ಬಿಳಿಸೀರೆ ಮುತ್ತೈದೆ ನಿನಗೇನು ಬಂದೈತೆ
ಮನೆ ಬಿಟ್ಟು ಹೊರಗೇ ಹೋಗ್ತಿ ಯಾಕೆ
ನಿನ್ನಿಂದ ಮನಿಚೆಂದ ಮನಿಬಾಳು ಆನಂದ
ಪರದೇಶಿ ಮಾಡ್ಬಿಟ್ಟು ಹೋಗ್ತಿ ಯಾಕೆ
ಆಕಾಶಕ್ಕೆ ಚಂದ್ರಾಮಾ ಭೂಷಣಾಗಿ ಹೊಳಿವಂತೆ
ಈ ಮನಿಯ ನೀನೇs¸ ಬೆಳಗುವಾಕೆ
ಗ್ಯಹಲಕ್ಷ್ಮಿ ನೀ ಹೋದ್ರೆ ದಾರಿದ್ರ್ಯ ತುಂಬ್ತೈತೆ
ಹೊರಗ್ಹೋಗಿ ನೀ ಹ್ಯಾಂಗೆ ಉಳಿಯುವಾಕೆ
ನೀನಿದ್ರೆ ಮನಿಯಾಗೆ ಧನಧಾನ್ಯ ತುಂಬ್ತಾವೆ
ಬಾವ್ಯಾಗೆ ಗಂಗಮ್ಮ ತುಳುಕುವಂಗೆ
ನೀನಂದ್ರೆ ಶಕ್ತೀ ನೀನಂದ್ರೆ ಮುಕ್ತೀ
ಆನಂದ ರಸ ತಾನು ಹರಿಯುವಂಗೆ
ಯಾವ ಪೀಡೆ ಬಡಕೊಂತ್ಯೊ
ಯಾವ ಮಾರಿ ಹೊಕ್ಕೂಂತ್ಯೊ
ದೆವ್ವ ಬಡದೋರಂಗೆ ನೀ ಹೋಗ್ತೀಯಾ
ನನಕೈಯಾಗೇನಿಲ್ಲ ನಿನ್ಹಿಡಿದು ನಿಲ್ಲಸಾಕೆ
ಜಲಪಾತದೆದುರಿಗೆ ಮೀನಾಗ್ತೀಯ
ನಿನ್ನಿಂದ ಏಸ್ಟೊಟ್ಲ ತುಂಬಿಕೊಂಡು ಹಾಡಬೇಕೊ
ವಂಶದ ಬಳ್ಳಿಯೆಷ್ಟು ಹಬ್ಬಬೇಕೊ
ಏಸ್ಬಾಳು ಬಂಗಾರ ಆಗ್ಬೇಕೊ ಬೆಳಿಬೇಕೊ
ಅದ ಬಿಟ್ಟ ನೀ ನನ್ನ ದಬ್ಬಬೇಕೊ?
***