ಮಡಕೆ ಒಡೆವ ಆಟ

ಕಣ್ಣಿಗೆ ಕಟ್ಟಿದೆ ಪಟ್ಟಿ

ಸಾಗಬೇಕಿದೆ ಕುರುಡುಹಾದಿ
ಗುರಿಯ ಬೆನ್ನಟ್ಟಿ.

ಕಲ್ಲುಮುಳ್ಳಿನ ದಾರಿ
ದೂರದಲ್ಲೆಲ್ಲೋ ಅಸ್ಪಷ್ಟ ಗುರಿ
ತಡವರಿಸಿ ತವಕಿಸಲು
ಕೋಲೊಂದಿದೆ ಕೈಗೆ
ಕಸುವು ಬೇಡವೇ ಮೈಗೆ?

ಅಡ್ಡಾದಿಡ್ಡಿ ದಿಕ್ಕು ಕರೆದೆಡೆಗೆ
ತಪ್ಪು ಹೆಜ್ಜೆ ಇಡುವ ಕಾಲು
ಮಡಕೆಯೆಲ್ಲೋ ದಾರಿಯೆಲ್ಲೋ
ಇವನೆಲ್ಲೋ ಎಲ್ಲಾ ದಿಕ್ಕಾಪಾಲು.

ಯಾರ ಸೃಷ್ಟಿ ಈ
ಮಡಕೆ ಒಡೆವ ಆಟ?
ಕಣ್‌ಕಟ್ಟಿ ದಾರಿ ತಡಕುತ್ತಾ
ಗುರಿಗಾಗಿ ಹುಡುಕಾಟ
ತಪ್ಪುತ್ತಲೇ ಇರುವ ಹಾದಿಯಲ್ಲಿ
ನಿರಂತರ ಅಲೆದಾಟ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೇಶ್ಯೆ
Next post “ಎಲೆಕ್ಟ್ರಾನಿಕ್” ಯುಗದ ಆಶ್ಚರ್ಯ “ಗಣಕಯಂತ್ರ”

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…