೧
ಇಳೆಯ ನೆಲದಲ್ಲಿ ಮುಗಿಲೆಂತ ಮುಗಿಲಲ್ಲಿ ಸುಳಿ-
ದಾಡುತಿಹ ಗಾಳಿಯಲ್ಲಿ
ನಲಿನಲಿವ ಕಡಲಲ್ಲಿ ನೀನಿದ್ದು ಹಿಗ್ಗುತ್ತ
ಊದುತಿಹೆ ಕಾಳಿಯಲ್ಲಿ!
೨
ಹಿಂದಿದ್ದಿ! ಇಂದಿದ್ದು ಮುಂದೆಯೂ ಇದ್ದರೂ
ನನಸೆ ನೀನೆನಗೆ ಕಾಣೆ!
ಹಿಂದು ಮುಂದಿಂದುಗಳನಿನ್ನುಳಿದು ಎಂದೆಂದೊ
ಕಾ೦ಬುದೆ೦ಬುದನು ಕಾಣೆ!
೩
ಜಗವು ನಿನ್ನಲ್ಲೆ ನಡೆಯುತ್ತ ಸಾಗಿರಲಾಗಿ
ಅದರ ಬಗೆ ಹರಿಯಲಿಲ್ಲ!
ನಗೆಯ ನನೆ ನಿನ್ನಿ೦ದೆ ಹೂವಾಗೆ ವಾಸನೆಯು
ನನ್ನೊಳಗೆ ಹರಿಯಲಿಲ್ಲ!
*****








