ನನ್ನ ಅಳುವ ಪರವಾನಗಿ ಕಸಿದುಕೊಂಡು ಹೋದ ಅವಳ ನಗೆಗೆ ಕಣ್ಣೀರು ಹಿಡಿಶಾಪ ಹಾಕುತ್ತಿದೆ *****...
ಉತ್ತರಿಸಲೇಬೇಕು ನಮ್ಮ ಪ್ರಶ್ನೆಯ ಬೇರೆ ಯವರು; ನೀ ಮಾತ್ರವೆ ಸ್ವತಂತ್ರ, ನಾವೋ ಬಿಡದೆ ತಿರುತಿರುಗಿ ಕೇಳುವೆವು – ನೀ ಬರಿದೆ ನಗುತಿರುವೆ, ಮೌನದಲೆ ಮೀರಿ ಜ್ಞಾನದ ಶಿಖರಗಳ ಮೇರೆ. ಕಡಲಲ್ಲಿ ಅಡಿಯೂರಿ ಸ್ವರ್‍ಗವನೆ ಮನೆ ಸಾರಿ, ಚಿಕ್ಕೆಗಳಿಗಷ್...
ಹಿಂದೆ ಈ ನಮ್ಮ ಮೈಸೂರು ರಾಜ್ಯವನ್ನು ರಾಜವೊಡೆಯರು ಆಳುತ್ತಿದ್ದರು. ಆಗ ವೀರಾಜಯ್ಯನೆಂಬುವವನು ಒಬ್ಬನು ಇದ್ದನು. ಮಹಾರಾಜರು ಅವನು ಬದುಕಲೆಂದು ಕಾರುಗಳ್ಳಿಯನ್ನು ಅವನಿಗೆ ಮಾನ್ಯವಾಗಿ ಕೊಟ್ಟಿದ್ದರು. ವೀರಾಜಯ್ಯನು ಬಹಳ ಜಂಭಗಾರನು. ಯಾರನ್ನು ಕಂಡರೂ ...
ಮಬ್ಬುಗವಿದು ಕತ್ತಲಾಗೆ ಎತ್ತ ಏನು ಕಾಣದಾಗೆ ಮಳೆಯ ಹನಿಯು ಮೊತ್ತವಾಗಿ ಬಂದು ಮೊಗವ ತಿವಿಯುತಿರಲು ಸತ್ತು ಬಿದ್ದ ಬಂಟನಂತೆ ಇಳೆಯು ಸುಮ್ಮನೊರಗುತಿರಲು ಕತ್ತನೆತ್ತಿ ಅತ್ತ ಇತ್ತ ನೋಡುತಿಹುದು ಗುಬ್ಬಿ ಎತ್ತ ತನ್ನ ಪಯಣ ಬೆಳೆಸಿತೋ! ತನ್ನ ಮನವ ಕಳಿಸಿತ...
– ಪಲ್ಲವಿ – ನಮನವಿದೋ, ನಮನವಿದೋ, ನಮನ ಸಹಜಯೋಗಿ ! ಸಮತೆಗಾಗಿ ಬಾಳ್ವೆಯನೇ ಬೇಳ್ದ ನವವಿರಾಗಿ ! ೧ ಕತ್ತಲಲಿಯು ಗುರಿಯ ದಾರಿ ಕಾಂಬ ಕಣ್ಣು ನಿನ್ನ ದೊ, ತತ್ತ್ವಮಾತೆಯಶ್ರುತ ರವ ಕೇಳ್ವ ಕಿವಿಯು ನಿನ್ನದೊ, ವಿಗಡ ರಜದೊಳಿದ್ದು ಸೊವಡು ತ...
ಮೈಸೂರು ಮಲ್ಲಿಗೆ (೧೯೪೨) ಬಂದಿದ್ದು ಈಗ್ಗೆ ಏಳು ದಶಕಗಳ ಹಿಂದೆ. ಓದುಗರಲ್ಲಿ ಅದು ಆಗ ಹುಟ್ಟಿಸಿದ ಮಧುರ ಭಾವ ಇನ್ನೂ ಹಳತಾಗಿಲ್ಲ. ಕಾಲ ಸಂದಂತೆ ಮೈಸೂರ ಮಲ್ಲಿಗೆ ಕನ್ನಡದ ಒಂದು ಪ್ರಾತಿನಿಧಿಕ ಸಂಕಲನವಾಗಿದೆ. ನಾಡಿಗರು ಮತ್ತು ಹೊರನಾಡಿಗರೊಳಗೆ ಮತ್...
ಯೆಂಡಂಗ್ಡೀಗ್ ಕುಡಿಯೋರು ಓಗೋವಂಗ್ ಓಯ್ತಾರೆ ಗಂಡಸ್ರು ದೇಸ್ತಾನಗಳ್ಗೆ! ದೇವ್ರ್ ಅವ್ರಿಗೆ ಇತ್ತಂದ್ರೆ ಗುಡೀಲಿ-ನಮ್ಗೇನು? ನಾವ್ ಕುಡಿಯೊ ಯೆಂಡಾನೆ ದೇವ್ರು! ೧ ಗುಡಿಯಾಗ ಪೂಜಾರಿ ಕಸ್ಕೊತ್ತಾನ್ ಆರ್‍ಕಾಸ ಪಡಕಾನೆ ಮುನಿಯಪ್ಪ ನಂಗೆ! ದೇವರ್‍ನ ಕಂಡವ್...
ತಾಯಿ ಹೇಳುತಲಿದ್ದಳೆನ್ನ ಬಾಲ್ಯದ ಕತೆಯ :- ಮಂಜಾವದಿಂದ ಮುಂಗಾಳು ಕವಿಯುವ ವರೆಗೆ ಓರಿಗೆಯ ಹಸುಳರೊಡನಾಡಿ, ಬಿಸಿಲಿನ ಬೇಗೆ ಬೆಳದಿಂಗಳೆನೆ ಕಳೆಯುತಿದ್ದೆ. ಹಸಿವೆಯ ವ್ಯಥೆಯ ನಾನು ಅರಿತಿರಲಿಲ್ಲ. ಆಟನೋಟಕೆ ಹೀಗೆ ಮೆಚ್ಚಿಯೂಟವ ಮರೆಯೆ, ಕಿರುಮನೆಯ ಕತ್...
ಆಕೆ ಫಣಿಯಮ್ಮ. ಮನೆಗೆಲಸ ಮಾಡಿ ಬದುಕ ನಡೆಸುತ್ತ ಏಗುತ್ತಿರುವ ಮಧ್ಯವಯಸ್ಸಿನ ಹೆಂಗಸು. ನಾಲ್ಕು ಮಕ್ಕಳ ತಾಯಿ. ಮಕ್ಕಳೆಲ್ಲಾ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಗಂಡ ಕೂಡಾ ಒಬ್ಬ ಕೂಲಿ. ಆದರೆ ವಿಪರೀತ ಕುಡುಕ. ದುಡಿದ ಹಣದಲ್ಲಿ ಬಹಳ ಸಲ ಬಿಡಿ...
ರೈತೆಂಬ ಪದದೊಳಿಹುದೆಂಥ ತಾಕತ್ತು ರೈತೆಂದರದು ಸಂಪತ್‌ಸಹಿತಿರುವ ಮಹತು ಅತ್ತಿತ್ತಲೆಯದಲೆ ತುತ್ತುಣುವ ಸ್ವಾಭಿಮಾನದ ಗತ್ತು ಅತ್ತತ್ತ ಹಾರಿತೆಲೋ ಪೇಟೆಡೆಗೆ ಈ ಹೊತ್ತು ನಿತ್ಯ ನೂತನ ರೈತನಕಿದೆಂಥ ಪಾಡಾಯ್ತು – ವಿಜ್ಞಾನೇಶ್ವರಾ *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...








