ಈ ಸವಾಲ್ಗ್ ಏನ್ ಏಳ್ತೀರಣ್ಣ?

ಯೆಂಡಂಗ್ಡೀಗ್ ಕುಡಿಯೋರು ಓಗೋವಂಗ್ ಓಯ್ತಾರೆ
ಗಂಡಸ್ರು ದೇಸ್ತಾನಗಳ್ಗೆ!
ದೇವ್ರ್ ಅವ್ರಿಗೆ ಇತ್ತಂದ್ರೆ ಗುಡೀಲಿ-ನಮ್ಗೇನು?
ನಾವ್ ಕುಡಿಯೊ ಯೆಂಡಾನೆ ದೇವ್ರು! ೧

ಗುಡಿಯಾಗ ಪೂಜಾರಿ ಕಸ್ಕೊತ್ತಾನ್ ಆರ್‍ಕಾಸ
ಪಡಕಾನೆ ಮುನಿಯಪ್ಪ ನಂಗೆ!
ದೇವರ್‍ನ ಕಂಡವ್ರು ಸುಕಪಡೋ ಮಾದ್ರಿಲಿ
ನಾವೂನ ಸುಕಪಡ್ತೀವ್ ಕುಡ್ದು! ೨

ನಂ ನೋಡಿ ನಗ್ತಾರೆ! ಬಕ್ತರ್‍ಗೆ ಬೊಗ್ತಾರೆ!
ಯತ್ವಾಸ ಏನ್ ನಂಗು ಔರ್‍ಗು?
ಬೇಸರ ಬೇಡಣ್ಣ ಕೇಳಿದ್ದಕ್ ಏಳ್ಬುಡಿ-
ಈ ಸವಾಲ್ಗ್ ಏನ್ ಏಳ್ತೀರಣ್ಣ? ೩
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಸ್ಯೆ
Next post ಇಹಲೋಕದ ಪರಿಮಳ ‘ಮೈಸೂರ ಮಲ್ಲಿಗೆ’

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…