ರಾಮ ನಿನ್ನ ನೆನೆದು ನೆನೆದು
ನಾನು ತಣ್ಣನೆ ನೆಂದಿರುವೆ
ನಿನ್ನ ಕೃಪಾ ಬಿಸಿ ತಾಟುವುದೆಂದು
ನಿನ್ನ ಅಡಿದಾವರೆಯಲಿ ಬಂದಿರುವೆ
ರಾಮ ನಿನ್ನ ಭಜಿಸಿ ಭಜಿಸಿ
ನಾನು ಆಸ್ತಿ ನಾಸ್ತಿಗಳಲಿ ಭಾಜಿಸಿರುವೆ
ನಿನ್ನ ಸಾಕ್ಷಾತ್ಕಾರದ ಬೆಳದಿಂಗಳಿಗಾಗಿ
ನಿತ್ಯ ನಾನು ಕೊರಗುತ್ತಿರುವೆ
ರಾಮಾ ನಿನ್ನ ಧ್ಯಾನಿಸಿ ಧ್ಯಾನಿಸಿ
ನಿನ್ನ ಮರೆತು ಧ್ಯಾನಿಸ್ಥರಾಗಿರುವೆ
ನಿನ್ನ ದರುಶನದ ಭಾಗ್ಯಕ್ಕಾಗಿ
ಚಾತಕ ಪಕ್ಷಿಯಂತೆ ಕಾಯುತ್ತಿರುವೆ
ರಾಮಾ ನಿನ್ನ ಕಾಣಲು ವ್ಯಾಕುಲದಿ
ನಾನು ಎಡಬಿಡದೆ ಆಲಾಪಿಸಿರುವೆ
ನಿನ್ನ ಪ್ರತ್ಯೆಕ್ಷ ಅನುಭೂತಿಯೇ
ಎನ್ನ ಹೃದಯಕ್ಕೆ ಅದು ಕೋರಿರುವೆ
ರಾಮಾ ನಿನ್ನ ಚಿದ್‌ಘನರೂಪಕ್ಕೆ
ಈ ನನ್ನ ನಯನವೆಂದು ನೋಡಲಿಹವು
ಆ ಭಾಗ್ಯದ ಗಳಿಗೆಗಳು ಕೂಡಿ
ಮಾಣಿಕ್ಯ ವಿಠಲನಿಗೆ ಬರಲಿಹವು
*****