ಆಗಾಗ ಬರ್ತೀರು ರೋಗಣ್ಣಾ
ನಿಜವಾದ ಗುರುವೆ ನೀನಾಗಣ್ಣಾ
ಜೀವದಾಗ ಭಯವನ್ನು ಹುಟ್ಸೀ
ಮನಸ್ಸನ್ನು ದೇವ್ರಕಡೆ ಮುಟ್ಸೀ
ಮೈಯನ್ನು ಮೆತ್ತಗೆ ಮಾಡ್ತಾ
ಮತಿಯನ್ನ ಜೊತೆಯಲ್ಲಿ ಕಾಡ್ತಾ
ಹಮ್ಮನ್ನ ಬಿಮ್ಮನ್ನ ಕಳದೂ
ಮನಸ್ಸಾಗೆ ಜೀವಸೂತ್ರ ಹೊಳದು
ಮುಂದೋಡೋ ವೇಗವ ಕೆಡಿಸಿ
ಕುಳ್ಡಾದ ಕಣ್ಣುಗಳ ಬಿಡಿಸಿ
ಆಗಾಗ ಕರಿಯಣ್ಣ ಮುಂದೆ
ಕರ್ರಗೆ ನಿತ್ಕೊಂಡ ಅಂದ್ರೆ
ಪಾಪಗಳ ಸಾಲಕ್ಕೆ ಬಡ್ಡಿ
ಕೇಳ್ತಾನೆ ಪ್ರಾಣಾನೇ ಒಡ್ಡಿ
ಸಂಕ್ಟ ಬಂದ್ರೆ ವೆಂಕ್ಟ್ರಮಣ ನಿಜವೇ
ಇಲ್ಲಿದ್ರೆ ಮನುಷ್ಯಂದೆ ಮಜವೆ
***