ಬಾನೊಳಗಾಯಿತು ಮುಗಿಲು ಸೊಕ್ಕುಳಿದಡಗಿತು ಬಿಸಿಲು ಈ ನೋಟಕದೇಂ ಮಿಗಿಲು ಸ್ಕಿತಿಗೇಕಯಿ ಈ ದಿಗಿಲು? ಗೂಡೆಡೆ ಹಾರಿತು ಹಕ್ಕಿ ಆವೋಡಿತು ದೌಡಿಕ್ಕಿ ತರು ಮೊರೆಯಿತು ಶರಣಿಕ್ಕಿ ಜನ ಕಕ್ಕಾವಿಕ್ಕಿ! ದೆಸೆಗುಬ್ಬಸವೀ ಸದ್ದು ಏನೆ ಗುಡುಗಲು ಗುಡುಗೆದ್ದು, ಬರಲು ಪರಾಕನು ಹೇಳಿ ವೈತಾಳಿಕ ಭೋರ‍್ಗಾಳಿ, ಮಿಂಚಿನ ಕತ್ತಿಯ ವರ...

ಅಜ್ಜ ಅಜ್ಜಿ ಕೋಲು ಹಿಡಿದು ಕುಂಟುತ್ತ ನಡೆಯುತ್ತಿದ್ದರು. ಮಗ ಧಾವಿಸಿ ಓಡುತ್ತಿದ್ದ. ಮಗಳು ಕುಂಟೆಬಿಲ್ಲೆ ಆಡುತ್ತಿದ್ದಳು. ಮೊಮ್ಮಗ ರೈಲು ಬಿಡುತ್ತಿದ್ದ. ಮೊಮ್ಮಗಳು ಬೊಂಬೆಯಾಟವಾಡುತ್ತಿದ್ದಳು. ಕಾಲನ ರೈಲು ನಿಲ್ಲದೆ ಕೂರದೆ ಓಡುತ್ತಲೇ ಇತ್ತು. ಕಾ...

ಎಂಥ ದುಃಸ್ಥಿತಿ ಬಂದೊದಗಿತಲಾ ಪುತ್ತೂರು ಮಂಗ್ಲರಂತೂರಿನೊಳು ಹಲಸಿನ ಮೇಳವ ನಾಂತದರ ಆಹಾರದೈಸಿರಿಯನೊರೆವಂತಾಯ್ತಲಾ ಸಂರಕ್ಷಿತಾರಣ್ಯದೊಳು ಜಲಬತ್ತಿ ಬೋರುನೀರೆತ್ತಿ ಟ್ಯಾಂಕರಿನೊಳುಪಚರಿಪತಿರೇಕಕಿದು ಸಮವಾಯ್ತಲಾ – ವಿಜ್ಞಾನೇಶ್ವರಾ *****...

ತಂದನಾನ ತಾನ ನನ್ನ ತಾನನ ತಂದೇನಾನಾ ತಾನನ ತಂದೇನಾ ತಂದನ್ನಾನಾ || ೧ || ಮಕ್ಕಳ ಇಲ್ಲೇಂದೆ ದುಕ್ಕ ಮಾಡ್ಯಳೆ ಗೌರೀ ದುಕ್ಕ ಮಾಡ್ಯಾಳೆ ಗೌರೀ || ೨ || ಮಕ್ಕಳ ಬೇಡಿದಳೇ ಶಿವನಲ್ಲಿ ಪಾಪಿಯ ಗೌರೀ ತಾನಂದನ್ನ ತಾನನಾಽ ತಂದೋನಾನಾ || ೩ || ರೊಟ್ಟೀ ಸುಟ್...

ಬರೆದವರು: Thomas Hardy / Tess of the d’Urbervilles ಅವನು ಅತ್ತ ಕಡೆ ಹೋಗುತ್ತಿದ್ದ ಹಾಗೆಯೇ ಮಲ್ಲಿಯು ಒಳಗೆ ಬಂದಳು. ಅವಳ ಹಿಂದೆಯೇ ರಾಣಿಯೂ ಬಂದಳು. ನರಸಿಂಹಯ್ಯನು ಅವರಿಬ್ಬರೂ ಬಂದುದು ನೋಡಿ ದೂರಕ್ಕೆ ಸರಿದ ಮನೆನಾರ್ತೆ ನಂಜಪ್ಪ ನೊಡಕೆ ಹ...

ಯಾವುದಕ್ಕೂ ಅಪೇಕ್ಷೆ ಮಾಡುದೆಲ್ಲ ನಿನ್ನ ಕಷ್ಟಕ್ಕೆ ಬಂಧಿಸಲಾರದೆ! ಉಪೇಕ್ಷೆ ಮಾಡುತ್ತ ಮುನ್ನಡೆ ನೀ ನಿನ್ನ ಬಾಳಿಗೆ ದಾರಿಯಾಗದೆ! ಕ್ಷಣದ ಮಾಯಾ ಮೋಹವು ನಿನ್ನ ದೇವರನ್ನು ಮರೆಸಿ ಬಿಟ್ಟಿದೆಯಲ್ಲ ದೇವರ ನಾಮ ಜಪಿಸಲೂ ಆತಂಕ ಕಾಮಕಾಂಚನ ನಿನ್ನ ಕಟ್ಟಿದೆ...

ಬಳಿಕೋರ್‍ವನಿಂತುಸಿರಿದಂ: “ಜಗದ ಜನರೆಲ್ಲ ರೆಮ್ಮ ಪುಟ್ಟಿಸಿದನೆಮ್ಮನೆ ಪರೀಕ್ಷಿಸುತೆ, ಕೀಳೆನಿಸಿದವರ ತಾಂ ತುಳಿವನೆಂಬರದು ಸಟೆ; ಆತನೊಳ್ಳಿದನೆಲ್ಲಮೊಳ್ಳಿತಾಗುವುದೈ.” *****...

ಹುಲ್ಲ ಪ್ರೀತಿಸದವ ಹೊಲವ ಪ್ರೀತಿಸುವನೆ ಹುಲ್ಲ ಪ್ರೀತಿಸಲು ಕಲಿ ಮೊದಲು ಶಿಲೆಯ ಪ್ರೀತಿಸದವ ಶಿಲ್ಪ ಪ್ರೀತಿಸುವನೆ ಶಿಲೆಯ ಪ್ರೀತಿಸಲು ಕಲಿ ಮೊದಲು ಗುಡ್ಡವ ಪ್ರೀತಿಸದವ ಬೆಟ್ಟವ ಪ್ರೀತಿಸುವನೆ ಗುಡ್ಡವ ಪ್ರೀತಿಸಲು ಕಲಿ ಮೊದಲು ಹನಿಯ ಪ್ರೀತಿಸದವ ಹೊಳ...

“ಮಾತಾ ಸರ್ವಸ್ಯ ಲೋಕಸ್ಯ ಮಧುಸೂಧನಮಾನಿನೀ ದರ್ವೀಮಾದಾಯ ಬಾಲಸ್ಯ ದದೌ ಭಿಕ್ಷಾಂ ಗೃಹೇ ಗೃಹೇ” (ಯಾದವಗಿರಿ ಮಾಹಾತ್ಮ್ಯ) “ಭವತಿ ಬಿಚಾಂದೇವಿ”ಯೆಂದು ನಮ್ಮ ಮನೆಯ ಹೊಸಿಲ ಮುಂದು ದಂಡಕೋಲುಛತ್ರಿ ಹಿಡಿದು ಮನೆಯೊಡತಿಯ ತೊದಲಿ ಕರೆದು ಕಾಡಿಗ...

ಇಲ್ಲಿ ಬುದ್ಧಿಯಿದೆ ನಿಜ ಹೃದಯವೇ ಮಾಯವಾಗಿದೆಯಲ್ಲ? ಬದುಕಿನ ಅನೇಕ ತಿರುವುಗಳಲ್ಲಿ ಪೆಟ್ಟು ತಿಂದರೂ ನಾನೇ ಬದಲಾಗಲಿಲ್ಲವಲ್ಲ? ಆಕಾಶದ ಬಟ್ಟೆಯಲಿ ತೂತುಗಳೇ ಇಲ್ಲ ಆದರೆ ಹೃದಯದಲ್ಲಿ ತೂತು ಬಿದ್ದಿದೆ. ಸರಿಪಡಿಸಿ, ಕೃತಕ ಉಸಿರಾಟಕ್ಕೆ ನಳಿಕೆ ಅಳವಡಿಸಿ...

ಓಝೋನ್, ಪದರವು ವಾತಾವರಣದಲಿದ್ದು ಸೂರ್‍ಯನ ಅತಿ ನೇರಳೆ ಕಿರಣಗಳು ಭೂಮಿಗೆ ಬರದಂತೆ ಮಾಡುತವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಇದೊಂದು ಅನಿಂಪದರವಾಗಿದ್ದು, ಇದರಿಂದ ಅಶುದ್ದ ನೀರನ್ನು ಶುದ್ಧಿಕರಿಸಬಹುದೆಂದು ಫ್ರಾನ್ಸಿನ ವಿಜ್ಞಾನಿಗಳು ಪತ್ತೆ ಹಚ್...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...