ಬಾನೊಳಗಾಯಿತು ಮುಗಿಲು ಸೊಕ್ಕುಳಿದಡಗಿತು ಬಿಸಿಲು ಈ ನೋಟಕದೇಂ ಮಿಗಿಲು ಸ್ಕಿತಿಗೇಕಯಿ ಈ ದಿಗಿಲು? ಗೂಡೆಡೆ ಹಾರಿತು ಹಕ್ಕಿ ಆವೋಡಿತು ದೌಡಿಕ್ಕಿ ತರು ಮೊರೆಯಿತು ಶರಣಿಕ್ಕಿ ಜನ ಕಕ್ಕಾವಿಕ್ಕಿ! ದೆಸೆಗುಬ್ಬಸವೀ ಸದ್ದು ಏನೆ ಗುಡುಗಲು ಗುಡುಗೆದ್ದು, ಬರಲು ಪರಾಕನು ಹೇಳಿ ವೈತಾಳಿಕ ಭೋರ‍್ಗಾಳಿ, ಮಿಂಚಿನ ಕತ್ತಿಯ ವರ...

ಬಾನಂಗಳದಿ ಹಾರುವ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಚಿಲಿಪಿಲಿ ಎಂದು ಕೂಗುವ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಗಿಡಮರದಲ್ಲಿಯ ಹಚ್ಚನೆ ಹಸುರು ಎಲೆಗಳು ಉದುರಿವೆಯಲ್ಲ ಹಸುರಿನ ಎಲೆಗಳು...

ಗಂಡು ಮೆಟ್ಟಿನ ನಾಡು ಕನ್ನಡ ನಾಡು ಗಂಡುಗಲಿಗಳ ಶೌರ್ಯ ಸಾಹಸ ಬೀಡು ತ್ಯಾಗ ಪ್ರೀತಿ ಶೌರ್ಯಕೆ ಹೆಸರಾಯಿತೊ ಅಂದು… ಇತಿಹಾಸದ ಪುಟಪುಟದಿ ಉಳಿಯಿತಿದೊ ಇಂದು ಪುಲಿಕೇಶಿ ಮಯೂರ ವಿಕ್ರಮಾದಿತ್ಯರು ಗಂಡೆದೆಯ ಗುಂಡುಗಳು; ಗಂಡರಿಗೆ ಗಂಡರು ಬನವಾಸಿ ಕಲ...

‘ಮೇಲೆ ಇದೀಯಲ್ಲಾ ಇಗ್ನಾಸಿಯೋ, ಏನಾದರೂ ಕೇಳಿಸುತ್ತಾ ಎಲ್ಲಾದರೂ ಬೆಳಕು ಕಾಣುತ್ತಾ?’ ‘ಏನೂ ಕಾಣಿಸತಾ ಇಲ್ಲ.’ ‘ಇಷ್ಟು ಹೊತ್ತಿಗೆ ನಾವು ಅಲ್ಲಿರಬೇಕಾಗಿತ್ತು.’ ‘ಸರೀ, ನನಗೇನೂ ಕೇಳತಾ ಇಲ್ಲ.’ ‘ಗಮನ ಇಟ್ಟು ನೋಡು, ಇಗ್ನಾಸಿಯೋ.’ ಉದ್ದನೆಯ ಕಪ್ಪು ನ...

ಜಯತು ವಿಶ್ವರೂಪಿಣಿ ಅಂಬೆ ಜಯತು ಜಯತು ಭಾರತಿಯೆ ಜಯತು ಜಗದಂಬೆ ಮಾತೆ ಜಯತು ಜಯತು ಶರ್ವಾಣಿಯೆ ಕಾಳ ರಾತ್ರಿ ಕದಂಬ ವನವಾಸಿನಿ ಕಾಮಿನಿ ಕಲ್ಯಾಣಿ ಕಣ್ಮಣಿಯೆ ಜಯತು ಜಯತು ಮೂಕಾಂಬಿಕೆ ಜಯತು ಜಯತು ವಿಶ್ವಾಂಬಿಕೆ ಜಯತು ರಾಜರಾಜೇಶ್ವರೀ ಜಯತು ಭುವನೇಶ್ವರ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕವನಕ್ಕೆ ವಸ್ತು ಸಿಗಲಿಲ್ಲ, ವ್ಯರ್‍ಥ ಪ್ರಯತ್ನಿಸಿದ್ದೆಲ್ಲ ಪ್ರತಿದಿನ ಪರದಾಟ, ಆರುವಾರ ಕಳೆದರೂ ಇಲ್ಲ, ಶಾಂತನಾಗುವುದೆ ಉತ್ತಮ ಮುದುಕ ಅಲ್ಲಿಗೆ; ವಯಸ್ಸಾಗುವ ಮುಂಚೆ ಪ್ರತಿ ಚಳಿಗಾಲ ಬೇಸಿಗೆ ಆಟಕ್ಕಿದ್ದವು ನನ್ನ ಸರ...

ಈಗ್ಗೆ ಸುಮಾರು ೬೦೦ ವರ್ಷಗಳಿಗೆ ಹಿಂದೆ ಯಾದವ ಕುಲಕ್ಕೆ ಸೇರಿದ ವಿಜಯ ಮತ್ತು ಕೃಷ್ಣರು ಅಣ್ಣ ತಮ್ಮಂದಿರು ರಾಜ್ಯಾಭಿಲಾಷೆಯಿಂದ ದೇಶಸಂಚಾರ ಮಾಡುತ್ತಿದ್ದರು. ಮೈಸೂರೆಂದು ಈಗ ಪ್ರಸಿದ್ಧವಾಗಿರುವ ರಾಜಧಾನಿಯ ಬಳಿ ಹದನವೆಂಬ ಹೆಸರಿನಿಂದಿದ್ದ ಚಿಕ್ಕ ಕೋಟ...

ಈತನು ‘ಮಹಾಶಯನು’ ನಾಲ್ಕು ಜನರಲಿ ಗಣ್ಯ- ನೆಂದು ಮನ್ನಣೆವೆತ್ತ ಸಾಮಂತ. ಎಂತೆಂತು ಲಕ್ಷ್ಮಿಯನ್ನು ಒಲಿಸುವುದು,- ಇದರಲಿವಗಿಹ ಪುಣ್ಯ- ವೆಲ್ಲ ವ್ಯಯವಾಗಿಹುದು. ಇವ ತನ್ನನುಳಿದನ್ಯ- ರನ್ಯಾಯವನ್ನು ತಡೆಯ. ಯಮನ ಕೊಂತಕೆ ಕಂತ ವನು ಕೊಡುವ ಮುಂಚಿತವೆ ಸು...

ಕಲ್ಲು ಕರಗಿತು ಹೂವು ಅರಳಿತು ಹಕ್ಕಿ ಪಟಪಟ ಹಾರಿತು ಅತ್ತ ಇತ್ತ ಸುತ್ತ ಮುತ್ತ ಬೆಳ್ಳಿ ಬೆಳಕು ತುಂಬಿತು ದೂರ ಮುಗಿಲಿನ ದೇವ ಸೂರ್‍ಯನು ತೇರು ಏರಿ ಬಂದನು ಮನೆಯ ಬಾಗಿಲು ಮನದ ಬಾಗಿಲು ಬಡಿದು ಬಂದೆನು ಎಂದನು ಮೌನಗರ್‍ಭವೆ ಮಾತನಾಡಿತು ಶೂನ್ಯಗರ್‍ಭವ...

ಬಾಳಾಸಾಹೇಬ ಲೋಕಾಪುರರು ತಮ್ಮ ‘ಬಿಸಿಲುಪುರ’ ಮತ್ತು ‘ಉಧೋ ಉಧೋ’ ಎಂಬ ಒಳ್ಳೆಯ ಕಾದಂಬರಿಗಳಿಂದ ಕನ್ನಡದ ವಾಚಕರಿಗೆ ಕಥನಕಾರರೆಂದು ಪರಿಚಿತರು. ಅವರ ಕತೆಗಳಿಗೆ ಹೊಸದಾಗಿ ಮುನ್ನುಡಿಯ ಅಗತ್ಯವೇನೂ ಇಲ್ಲ. ಅವರ ಹೊಸ ಸಂಕಲನಕ...

ಅತ್ಕಡಕ್ ಇಕ್ಕಿದ್ ಯಂಗ್ಸೆ! ಚೆಂದುಳ್ಳೇವ್ಳೆ ಯಂಗೆ! ಚೆಂದಿವ್ನೀಂತ ಮೆರಿಲೆ ಬಾರ್‍ದು- ಬಿದ್ದೇ ಬೀಳ್ತೈತ್ ಅಲ್ಲು! ಅದಕಿಂತ್ ಎಚ್ಗೆ ದೀಸ ನಿಲ್ತೈತ್ ಅತ್ಕಡಕಿನ್ದು ಕಲ್ಲು! ೧ ಅಕ್ಕಡಕ್ ಇಕ್ಕಿದ್ ಯಂಗ್ಸೆ! ಚೆಂದುಳ್ಳೇವ್ಳೆ ಯೆಂಗ್ಸೆ! ರೂಪ ಓಯ್ತದ್...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...