Home / ಕವನ / ಕವಿತೆ / ಭದ್ರಾವತಿಯನ್ನು ಬಿಡುವಾಗ

ಭದ್ರಾವತಿಯನ್ನು ಬಿಡುವಾಗ

೧
ಹಾ! ಇನ್ನು ದೂರಮಾದೆಯ ನನಗೆ ಸಂತತಂ
ಕಾಳಧೂಮವನುಗುಳ್ವ ಎಲೆಲೇ ಗಗನಚುಂಬಿ!*
ಭೋರೆನುತ್ತಲಿ ವರುಣ ವೇಗದಿಂ ಜಲದಂಬಿ-
ನಾ ವೃಷ್ಟಿಯಿಂ ಕಾಡಿದರು ತಾ ನಿರಂತರಂ;
ಭೂವಳಯದಲ್ಲೆಲ್ಲಿರ್ದೊಡಂ ನಾಂ ಕಣಮೊಂದು
ನೀರನೂ ಬಿಡದೆ ಹೀರುವೆನೆಂಬ ಪೂಣಾಂತು
ಜಗವ ಸುಡುತಿದ್ದರೂ ಭಾಸ್ಕರನು-ಮೃಗಜಂತು
ತರುರಾಜಿ ಸರ್ವಮುಂ ಇರೆ ಬಿಸಿಲೊಳುರೆ ಬೆಂದು;
ನೀ ಮಾತ್ರ ಎದೆಗೆಡಡೆ ನಗುನಗುತ ತಲೆಯೆತ್ತಿ
ಕಾಳಧೂಮವನುಗುಳ್ವ ನಿನ್ನ ಕಾರ್ಯದಿ ಮಗ್ನ-
ನಾಗಿರುತ ಈ ಪ್ರಪಂಚದ ಜನಕೆ ನೀ ನಗ್ನ-
ಸತ್ಯವೊಂದನು ಸಾರುತಿಹೆ ಧೈರ್ಯವನು ಬಿತ್ತಿ:
ಎಲೆ ಮನುಜ! ಜೀವನದಿ ಏನು ಬಂದರು ಮುತ್ತಿ
ಎದೆಗೆಡದೆ ನಗುನಗುತ ಎದುರಿಸದ ತಲೆಯೆತ್ತಿ!
* ಭದ್ರಾವತಿಯಲ್ಲಿರುವ ಎರಡು ದೊಡ್ಡ ಚಿಮಣಿಗಳನ್ನು ಕುರಿತು.
೨
ಎಂಥ ಕಲ್ಲೆದೆಯವನು ಗಂಟೆ ಬಾರಿಸಿದಾತ!
ಬಲವೆಲ್ಲ ಬಿಟ್ಟುಸಿರ ತುಂಬಿದನು ‘ಶಿಲ್ಪಿ’ಯೊಳು
(ಆ ರವಕೆ ಬೆಚ್ಚಿದವು ಸುತ್ತಲಿನ ಬಲ್ಬುಗಳು!)
ಆ ಕ್ರೂರಿ ಹಸುರು ದೀಪವನೊಮ್ಮೆ ಆಡಿಸುತ!
ಕಿವಿ ಬಿರಿಯುವಂದದೊಳು ಅಬ್ಬರಿಸುತಾ ಶಕಟ
ನಿಟ್ಟುಸಿರನು ಬಿಡುತ್ತ ನನ್ನನೆಳೆಯಿತು ಮುಂದೆ!
ಚಕ್ರ ಕಂಬಿಗಳೆರಡು ಕೂಡಿಯೊಕ್ಕೊರಲಿಂದೆ
ದುಃಖದಾವೇಗದಿಂ “ಅಕಟಕಟ ಅಕಟಕಟ”
ಎಂದು ದನಿ ಗೈಯುತಿರೆ (ಮೋಡದಿ ಮುಳುಗಿದ ಪೆರೆ!)
ಭದ್ರಾವತಿಯು ತನ್ನ ನೂರು ಕಣ್ಣುಗಳಿಂದ
ನೋಡುವೊಲೆ ಮಿನುಗೆ ವಿದ್ಯುದ್ದೀಪಗಳ ತಂಡ,
ತೆರೆಯಾಗಿ ಉಕ್ಕಿಬರೆ ಕಣ್ಣಿನೊಳು ನೀರ ನೆರೆ
ಕತ್ತಲಿನ ಕಡಲಿನೊಳು ಕರಗಿಹೋಯಿತು ನನ್ನ
ಪ್ರಿಯನಗರಿ! ಹಾ! ಎನ್ನನಾವರಿಸಿತಲ ಬನ್ನ!
*****
Tagged:

Leave a Reply

Your email address will not be published. Required fields are marked *

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...