ಎರಡು ವರ್ಷಗಳಾದ ಮೇಲೆ ಜೀನ್ ವಾಲ್ಜೀನನನ್ನು ಅಪರಾಧಿ ಯಾಗಿ ಸೇರಿಸಿದ್ದ ಹಡಗು ಟೂಲಾನ್ ಪಟ್ಟಣದ ರೇವಿಗೆ ಬಂದು ನಿಂತಿತು. ನಾವಿಕರಲ್ಲಿ ಒಬ್ಬನು ಹಡಗಿನ ಪಟವನು ಸುರುಳೆ ಸುತ್ತುತ್ತಿರುವಾಗ ಮೇಲಿನಿಂದ ಜಾರಿಬಿದ್ದು ಕೈಗೆ ಸಿಕ್ಕಿದ ಒಂದು ಹಗ್ಗವನ್ನು ...
ರಾಮ ನಿನ್ನ ನೆನೆದು ನೆನೆದು ನಾನು ತಣ್ಣನೆ ನೆಂದಿರುವೆ ನಿನ್ನ ಕೃಪಾ ಬಿಸಿ ತಾಟುವುದೆಂದು ನಿನ್ನ ಅಡಿದಾವರೆಯಲಿ ಬಂದಿರುವೆ ರಾಮ ನಿನ್ನ ಭಜಿಸಿ ಭಜಿಸಿ ನಾನು ಆಸ್ತಿ ನಾಸ್ತಿಗಳಲಿ ಭಾಜಿಸಿರುವೆ ನಿನ್ನ ಸಾಕ್ಷಾತ್ಕಾರದ ಬೆಳದಿಂಗಳಿಗಾಗಿ ನಿತ್ಯ ನಾನು ...
ಕನಸೊಂದ ಮುಂಜಾವದಲಿ ಕಂಡೆನೇನೆಂಬೆ ನರವಟಿಗೆಯಿಂದ ಸದ್ದೊಂದಾದುದಿಂತು : “ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ ನಿಮ್ಮೊಡಲ ಜೀವರಸವಿಮರದೀಮುನ್ನ.” *****...
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯ್ತ್ತು ತುಂಬಿ ನೋಡಾ ಆತುಮ ತುಂಬಿ ತುಂಬಿ ನೋಡಾ ಪರಮಾತುಮ ತುಂಬಿ ತುಂಬಿ ನೋಡಾ ಗುಹೇಶ್ವರನೆಂಬ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ ಹೂವಿಗೆ ದುಂಬಿ ಎರಗಿದರೆ ದುಂಬಿ ಮಧುವನ್ನು ಹೀರಿ ವಿಕಾಸಗೊಳ್ಳ...
ವರ್‍ಷದ ನಿಶಿಯೊಳು ಮುಗಿಲಿನ ಮರೆಯೊಳು ಇಣಿಕುವ ಚಂದ್ರನ ಜೊನ್ನದೊಲು, ಹರ್‍ಷವು ಮೂಡಿತು ಚಿಂತೆಯ ಸದನದಿ ಹೊಳೆಯಲು ಆಂಡಾಳಿನ ನಗೆಯು. ಜಾಜಿಯ ಮುಗುಳನು ಮುತ್ತಿಡೆ ನುಸುಳಿದ ಕಿರಣದ ಚೆಲುವಿನ ಹೊಸ ನಗೆಯು, ವ್ಯಾಜವೆ ಇಲ್ಲದೆ ಸೋಜಿಗಪಡುವಾ ಬಲು ಬಲು ಸೊ...
ಸರಕ್ಕ ಸರಿತಲ್ಲ ಬೀಗರ ಸುರಪ್ಪ ತಿಳಿತಲ್ಲ ||ಪ|| ಆನೀ ಬರತಾವಂತ ಆರಽ ಭಣವೀ ಕೊಂಡ| ಆನೆಲ್ಲಿ ನಿನ್ಮು ದಳವೆಲ್ಲಿ | ಸರಕ್ಕ ||೧|| ಆನೆಲ್ಲಿ ನಿಮ್ಮ ದಳವೆಲ್ಲಿ ಬೀಗಾ| ಬೋಳ್ಹೋರಿ ಮ್ಯಾಲ ಬರತಾರ | ಸರಕ್ಕ ||೨|| ಒಂಟೀ ಬರತಾವಂತ ಎಂಟಽ ಭಣವೀ ಕೊಂಡ| ಒ...
ಒಮ್ಮೆ- ಭೋಜರಾಜ ಮಹಾರಾಜ, ‘ಜೀವನದಲ್ಲಿ ಯಾವುದು ಶ್ರೇಷ್ಠ?’ ಎಂದು ಅಲ್ಲಿದ್ದ ಆಸ್ಥಾನಿಕರೆನ್ನೆಲ್ಲ ಕೇಳುತ್ತಾ ಕುಳಿತರು. ಮೊದಲು ಕವಿಯೊಬ್ಬ ಎದ್ದು ನಿಂತು- ‘ಮಹಾಪ್ರಭು… ಮಾನವ ಜನ್ಮ ಬಹು ದೊಡ್ಡದು. ಆದ್ದರಿಂದ ಜೀವನದಲ್ಲಿ ಹೆಂಡತಿಮಕ್ಕಳು ...
ಸಾಕು ತಾಯಿ, ಹಾಲು ನಿನ್ನ ಎದೆಯ ಹಾಲು ಬೇಡ ಇನ್ನು ರಕ್ತ ನಿನ್ನ ಒಡಲ ರಕ್ತ ನನ್ನ ತಪ್ಪು ನೂರು ನಿನ್ನ ಕೋಪಕಶಕ್ತ ಬಗೆದೆ ನಿನ್ನ ಒಡಲ ಗಣಿಯ ಹೆಸರಿನಲ್ಲಿ ಜೊತೆಗೆ ಕುಡಿದೆ ರಕ್ತ ತೈಲ ರೂಪದಲ್ಲಿ ನಿನ್ನ ಕರುಳ ಸವರಿ ಮಾಡಿದೆ ನಾ ಹೆದ್ದಾರಿ ಇಂಥ ಪಾಪ ...
ಮೂಲ: ವಿ ಎಸ್ ಖಾಂಡೇಕರ ಆಕಾಶವು ಸೂರ್‍ಯನು ಕೂಡ ಕಾಣದಷ್ಟು ಕಾರ್‍ಮೋಡಗಳಿಂದ ತುಂಬಿ ಹೋಯಿತು. “ಏನು ಭಯಂಕರ ಸಂಹಾರವಿದು!” ಎಂದು ಆಕಾಶವು ಕಣ್ಣು ಮುಚ್ಚಿಕೊಂಡಂತೆ ಭಾಸವಾಗುತ್ತಿತ್ತು. ಟಪಟಪ ಮಳೆಯ ಹನಿಗಳು ಉದುರತೊಡಗಿದವು. ರಾಜ ಕವಿಗ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...









