ಪ್ರಶ್ನೆಯಿಲ್ಲದ ಬದುಕೊಂದು ಬದುಕೆ

ಪ್ರಿಯ ಸಖಿ, ಜಿ.ಎಸ್. ಶಿವರುದ್ರಪ್ಪನವರ ಕವನದ ಕೆಲ ಸಾಲುಗಳು ನೆನಪಾಗುತ್ತಿದೆ. ಪ್ರಶ್ನೆಯಿಲ್ಲದ ಬದುಕೊಂದು ಬದುಕೆ ? ನನಗಿಲ್ಲ ಪೂರ್ಣ ವಿರಾಮವನ್ನರಸಿ ನಡೆಯುವ ಬಯಕೆ, ಈ ಪ್ರಶ್ನೆಯ ಕೆಳಗೆ ಮಡಿಸಿರುವ ಸಂಶಯದ ನೆರಳ ಬಿಚ್ಚಿ ನಡೆಯುವುದು...

ಕವನ ಹುಟ್ಟಿತು ಕೇಳಾ

ಹುಟ್ಟಿತು ಕವನ ಹುಟ್ಟಿತೂ ಕವನ ಹುಟ್ಟಿತೂ ಕೇಳಾ ಎಲ್ಲಿಂದಲೋ ಹೇಗೋ ಏನೋ ಹಾರಿಬಂದ ಕನಸಿನ ಬೊಟ್ಟು ಮೈಯೊಳಗೆ ನೆಟ್ಟು ನೆತ್ತಿಯಿಂದ ಹೆಬ್ಬೆರಳ ತುದಿಯೊರೆಗೂ ಬಯಕೆ ಬಾಯ್ತೆರೆದಾ ಬಸುರು. ದಿನದಿನಕು ಕಣ್‌ಮೂಗು ಮೂಡಿ ಮೈಕೈ ತುಂಬಿ...
ಯಾರು ಹಿತವರು?

ಯಾರು ಹಿತವರು?

ನಾವು ಸಮಾಜದಲ್ಲಿ ಎರಡು ರೀತಿಯ ಜನರನ್ನು ಕಾಣುತ್ತೇವೆ. ಕಾಲದ ಜೊತೆಗೆ ಅದರ ಸರಿಸಮನಾಗಿ, ಕೆಲವೊಮ್ಮೆ ಕಾಲನಿಗಿಂತಾ ಮುಂದೂ ನಡೆಯುತ್ತಾ ಕಾಲನ ಎಲ್ಲಾ ಬದಲಾವಣೆಗಳಿಗೆ ಒಗ್ಗಿಕೊಂಡು ವೇಗವಾಗಿ ಸಾಗುವ ಚುರುಕಿನವರು ಒಂದು ಗುಂಪಿನವರಾದರೆ, ಯಾವುದು ಏನೇ...

ಹಸಿಮಣ್ಣಾಗುವ ಹಿಮಾಲಯ

ಮುಖಗಳಿಲ್ಲದ ಕನ್ನಡಿಯೊಳಗೆ ಇಣುಕಿ ಮುಖಗಳನ್ನು ಹುಡುಕುತ್ತಾ ಬೆಕ್ಕಸ ಬೆರಗಾಗುತ್ತಾನೆ ತನ್ನದೇ ಮುಖ ಕಂಡ ನಿರ್ಲಿಪ್ತ ಆದರೂ ಹುಚ್ಚು ಪ್ರೇಮಿ! ತಪ್ಪು - ಸರಿಗಳ ಲೆಕ್ಕ ಹಿಡಿದು ತೂಗಲಾರದ ತಕ್ಕಡಿಗಳಿಗೆ ಗರಿಬಿಚ್ಚಿ ನರ್ತಿಸುವ ಕಾಡುವ ಪ್ರಶ್ನೆಗಳಿಗೆ...

ಬೆಪ್ಪು ಕಡಲು

ತನ್ನಾಳ ಅಗಲ ಶಕ್ತಿ ತಿಳಿಯದಿವರು ದಡಗಳ ಕಟ್ಟಿ ನನಗೇ ಮಿತಿಯೊಡ್ಡುವರೇ? ತೀರಗಳಾಚೆಯ ಬದುಕಿಗೆ ತೆರೆಯೆಳೆಯುವರೇ? ರೋಷಾವೇಶದಿ ಹೂಂಕರಿಸಿ ಕಡಲು ದೈತ್ಯಾಕಾರದ ತೆರೆಗಳನ್ನೆಬ್ಬಿಸಿ ದಡಕ್ಕೆ ಬಡಿದು ಕಣ್ಣರಳಿಸಿ ಏನಿದೆ ಇಲ್ಲಿ ಬರೀ ರಸ ಹೀರಿ ಒಗೆದ...

ಇದ್ದರೂ ಇರದಂತೆ

ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ ನಿತ್ಯ ನೆರೆದರೂ ಸಂತೆ ಇಲ್ಲ ಚಿಂತೆ! ಬಿಸಿಲು ಮಳೆ ಚಳಿಗಾಳಿಗೆ ಹಿಗ್ಗದೇ ಕುಗ್ಗದೇ ಎಲ್ಲಿಯೂ ಲೆಕ್ಕಕ್ಕೆ ಸಿಗದೇ ಯಾರಿಗೂ ವೇದ್ಯವಾಗದೇ ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ....

ರಸದೊಳಗೆ ಕಸ

‘ಯಾರು ತುಂಬಿಟ್ಟರೋ ಈ ಬಿಳಿಬಿಳಿ ಅಕ್ಕಿಯೊಳಗೆ ನೊರಜುಗಲ್ಲು ಕರಿ ಮಣ್ಣೆಂಟೆ ಹುಲ್ಲು ಬೀಜ ಭತ್ತ, ಹೊಟ್ಟು?’ ಸದಾ ಇವರ ಗೊಣಗು ಮೊಗದಲ್ಲಿಲ್ಲ ನಗು ಎಲ್ಲ ಶುದ್ಧವಿರಬೇಕು ಬೇಕೆಂದಾಕ್ಷಣ ಬಳಸುವಂತಿರಬೇಕು ಇವರಿಗೆ ತಿಳಿದಿಲ್ಲ ತಪ್ಪು ಅಕ್ಕಿಯದಲ್ಲ...

ಹೊಸ ಬೆಳಗು

ಶತ ಶತಮಾನಗಳಿಂದ ಅದೇ ದಡ ಅದೇ ಕಡಲು ಕಡಲ ಸಿಟ್ಟಿಗೆ ಮತ್ತೆ ಮತ್ತೆ ಹಲ್ಲೆಗೊಳಗಾಗುವ ದಡದ ಒಡಲು. ಕಬಂಧ ಬಾಹುಗಳ ಚಾಚಿ ದಡವನೇ ಬಾಚಿ ನುಂಗುವ ಹುನ್ನಾರ ಕಡಲಿನದು ದೈತ್ಯ ಕಡಲಲೆ ಎಷ್ಟಾದರೂ ತಟ್ಟಲಿ...

ರಸ್ತೆ ಪದ್ಯಗಳು

ಪ್ರತಿಯೊಂದು ರಸ್ತೆಯ ಎದೆಗೂಡು ಒಂದೊಂದು ನೋವಿನ ಮಡು ರಸ್ತೆ ತನ್ನ ನೋವು ಹೇಳುವುದಿಲ್ಲ ಬಿಡಿ ನಾವು ಕೇಳುವುದೂ ಇಲ್ಲ!   ರಸ್ತೆಗಳ ಗರ್ಭದೊಳಗೆ ಅದೆಷ್ಟೊಂದು ಗುಟ್ಟುಗಳಿವೆಯಲ್ಲಾ ವಿಪರ್ಯಾಸವೆಂದರೆ ರಸ್ತೆಗಳು ಮಾತನಾಡುವುದಿಲ್ಲ ಮಾತನಾಡಬಾರದಲ್ಲ! ಸಮವಾಗಿ ಜಲ್ಲಿತಟ್ಟಿ...

ಮಡಕೆ ಒಡೆವ ಆಟ

ಕಣ್ಣಿಗೆ ಕಟ್ಟಿದೆ ಪಟ್ಟಿ ಸಾಗಬೇಕಿದೆ ಕುರುಡುಹಾದಿ ಗುರಿಯ ಬೆನ್ನಟ್ಟಿ. ಕಲ್ಲುಮುಳ್ಳಿನ ದಾರಿ ದೂರದಲ್ಲೆಲ್ಲೋ ಅಸ್ಪಷ್ಟ ಗುರಿ ತಡವರಿಸಿ ತವಕಿಸಲು ಕೋಲೊಂದಿದೆ ಕೈಗೆ ಕಸುವು ಬೇಡವೇ ಮೈಗೆ? ಅಡ್ಡಾದಿಡ್ಡಿ ದಿಕ್ಕು ಕರೆದೆಡೆಗೆ ತಪ್ಪು ಹೆಜ್ಜೆ ಇಡುವ...