್ಟು ಕಳಚಿತು.

ಹಣ್ಣೊಂದು ಇತ್ತು ಮರದಿಂದ ಬಿತ್ತು ಮಣ್ಣಿನಲಿ ಬಿದ್ದು ಹೋಯ್ತು ಸಣ್ಣಾಗಿ ಸೋತು ಸುದ್ದಾಗಿ ಮತ್ತೆ ಕಣ್ಣಿನಲಿ ನೀರು ಬಂತು ಬೆಳೆದಂತೆ ಕಾಯಿ ತಾ ಭಾರವಾಯ್ತು ಬೆಳೆದದ್ದೆ ಮುಳುವದಾಯ್ತು ತಳೆದೀತೆ ಭಾರ ತೆಳ್ಳನೆಯ ತುಂಬು ಕಳವಳದಿ...

ರೋಗಣ್ಣ

ಆಗಾಗ ಬರ್ತೀರು ರೋಗಣ್ಣಾ ನಿಜವಾದ ಗುರುವೆ ನೀನಾಗಣ್ಣಾ ಜೀವದಾಗ ಭಯವನ್ನು ಹುಟ್ಸೀ ಮನಸ್ಸನ್ನು ದೇವ್ರಕಡೆ ಮುಟ್ಸೀ ಮೈಯನ್ನು ಮೆತ್ತಗೆ ಮಾಡ್ತಾ ಮತಿಯನ್ನ ಜೊತೆಯಲ್ಲಿ ಕಾಡ್ತಾ ಹಮ್ಮನ್ನ ಬಿಮ್ಮನ್ನ ಕಳದೂ ಮನಸ್ಸಾಗೆ ಜೀವಸೂತ್ರ ಹೊಳದು ಮುಂದೋಡೋ...

ಎಲೆ ಮಾನವಾ

ಎಲೆ ಮಾನವ ನವಮಾನವ ಆಥುನಿಕತೆ ದಾನವಾ ಎತ್ತ ನಿನ್ನ ಪಯಣ ಮತಿಯ ಮನವ ಮರೆತ ಮಾನವಾ ||೧|| ದೇವನೊಂದು ಸೃಷ್ಟಿಸಿರಲು ನೀನೆ ಬೇರೆ ಗೈಯುವೇ ನಿನ್ನ ನೀನು ಕಾಯ್ದುಕೊಳಲು ನಿನಗೆ ನೀನೆ ಸಾಯುವೇ ||೨||...

ಅರವಿಂದ

ಅರವಿಂದ ಅರವಿಂದ ನಂದನದ ಕಂದ ಎಲ್ಲರೆದೆ ಬೆಳಗಿಸುವ ಹೃದಯಾರವಿಂದ ಬಾಲ್ಯವನು ಕಳೆದದ್ದು ಬಿಳಿಯ ದೇಶದಲಿ ಯೌವನವು ಬೆಳಗಿದ್ದು ಭಾರತಕೆ ಮರಳಿ ಚಿಕ್ಕಂದಿನಿಂದಲೇ ಮೇಧಾವಿತನವು ಅಚ್ಚರಿಯ ಮೂಡಿಸಿತು ಅಂತಃಚೇತನವು ತಂದೆ ಬಿಳಿಯರ ರೀತಿ ತಾಯಿ ಭಾರತ...

ಸಲಹಿದ ಸಸಿ

ತೋಟಗಾರನು ನೀರನ್ನೆರೆಯುತ ಸಸಿಯನು ಸಲಹಿದ ಮನವಿಟ್ಟು ಸಸಿಯು ಸ್ಥಳಾಂತರ ಹೊಂದುತ ಬೆಳೆಯಿತು ಬೆಳೆಸಿದ ಆತನ ನೆನಪಿಟ್ಟು ಯಾವ ಯುವುದೋ ನೀರನು ಕುಡಿಯುತ ಗಿಡವದು ಬೆಳೆಯಿತು ಮರವಾಗಿ ಮಾಲಿಯು ಕಂಡನು ತನ್ನಯ ಗಿಡವನು ಪ್ರೇಮದಿ ತಬ್ಬಿದ...

ಬಿಳಿಸೀರೆಯವಳು

ಬಿಳಿಸೀರೆ ಮುತ್ತೈದೆ ನಿನಗೇನು ಬಂದೈತೆ ಮನೆ ಬಿಟ್ಟು ಹೊರಗೇ ಹೋಗ್ತಿ ಯಾಕೆ ನಿನ್ನಿಂದ ಮನಿಚೆಂದ ಮನಿಬಾಳು ಆನಂದ ಪರದೇಶಿ ಮಾಡ್ಬಿಟ್ಟು ಹೋಗ್ತಿ ಯಾಕೆ ಆಕಾಶಕ್ಕೆ ಚಂದ್ರಾಮಾ ಭೂಷಣಾಗಿ ಹೊಳಿವಂತೆ ಈ ಮನಿಯ ನೀನೇs¸ ಬೆಳಗುವಾಕೆ...

ಬಯ್ಯುವಿ ಯಾಕೆ

ಮಣ್ಣು ಮಣ್ಣೆಂದು ಹಳಿದರೆ ಬಂತೆ ಎಲ್ಲಿಂದ ಮರ ಹುಟ್ಟಿ ಬೆಳೆಯಿತಯ್ಯಾ ಸಾವು ಸಾವೆಂದು ಅಂಜೀಕೆ ಯೇಕೆ ಜೀವವು ಹುಟ್ಟಿದೆ ಸಾವಿನಿಂದಯ್ಯ || ನಿದ್ದೆ ಮಬ್ಬಂತಾ ಗೊಣಗುವಿಯಾಕೆ ನಿದ್ದೇನೆ ಇಲ್ದಂಥ ಎಚ್ಚರೆಂತು ದೌರ್ಬಲ್ಯ ದೌರ್ಬಲ್ಯ ಎಂದೇಕೆ...

ಚೈತನ್ಯ ಚಿಮ್ಮಿದಾಗ

ಎಲ್ಲಿಂದ ಬರ್ತೀಯೊ ಯಾವ ಗಳಿಗೆ ಬರ್ತೀಯೊ ಯಾವ್ಮಾತ್ನಾಗೆ ಹೊಳಿತಿಯೊ ತಿಳಿಯದಲ್ಲಾ ಹೊರಗೆಲ್ಲ ಹುಡುಕಿದ್ದೆ ಹುಡುಹುಡುಕಿ ದಣಿದಿದ್ದೆ ಯಾವಾಗ್ಲೋ ಒಳಬಂದು ಕುಂತಿಯಲ್ಲಾ ||೧|| ಹೆಣದಾಗೆ ಚೈತನ್ಯ ಮೈತುಂಬಿ ನಿಂತಂಗೆ ತುಂಬ್ಕೊಂಡೆ ಬಂದಿತ್ತು ಯಾವ್ದೋ ಶಕ್ತಿ ಬರಡಾದ...