ಕುಲೀನ ಯುವತಿಯ ಮೂರನೆ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ನನ್ನ ನಿಜಪ್ರೇಮಿಯನು ನೀನು ಸಂಧಿಸಿದಾಗ,
ನಿನ್ನ ಕಾಲ್ಗಳ ನಡುವೆ ಅವನು ರಾಗಾಲಾಪ ಮಾಡುವಾಗ
ಅಪಶಬ್ದ ನುಡಿಯದಿರು ಆತ್ಮಕ್ಕೆಂದೂ,
ತಿಳಿಯದಿರು ದೇಹವೇ ಸಮಸ್ತ ಎಂದು.
ಅವನ ಹಗಲಿನ ಹೆಣ್ಣು ನನಗೆ ಗೊತ್ತು
ದೇಹದಿಂದೊದಗುವ ಕೇಡು, ಕುತ್ತು
ಅವನ ಪ್ರೇಮವನೊಡೆದೆ ಗೌರವದಲಿ
ಎಂದೂ ಸಿಕ್ಕದ ಹಾಗೆ ಒಂದಕ್ಕೆ ಮತ್ತೊಂದು ಪೂರ್‍ಣವಾಗಿ,
ತುಟಿ ತುಟಿಯ ಮುದ್ದಿಸುವ ಹೊತ್ತಿನಲಿ ನನಗೆ
ಕೇಳುವಂತೆ
ವಿರುದ್ಧ ಸ್ವರದ ಸರ್‍ಪ ಬುಸುಗುಡುವುದು,
ಕೈ ತೊಡೆಗೆ ತಡಕುವ ಹೊತ್ತಿನಲಿ ನನಗೆ
ಕೇಳುವಂತೆ
ತೃಪ್ತಿಯಲಿ ಸ್ವರ್‍ಗ ನಿಟ್ಟುಸಿರಿಡುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತಾವ ನೆನಪುಗಳು – ೨೨
Next post ಕವಿ ಕುಂಚದಾ ಹಕ್ಕಿ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…