ಪ್ರೀತಿಯ ತಾಜಮಹಲ್

ಪ್ರೀತಿಯ ತಾಜಮಹಲ್

– ೧ –

ಲಖನೌದಿಂದ ಪುಷ್ಪಕ ಎಕ್ಸಪ್ರೆಸ್ ರೈಲಿನಲ್ಲಿ ರಾತ್ರಿಯೆಲ್ಲ ಪ್ರಯಾಣಿಸಿ ನಾವು ಆಗ್ರಾ ತಲುಪಿದಾಗ ಬೆಳಗಿನ ಹೂ ಬಿಸಿಲು. ಜಗದ್ವಿಖ್ಯಾತ ತಾಜಮಹಲು ಇರುವ ಭೂಸ್ಪರ್ಶ,  ಹಿತಕರ ಗಾಳಿಯೊಂದಿಗೆ ಮಿಳಿತಗೊಂಡು ಅದಮ್ಯ ಪುಳಕ ಆನುಭವಿಸುತ್ತಿರುವಂತೆ ಮಹೇಶ ನಮ್ಮನ್ನು ಟ್ರ್ಯಾಕ್ಸಿನಲ್ಲಿ ತುಂಬಿಕೊಂಡು ಹೊರಟರು. ಸಾಹಿತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಖನೌಗೆ ಬಂದಿದ್ದ ನಮಗೆ ಆಗ್ರಾ, ದೆಹಲಿ, ಮಧುರಾ, ಜಯಪುರ ನೋಡಿಕೊಂಡು ಹೋಗಲು ಆಹ್ವಾನ ನೀಡಿದ್ದು ಆವರೆ.

ತಾಜಮಹಲ್ ನೋಡಬೇಕೆನ್ನುವುದು ನನ್ನ ಬಹುದಿನದ ಕನಸು. ಸಂಗಮವರಿ ಕಲ್ಲಿನಲ್ಲಿ ಕೆತ್ತಿದ ತಾಜಮಹಲು ಒಂದು ಆಮರ ಪ್ರೇಮದ ಕಾವ್ಯ. ಪರಿಶುದ್ಧ ಸೌಂದರ್ಯದ ಪ್ರತೀಕ. ಮಾನವೀಯ ಕ್ಕೆಗಳಿಂದ ಸೃಜಿಸಲ್ಪಟ್ಟ ಆದ್ಭುತ ಇಮಾರತು.  ಜಗತ್ತಿನ ಪ್ರೇಮಿಗಳಿಗೆ ಸ್ಪೂರ್ತಿಯ ಸೆಲೆ ಎನ್ನುವುದರ ಬಗ್ಗೆ ಕೇಳಿದ್ದೆ. ಓದಿಯೂ ಇದ್ದೆ.

ಈಗದನ್ನು ಕಣ್ಣಾರೆ ನೋಡುವ ಆವಕಾಶ ಪ್ರಾಪ್ತವಾಗಿರುವ ಕ್ಷಣದಿಂದ ಆತ್ಯಂತ ಖುಷಿ ಆನಿಸಿತ್ತು. ತಾಜಾ ಬೆಳಕಿನಲಿ ತಾಜ್ ಹೇಗೆ ಕಾಣಿಸಬಹುದೆಂದು ವಾಹನದ ಕಿಟಕಿಯಾಚೆಗೆ ಕಣ್ಣುಹರಡಿ ಕುಳಿತೆ.  ರಸ್ತೆಯುದ್ದಕ್ಕೂ ಬರಿ ಕಟ್ಟಡಗಳು. `ತಾಜ್ ಕಾಣಿಸುತ್ತಿಲ್ಲ’ ನಾನು ನಿರಾಶೆಯಿಂದ ಹೇಳಿದೆ. “ಆದು ಐದು ಕಿಲೋಮೀಟರ ದೂರದಲ್ಲಿದೆ” ಎಂದರು ಮಹೇಶ.

“ಆಗ್ರಾಕ್ಕೆ ಬಂದೀವಿ ತಾಜಮಹಲ್ ನೋಡದ ಹೋಗ್ತೀವೇನು ? ಸ್ವಲ್ಪ ತಡಕೋರಿ” ಆರ್ಜುನ ತಮಾಷೆ ಮಾಡಿದರು ಹೊರಗಿನ ದೃಷ್ಟಿಯನ್ನು ಕದಲಿಸದೆ ನಾನು ನಕ್ಕೆ.

ನಿತ್ಯದ ಬದುಕಿಗೆ ಸಜ್ಜುಗೊಳ್ಳುತ್ತಿರುವ ಜನರ ಧಾವಂತ. ಓಡಾಡುವ ಜಟಕಾ, ರಿಕ್ಷಾ, ಸ್ಯೆಕಲ್ ರಿಕ್ಷಾ, ಕಾರು, ಸಿಟಿ ಬಸ್ಸು, ಸೆಟರ್ ತೆರೆದುಕೊಳ್ಳುತ್ತಿರುವ ಅಂಗಡಿಗಳು ಕಣ್ಣು ತುಂಬುತ್ತಿರುವ ಹಾಗೆ ನನ್ನ ಮನಸ್ಸು ಮೊಗಲ್ ದೊರೆಗಳ ಗತವೈಭವವನ್ನು ಧ್ಯಾನಿಸತೊಡಗಿತ್ತು.

“ಆರೆ, ಇಸಿ ಮಾಽಽಕಿ, ಮರ್ ಜಾತಿ ಸೂವ್ವರ್!” ಸಡನ್ನಾಗಿ ಬ್ರೇಕ್ ಹಾಕಿ ಜೋರು ಧ್ವನಿಯಲ್ಲಿ ಬೈದಾಡಿಕೊಂಡ ಡ್ರೈವರ್. ಆತ್ತ ಗಾಬರಿಯಿಂದ ನೋಡಿದರೆ,  ಟ್ಯಾಕ್ಸಿಗೆ ಆಡ್ಡವಾಗಿ ಆನೆಮರಿಯಂಥ ಹಂದಿಯೊಂದು ತನ್ನ ಹತ್ತೆಂಟು ಮರಿಗಳೊಂದಿಗೆ ಜಬರದಸ್ತಾಗಿ ಗುರುಗುಟ್ಟುತ್ತ ನಿಂತುಕೊಂಡಿತ್ತು. ಆದರ ಮೈಮೇಲೆ ತೊಪ್ಪೆ ತೊಪ್ಪೆ  ಕೊಳಕು. ಬಾಲ ಆಲ್ಲಾಡಿಸಿ, ಕೊಳಕನ್ನು ವಾಹನಕ್ಕೂ ಸಿಡಿಸಿ ಹಂದಿ ಲೇವಡಿ ಧಿಮಾಕಿನಿಂದ ಬದಿಗೆ ಸರಿದು ಹೋಯಿತು. ಆನೆ, ಕುದುರೆ, ಒಂಟೆಗಳು ಓಡಾಡಿದ ಈ ಬೀದಿಗಳಲ್ಲಿ ಈಗ ಬಿಡಾಡಿ ದನಗಳು, ಹಂದಿ-ನಾಯಿಗಳು ಯಥೇಚ್ಛವಾಗಿ ತಿರುಗಾಡಿ ಕೊಂಡಿರುವುದಕ್ಕೆ ಬೇಸರವೆನಿಸಿತು.

ತೆಗ್ಗು ತವರಿನ ರಸ್ತೆಗಳು ನಮ್ಮನ್ನು ಕುಕ್ಕರಿಸತೊಡಗಿದ್ದವು.  ಆಜುಬಾಜು ಗಟಾರು ತುಂಬಿದ ಕೊಳಚೆ ರಸ್ತೆ ಆವರಿಸಿಕೊಂಡಿದ್ದ ಕಸ. ಬ್ರಹ್ಮಾಂಡದ ಗಲೀಜು! “ಇದು ಆಗ್ರಾನೋ; ಹೊಲಸಿನ ಉಗ್ರಾಣೋ?” ಕೋರಟಕರ ಮೂಗು ಮುಚ್ಚಿಕೊಂಡೇ ಹೇಳಿದರು. “ಸರ್, ನಾವೀಗ ಆಗ್ರಾದ ಸೆಂಟರ್ ಪ್ಲೇಸಿನಲ್ಲಿದ್ದೀವಿ” ಎಂದರು ಮಹೇಶ. “ಊರು ಒಂದೀಟೂ ಸ್ವಚ್ಛ ಇಲ್ಲ” ಹಂಚಾಟೆ  ಮುಖ ಸಿಂಡರಿಸಿದರು  “ನಮ್ಮ ದೇಶದಾಗ ಎಲ್ಲ‌ಊರುಗಳ ಸ್ಥಿತಿ ಹೀಂಗಽಽ ಇರುದು” ಎಂದರು ಬಾಗವಾನ ಸರ್.  “ಇದು ಪ್ರಸಿದ್ಧ ಪ್ರವಾಸಿ ಸ್ಥಳ. ಇಲ್ಲಿನ ಆಡಳಿತ ಸ್ವಚ್ಛತೆಗೆ ಗಮನ ಕೊಡಬೇಕಾಗಿತ್ತು” ಶಿರಹಟ್ಟಿಮಠ ಅವರ ದನಿಯಲ್ಲಿ ಬೇಸರದ ಛಾಯೆಯಿತ್ತು.

“ಆವರು ಏನು ಹೇಳುತ್ತಿದ್ದಾರೆ ?” ಡ್ರೈವರ್ ಸ್ಟೇರಿಂಗ್ ತಿರುಗಿಸುತ್ತಲೇ ಒಮ್ಮೆ ಹಿಂತಿರುಗಿ ನೋಡಿ ಕೇಳಿದ.  ಮಹೇಶ ನಮ್ಮ ಆಭಿಪಪ್ರಾಯಗಳನ್ನು ಸಂಕ್ಷಿಪ್ತವಾಗಿ  ಡ್ರೈವರ್‌ನಿಗೆ ತಿಳಿಸಿದರು.  ತಟ್ಟನೆ ಕಣ್ಣು ಕೆಂಪಗೆ ಮಾಡಿಕೊಂಡ ಡ್ರೈವರ್ “ಸರ್, ಇಲ್ಲಿನ ಆಡಳಿತಕ್ಕೆ ಬಕಾಸುರನ ಹೊಟ್ಟೆ ಇರುವುದು” ಎಂದ.  ವ್ಯವಸ್ಥೆಯ ಭ್ರಷ್ಟತೆಯನ್ನು ಪ್ರತಿಭಟಿಸುವವನ ಮಾತಲ್ಲಿ ವ್ಯಗ್ರತೆಯಿತ್ತು.

ಮಹೇಶ ಇದ್ದದ್ದು ಕ್ವಾಟರ್‍ಸ್‍ನಲ್ಲಿ ಮೂವತ್ತರ ಹರೆಯದ ಮಹೇಶ, ಬಾಗವಾನ ಸರ್ ಮೆಚ್ಚಿನ ಶಿಷ್ಯ.  ಬಿಜಾಪುರದ ಒಂದು ಹಳ್ಳಿಯವರು.  ಡಿಪ್ಲೋಮಾ ಮೆಕ್ಯಾನಿಕಲ್ ಪದವೀಧರ.  ಆಗ್ರಾದ ಏರ್ ಫೋರ್‌ಸ್‌ನ ತಾಂತ್ರಿಕ ವಿಭಾಗದಲ್ಲಿ ಮೂರು ವರ್ಷದಿಂದ ಕೆಲಸ ಮಾಡುತ್ತಿದರು.  ಹೆಂಡತಿ ಚೊಚ್ಚಲು ಹೆರಿಗೆಗೆಂದು ತವರಿಗೆ  ಹೋಗಿದ್ದಳು.  ನಮ್ಮನ್ನು ಕ್ವಾಟರ್ಸ್ನಲ್ಲಿ ಇರಿಸಿಕೊಳ್ಳುವ ಆಸೆ ಮಹೇಶಗಿತ್ತು ಆದರೆ ಆಫೀಸ್ ಇನ್‍ಸ್ಪೆಕ್ಷನ್ ಇದ್ದುದ್ದರಿಂದ ಕ್ಯಾಂಪಸ್ನಲ್ಲಿ ಓಡಾಡುವುದು ದುಸ್ತರವೆಂದು ವಿಷಾದಿಸಿದ ಮಹೇಶ ನಮ್ಮನ್ನು ಅರ್ಜುನ ನಗರದ ಕೆ.ಕೆ. ಟೂರ್ ಮತ್ತು ಟ್ರಾವೆಲ್ಸ್‍ನ ರೂಮೊಂದರಲ್ಲಿ ಇರಿಸಿದರು.

ನಾವು ಸ್ನಾನ, ಟೀಫಿನ್ ಮುಗಿಸುವುದರೊಳಗೆ ಮನೆಗೆ ಹೋಗಿ ಬಂದರು ಮಹೇಶ.  ಅವರ ಜೊತೆಗೆ ಈಗ ಮುರುಗನ್ ಇದ್ದರು.  ಮಹೇಶರ ಆತ್ಮೀಯ ಗೆಳೆಯ ಮುರುಗನ್ ಚೆನ್ನೈದವರು ಅವರಿಗೂ ಏರ್ ಫೋರ್ಸ್‍ನ ತಾಂತ್ರಿಕ ವಿಭಾಗದಲ್ಲಿ ಮೇಲುಸ್ತುವಾರಿ ಕೆಲಸ.  ಕನ್ನಡದಲ್ಲಿ ಸೊಗಸಾಗಿ ಮಾತಾಡುತ್ತಿದ್ದರು.  ಬೆಂಗಳೂರನಲ್ಲಿ ಇದ್ದು ಓದಿದವರಂತೆ. ಟ್ರಾಕ್ಸ ಹತ್ತುವ ಮುಂಚೆ “ನಾವು ಮೊದಲು ಸಿಕಂದರ್ ಇಮಾರತು ನೋಡೋಣ” ಎಂದರು ಮುರುಗನ್.

“ತಾಜ್‍ಮಹಲ್ ಬೇಡವೆ?” ನಾನು ಕೇಳಿದೆ.
“ಸಿಕಂದರ ಇಮಾರತು ನೋಡಿ, ಊಟ ಮಾಡಿಕೊಂಡು ತಾಜಮಹಲ್ ನೋಡಲು ಹೋಗೋಣ ಅಲ್ಲಿತನಕ ಬಿಸಿಲು ಕಮ್ಮಿ‌ಆಗಿರುವುದು”  ಮಹೇಶ ಹೇಳಿದರು.

ಆಗ್ರಾದ ಬಿಸಿಲು ತುಸು ಹೆಚ್ಚೆನಿಸಿತು.  ಆದರೆ ಓಡುತ್ತಿರುವ ವಾಹನದೂಳಗೆ ತೂರಿ ಬರುವ ಗಾಳಿ ಬಿಸಿಯ ತಾಪವನ್ನು ತುಸು ತಗ್ಗಿಸಿತು.  ಅಕಬರನ ಸಮಾಧಿ ಇರುವ ಸಿಕಂದರ್ ಮಹಲಿನ ಬೆರಗಿನಲ್ಲಿ ತಾಪ ಇನ್ನೂ ಗೌಣವೆನಿಸಿತ್ತು.

ತಾಜಮಹಲಿನ ದ್ವಾರದಲ್ಲಿ ಇರುವಾಗ ಸೂರ್ಯ ಹಿತವೆನಿಸತೊಡಗಿದ್ದ.  ಮಹೇಶ ಮತ್ತು ಮುರುಗನ್ ಪ್ರವೇಶ ಟಿಕೀಟು ಖರೀದಿಸಿ ತಂದರು.  ಸೆಕ್ಯುರಿಟಿ ಅಧಿಕಾರಿಗಳು ನಮ್ಮನ್ನು ತೀವ್ರವಾಗಿ ತಪಾಸಿಸಿ ಒಳಬಿಟ್ಟರು.  ಪರಿಶುದ್ಧ ಪ್ರೇಮದ ಸಂದೇಶ ಸಾರುವ ಈ ತಾಣಕ್ಕೆ ಆತಂಕವಾದಿಗಳ ಮತ್ತು ಧರ್ಮಾಂಧರ ಕೆಟ್ಟ ನೆದರು ಬಿದ್ದಿರುವುದು ಎಂಥ ವಿಪರ್ಯಾಸ!

ಒಳಗೆ ಕಾಲಿಡುತ್ತಿದ್ದಂತೆ ದೂರದಿಂದಲೇ ಕಂಡಿತು ಹಾಲುಗಲ್ಲಿನ ತಾಜಮಹಲ್!  ಅದರ ಆಪೂರ್ವ ಸೌಂದರ್ಯವನ್ನು ಆಸ್ವಾದಿಸುವಲ್ಲಿ ತನ್ಮಯಗೊಂಡ ಕಿಕ್ಕಿರಿದ ಜನ.  ಫೋಟೋಗ್ರಾಫರ್ಗಳಿಗೆ ಸುಗ್ಗಿಯೆಂದರೆ ಸುಗ್ಗಿ ಎಲ್ಲೆಲ್ಲಿಂದ ಬಂದವರಿಗೆ ತಾಜಯೆದುರು ನಿಂತು ನೆನಪಿನ ಬುತ್ತಿ ಕಟ್ಟಿಕೊಳ್ಳುವ ತವಕ.  ಸುತ್ತ ಹಸಿರು ಹುಲ್ಲಿನ ಮಕಮಲ್ಲಿನಲ್ಲಿ, ಬಳಕುವ ಗಿಡಗಳ ಲಾವಣ್ಯದೊಂದಿಗೆ ಸ್ಪರ್ಧೆಗಿಳಿದಂತೆ ಯುವ ಪ್ರೇಮಿಗಳು ಆಲ್ಲಲ್ಲಿ ಕುಳಿತು, ಕಣ್ಣಭಾಷೆಯಲ್ಲಿ ಒಲವಿನ ಮಾತು ಉಲಿಯುತ್ತಿದ್ದರೆ.  ಗಂಡ-ಹೆಂಡತಿಯರು ಶಾಹಜಹಾನ್-ಮುಮತಾಜ್‌ರನ್ನು ಮೈಯೊಳಗೆ ಆಹ್ವಾನಿಸಿಕೊಂಡವರಂತೆ, ಕ್ಯಾಮರಾ ನೋಟಕ್ಕೆ ಪೋಜು ನೀಡುವಲ್ಲಿ ಆಸಕ್ತರಾಗಿದ್ದರು.

ಸಂಜೆಯ ಸೂರ್ಯನ ಕಿತ್ತಳೆಯ ರಂಗು ತಾಜ್‌ನ ಕಳೆ ಹೆಚ್ಚಿಸಿತ್ತು.  ಸಂಗಮವರಿ ಕಲ್ಲಿನ ಸ್ವರ್ಶ ಹಿತಾನುಭವ ನೀಡುತ್ತಿರುವಂತೆ ನಾನು ತಲೆಯೆತ್ತಿ ನೋಡಿದೆ. ಅಬ್ಬಾ !  ತಾಜಮಹಲೇ, ಏನು ನಿನ್ನ ವೈಭವ ! ಸ್ವಗತವಾಗಿ ಉದ್ದರಿಸಿದ್ದೆ. ಮನಸ್ಸು ಉಲ್ಲಸಿತವೆನಿಸಿತ್ತು.

ಮುಮತಾಜಳ ಕಬರ್ ನೋಡಲು ಗೆಳೆಯರು ಸರದಿಯಲ್ಲಿ ನಿಂತುಕೊಂಡರು.  ಒಳಗೆ ಹೋಗುವಾಗ ನನ್ನನ್ನು ಕರೆಯಿರಿ ಎಂದು ನಾನು ಜನಸಂದಣಿ ಇಲ್ಲದ ಕಡೆಗೆ ನಿಂತುಕೂಂಡು ತಾಜ್‌ನ ಗುಮ್ಮಟದತ್ತ ದೃಷ್ಟಿ ಹರಡಿದೆ.

“ಪ್ರಿಯ ಪ್ರವಾಸಿಗ, ನನ್ನ ಮಹಲಿಗೆ ಬಂದಿರುವ ನಿನಗೆ ಸ್ವಾಗತ ಕೋರುವೆ” ಹೆಣ್ಣು ಧ್ವನಿಯೊಂದು ಕೇಳಿಸಿತು.  ಮಮತಾಜಳದೆ ಆದು?  ಆನುಮಾನ ಕಾಡಿತು. ನನಗೆ.  “ನಾನೇ, ವಿಶ್ವವಿಖ್ಯಾತ ಸಾಮ್ರಾಟ ಶಾಹಜಹಾನನ ಪ್ರಿಯತಮೆ ಅಂಜುಮಂದ್ ಬಾನು ಉರ್ಫ್ ಮುಮತಾಜ.  ಈ ಮಹಲಿನಲ್ಲಿ ಮಲಗಿರುವವಳು” ಮತ್ತೇ ಆದೇ ಉಲಿತ.  ಸತ್ತವರು ಮಾತಾಡುವುದು ಅದ್ಹೇಗೆ ಸಾಧ್ಯ?  ಕಲ್ಪನಾಲೋಕದಿಂದೀಚೆಗೆ ಬಂದು ಇಮಾರತಿನ ಮೇಲೆ ಸೂಕ್ಷ್ಮ ನೋಟ ಬೀರಿದೆ.  ಎಷ್ಟು ನಾಜೂಕಾಗಿದೆ ಇಲ್ಲಿನ ಕುಸುರಿ ಕೆಲಸ. ಇದು ಮನುಷ್ಯ ನಿರ್ಮಿತವೆ ?

“ಪ್ರಿಯ ವೀಕ್ಷಕನೆ, ಯಮುನಾ ತೀರದ ಈ ಮಹಲು ನನ್ನ ಮನದಿಚ್ಛೆಯನ್ನು ಮೂರ್ತಗೊಳಿಸಿದೆ. ಇಂಥದೊಂದು ಮಹಲು ಸ್ವರ್ಗದಲ್ಲೂ ಇಲ್ಲ.  ನನ್ನ ಹೃದಯದೊಡೆಯ ಶಾಹಜಹಾನನಿಗೆ ನಾನು ಕೃತಜ್ಞಳಾಗಿದ್ದೇನೆ.  ನನ್ನ ನೆನಪನ್ನು ಆವನು ಈ ಭೂಮಿಯ ಮೇಲೆ ಆಮರಗೊಳಿಸಿದ್ದಕ್ಕೆ” ಮುಮತಾಜಳ ಅಂತರಂಗದ ಮಾತು ನನ್ನ ಹೃದಯ ತುಂಬಿಕೊಂಡವು.

“ಆತ್ಮೀಯ” ಗಂಡು ಧ್ವನಿ ಕೇಳಿಸಿತು. ಅದು ಶಾಹಜಹಾನನದೇ ಇರಬೇಕನಿಸಿತು.  ಅವನು ಹೇಳಿದ ನನ್ನ ಮುಮತಾಜಳ ಪ್ರೀತಿಯೆದುರು ಈ ಮಹಲು ಏನೂ ಅಲ್ಲ, ಅವಳು ನನ್ನ ಹೃದಯದಲ್ಲಿ ಶಾಶ್ವತಳಾಗಿದ್ದಾಳೆ. ಆದರೆ ಅವಳ ಇಚ್ಛೆಯಂತೆ ನಾನು ಈ ಇಮಾರತು ನಿರ್ಮಿಸಿದ್ದೇನೆ.  ಅವಳು ನನ್ನ ಪ್ರೇಮ ಸಾಮ್ರಾಜ್ಞಿ.  ಆಕೆಯನ್ನು ನಾನು ನನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸಿದ್ದೇನೆ.  ಮುಮತಾಜ ನಮ್ಮ ಅರಮನೆಯ ಪರಿಸರದಲ್ಲಿ ಹುಟ್ಟಿ ಬೆಳೆದ ಹುಡುಗಿ.  ಅವಳ ತಂದೆ ಯಾಮಿನುದ್ದೌಲಾ ಸಾಮ್ರಾಜ್ಞಿ.  ನೂರಜಹಾನಳ ಸಹೋದರ.  ನನ್ನ ತಂದೆ ಜಹಾಂಗೀರನ ದರಬಾರಿನಲ್ಲಿ ಅತ್ಯುಚ್ಛ ಪದವಿಯಲ್ಲಿದ್ದ.  ಅತಿ ಸುಂದರಿ.  ಮುಗ್ದೆಯಾದ ಮಮತಾಜಳನ್ನು ನಾನು ಚಿಕ್ಕಂದಿನಿಂದ ನೋಡುತ್ತ ಬಂದವನು.  ಅವಳ ಯೌವನಕ್ಕೆ ಸೋತವನು.  ನಮ್ಮ ಪ್ರೇಮದ ವಿಷಯ ತಿಳಿದ ನನ್ನ ತಂದೆ ಸಂತೋಷದಿಂದ ನಮ್ಮ ಮದುವೆ ನೆರವೇರಿಸಿದರು. ಮಮತಾಜಳಿಗೆ ರಾಜಮಹಲಿನ ಉತ್ಕೃಷ್ಟತೆ ಪ್ರಾಪ್ತವಾಯಿತು.”

ಶಾಹಜಹಾನನ ಧ್ವನಿಯಲ್ಲಿ ಹೆಪ್ಪುಗಟ್ಟಿತ್ತು ಹೆಮ್ಮೆ.

“ನಾನು ಅವರ ಹೃದಯದಲ್ಲಿ ಸ್ಥಾನ ಪಡೆದುಕೂಂಡದ್ದು ನನ್ನ ಅದೃಷ್ಟ.  ನಾವಿಬ್ಬರೂ ಪರಸ್ಪರ ಅಧಿಕವಾಗಿ ಪ್ರೀತಿಸುತ್ತಿದ್ದೆವು.  ಎಂಥ ಸಮಯದಲ್ಲೂ ವಿಚ್ಛಿನ್ನಗೊಳಿಸಲಾರದ ಪ್ರೀತಿಯದು.  ನಾನಂತೂ ಅವರನ್ನು ನೆರಳಿನಂತೆ ಹಿಂಬಾಲಿಸಿಕೊಂಡಿರುತ್ತಿದ್ದೆ.  ಮಹಲಿನಲ್ಲೂ ಆಷ್ಟೆ ದರಬಾರಿನಲ್ಲೂ ಅಷ್ಟೆ.  ರಾಜನೀತಿ ವಿಷಯದಲ್ಲಿ ಅವರ ಮೇಲೆ ನನ್ನ ಒತ್ತಡಗಳಿರಲಿಲ್ಲ. ಅವರು ಸಲಹೆ ಇಚ್ಛಿಸಿದಾಗ ನಾನು ಸಹಕರಿಸುತ್ತಿದ್ದೆ.  ನನ್ನ ದೊರೆಯ ಬಗ್ಗೆ ನನಗೆ ಬಹಳ ಅಭಿಮಾನವಿದೆ. ಅವರು ತಮ್ಮ ತಂದೆಯಂತೆ ಹೆಂಡತಿಯ ಕೈಗೊಂಬೆಯಾಗಲಿಲ್ಲ.  ನನ್ನನ್ನು ಎಂದಿಗೂ ಅಗೌರವದಿಂದ ಕಾಣಲಿಲ್ಲ” ಶಾಹಜಹಾನನನ್ನು ಎದೆಯಾಳದಿಂದ ಪ್ರಶಂಸಿದಳು ಮುಮತಾಜ.

“ಮುಮತಾಜಳಿಲ್ಲದ ಕ್ಷಣಗಳು ನನ್ನ ಪಾಲಿಗೆ ನರಕವೆನಿಸಿದ್ದವು.  ಆಕೆ ನನ್ನ ಕಣ್ಣಿದುರಿಗೆ ಸದಾ ಇರಬೇಕೆಂದು ಹಂಬಲಿಸುತ್ತಿದ್ದೆ.  ಅವಳ ನಗುಮೊಗದ ಬೆಳಕು ನನ್ನನ್ನು ಅಪೋಷಿಸಿಬೇಕೆಂದುಕೊಳ್ಳುತ್ತಿದ್ದೆ.  ಹೀಗಿದ್ದಾಗಲೇ ನನ್ನ ಜೀವನದಲ್ಲಿ ಮುಸಿಬತ್ ಎದುರಾಯಿತು.  ನನಗೆ ರಾಜ್ಯಾಭಿಷೇಕವಾದ ಎರಡನೆಯ ವರ್ಷದ ಸಮಯ.  ದಖನ್‍ಲ್ಲಿ ಖಾನ್ ಜಂಹಾ ಲೋದಿಯ ವಿದ್ರೋಹವನ್ನು ಹತ್ತಿಕ್ಕಲು ನಾನು ಹೊರಡಬೇಕಾಯಿತು.  ಮುಮತಾಜ್‍ಳೂ ನನ್ನ ಜೊತೆಗಿದ್ದಳು.  ಆಗ ಆಕೆ ಗರ್ಭವತಿ.  ಹೆಣ್ಣು ಕೂಸಿಗೆ ಜನ್ಮಕೊಡುವ ಸಂದರ್ಭ ಅವಳ ಪ್ರಕೃತಿಯಲ್ಲಿ ಗಡಬಡ ಆಯಿತು.  ಅವಳ ಸ್ಥಿತಿ ನೋಡಿ ನಾನು ಆಘಾತಗೊಂಡೆ.  ಅವಳ ಮುಖವು ಹಳದಿ ವರ್ಣಕ್ಕೆ ತಿರುಗಿತ್ತು” ಶಾಹಜಹಾನನ ಗಂಟಲು ಬಿಗಿದಿತ್ತು.

ಕ್ಷೀಣ ಸ್ವರದಲ್ಲಿ ಉಲಿದಳು ಮಮತಾಜ “ನನ್ನ ದೊರೆಯ ಬಾಡಿದ ಮುಖ ಕಂಡು ಸಂಕಟ ಅನುಭವಿಸಿದೆ.  ಕಣ್ಣಲ್ಲಿ ನೀರು ಒಂದೇ ಸವನೇ ಧುಮ್ಮಿಕ್ಕಿತು. ಅವನನ್ನು ನಾನು ಅಗಲುವ ಹೊತ್ತು ಸಮೀಪಿಸಿತು.  ನನ್ನನ್ನು ಕಳೆದುಕೊಳ್ಳಲು ಅವನಿಗೆ ಬಿಲ್‍ಕುಲ್ ಮನಸ್ಸಿರಲಿಲ್ಲ. ನನಗೂ ಅಷ್ಟೆ ಅದರೆ ಪರವರ್ದಿಗಾರನ ಇಚ್ಛೆ ಬೇರೆ ಇತ್ತೇನೋ !  ನಾನು ಯಾತನೆ ನಡುವೆಯೂ ದೊರೆಯ ಹಸ್ತವನ್ನು ನನ್ನ ಹಸ್ತದ ಮೇಲೆ ಇರಿಸಿಕೊಂಡೆ  …… ನನ್ನ ಸಾವಿನ ಬಗ್ಗೆ ಅವನಿಗೂ ಮನವರಿಕೆಯಾಯಿತೇನೋ.  ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ಹೇಳಲು ಪದಗಳೇ ಇಲ್ಲ ಎಂದು ಗೋಳಾಡಿದ.  ಸಾವಿನ ಕೊನೆಯಲ್ಲಿ ನಾನು ಪ್ರಾರ್ಥಿಸಿಕೊಂಡೆ ದೊರೆ, ನೀವು ನನ್ನನ್ನು ಪ್ರೀತಿಸುವುದೇ ನಿಜವಾದರೆ ನನ್ನ ಸಾವಿನ ನಂತರ, ನನ್ನ ಮಕ್ಕಳ ಕ್ಷೇಮದ ಸಲುವಾಗಿ ನೀವು ಬೇರೆ ಮದುವೆ ಆಗಬಾರದು.  ನನ್ನ ಹೆಸರು ಈ ಭೂಮಿಯ ಮೇಲೆ ಶಾತ್ವತವಾಗಿ ಉಳಿಯಲು ಭವ್ಯವಾದ ಸ್ಮಾರಕವೊಂದನ್ನು ನಿರ್ಮಿಸಬೇಕು ಎಂದು, ದೊರೆ ನನ್ನ ವಚನವನ್ನು ಹಾರ್ದಿಕವಾಗಿ ಸ್ಟೀಕರಿಸಿದ. ನಾನು ಸಮಾಧಾನದಿಂದ ಕಣ್ಮುಚ್ಚಿಕೊಂಡೆ.”

ತೃಪ್ತಿಯಿತ್ತು ಅವಳ ಧ್ವನಿಯಲ್ಲಿ.

“ನನ್ನ ಮುಮತಾಜಳ ಅಮರ ಪ್ರೇಮದ ಕುರುಹು ಇದು. ಅವಳನ್ನು ನಾನು ಇಲ್ಲಿಯೇ ಕಬರ್‍ನಲ್ಲಿ ಮಲಗಿಸಿದ್ದೇನೆ.  ನಾನೂ ಅವಳೊಂದಿಗೆ ಬೆರೆತಿದ್ದೇನೆ.  ಆಗಲೇ ಸೂರ್ಯ ಮುಳುಗಿದ.  ಒಳಗೆ ಮೋಂಬತ್ತಿ ಉರಿಯುತ್ತಿದೆ.  ಅದರ ಬೆಳಕಿನಲ್ಲಿ ಅವಳ ಗೋರಿಯನ್ನು ಒಮ್ಮೆ ನೋಡು ಮುಸಾಫೀರ್” ಶಾಹಜಹಾನನ ಮಾತು ಬಾನುಲಿಯಂತೆ ಕೇಳಿಸಿತ್ತು.

“ಸರ್ ಬನ್ನಿ, ಒಳಗೆ ಹೋಗಲು ನಮ್ಮ ಸರದಿ ಬಂದಿದೆ” ಕೂಗಿ ಕರೆದರು ಮಹೇಶ.  ಜನರಿಗೋ ಕಬರ್ ನೋಡುವ ಜರೂರತೆ.  ನಾನೂ ಅವಸರದ ಹೆಜ್ಜೆ‌ ಇರಿಸಿದೆ. ಒಳಗೆ ಮೊಂಬತ್ತಿ ಢಾಳವಾಗಿ ಬೆಳಗತೊಡಗಿತ್ತು.  ಕಬರ್‍ನ ಮೇಲಿನ ಕಪ್ಪು ಅಕ್ಷರಗಳು ಸ್ಪಷ್ಟವಾಗಿ ಗೋಚರಿಸಿದ್ದವು.  ಈ ಗೋರಿ ಅಂಜುಮಂದ ಬಾನು ಬೇಗಂ ಉರ್ಫ್ ಮುಮತಾಜಳದು.  ೧೬೩೧ರಲ್ಲಿ ಅವಳು ಮೃತಳಾದಳು.  ಸ್ವರ್ಗದ ದೇವತೆಗಳು ಅವಳನ್ನು ಭೇಟಿಯಾಗಲು ಬಂದರು ಮತ್ತು ಅವರು ಉಲಿದರು. “ಮುಮತಾಜಳ ವಾಸಸ್ಥಾನ ಸ್ವರ್ಗದಲ್ಲಿ ಶಾಶ್ವತವಿದೆ ! ”

ತಾಜಮಹಲು ಬಿಟ್ಟು ಬರಲು ನನಗೆ ಮನಸ್ಸಾಗಲಿಲ್ಲ.  ಆದರೆ ವೀಕ್ಷಣೆಯ ಸಮಯ ಮುಗಿದಿತ್ತು ಜನರೊಂದಿಗೆ ನಾನು ಭಾರವಾದ ಹೆಜ್ಜೆ ಇರಿಸಿದೆ.

“ಇನ್ನಷ್ಟು ಹೊತ್ತು‌ಇಲ್ಲೆ‌ಇರಬೇಕನಿಸಿತ್ತು ನನ್ಗ ?” ದ್ವಾರ ಬಾಗಿಲು ದಾಟುತ್ತ ಹೇಳಿದೆ ನಾನು. “ನಿಮ್ಗ ತೃಪ್ತಿ ಆಗದಿದ್ರ ಮತ್ತಽಽ ಬರೂಣು ಬರ್‍ರಿ” ಎಂದರು ಶಿರಹಟ್ಟಿಮಠ.

“ನಾಳೆ ಜಯಪುರಕ್ಕೆ ಹೋಗಬೇಕಲ್ಲ” ಬಾಗವಾನ ನೆನಪಿಸಿದರು.

“ನಾಡದು ಹುಣ್ಣಿಮೆ. ಬೆಳದಿಂಗಳಲ್ಲಿ ತಾಜಮಹಲ್ ನೋಡಲು ಅವಕಾಶ ಇರುವುದು”  ಎಂದರು ಮುರುಗನ್. “ನಾವು ಈ ಅವಕಾಶ ತಪ್ಪಸ್ಗೋಬಾರ್ದು” ಕೂಡಲೇ ಹೇಳಿದೆ ನಾನು. “ನಾವು ತೀಕೀಟಿಗೆ ಪ್ರಯತ್ನಿಸುತ್ತೇವೆ” ಎಂದರು ಮಹೇಶ.

ವ್ಯಾನ್ ಪಾರ್ಕ್ ಮಾಡಿದ ಕಡಗೆ ನಾವು ನಡೆಯುತ್ತಲೇ ಬಂದೆವು.  ಮುರುಗನ್ ನನ್ನ ಪಕ್ಕದಲ್ಲಿಯೇ ಇದ್ದರು.  ತಾಜಮಹಲ್ ಬಗ್ಗೆ ಆವರಿಗೆ ಉತ್ಕಟ ಪ್ರೀತಿಯಿತ್ತು. ಅದರ ನಿರ್ಮಾಣದ ಸಂಗತಿಗಳನ್ನು ಅವರು ರೋಚಕವಾಗಿ ಹೇಳುತ್ತಲೇ ಇದ್ದರು.

ನಮ್ಮನ್ನು ನೋಡಿದ ಡ್ರೈವರ್ ರಸೀದ್ ವ್ಯಾನ್ ತಂದು ರಸ್ತೆಗೆ ನಿಲ್ಲಿಸಿದ.  ಅಲ್ಲಿದ್ದ ಹೋಟೇಲಿನಲ್ಲಿ ಚಹ ಕುಡಿದು ವ್ಯಾನ್ ಹತ್ತಿದೆವು.  ರಸೀದನ ಹತ್ತಿರ ಬಂದ ವ್ಯಕ್ತಿಯೊಬ್ಬ ಸಲಾಂ ಸಾಬ್ ಎಂದ.

“ಕ್ಕಾ ಬೋಲ್ತಾ ಹೈ ಬಾದಶಹಾ? ತುಮ್ಹಾರೆ ಬೇಗಂ ಸಾಹೇಬಾ ಮಿಲ್ ಗಯಿ ನಾ?” ರಸೀದ್ ಕೇಳಿದ.  ಆ ವ್ಯಕ್ತಿ ಮಾತಾಡದೆ ಗಂಭೀರವಾಗಿ ನಿಂತ.  ರಸೀದ್ ಐದು ರೂಪಾಯಿಯ ನಾಣ್ಯವೊಂದನ್ನು ಅವನ ಕ್ಕೆಗೆ ಕೂಟ್ಟು “ಚಲೋ ಭೈ, ಚಾಯ್ ಪೀವೋ” ಎಂದ.  ಖುಷಿಯಾಗಿ ಆ ವ್ಯಕ್ತಿ ಸೆಲ್ಯುಟ್ ಹೊಡೆದು ಪಕ್ಕಕ್ಕೆ ಸರಿದ.  ಅವನ ಮುಖ ನನಗೆ ಅಸ್ಪಷ್ಟ ಕಂಡಿತು.

– ೨ –

ಕುದುರೆ ಗಾಡಿಯಲ್ಲಿ ಕುಳಿತು ಆಗ್ರಾದ ಬೀದಿಗಳನ್ನು ಸುತ್ತುವ ಆಸೆಯಿತ್ತು ನನಗೆ.  ಭಾರಿ ಎತ್ತರದ ಕುದುರೆಯ ಜಟಕಾಗಳು ಮೊಗಲ ಬಾದಶಹದ ಕಾಲವನ್ನು  ನೆನಪಿಸಿಕೊಡುವಂತೆ ಓಡಾಡತೊಡಗಿದ್ದವು. “ಲಾಲ್ ಕಿಲ್ಲಾ ನೋಡಲು ಜಟಕಾದಾಗ ಹೋಗುಣು” ಎಂದೆ ನಾನು.  “ನೋಡುವ ಸ್ಥಳಗಳು ದೂರದಲ್ಲಿವೆ.  ಜಟಕಾದಲ್ಲಿ ಹೋದರೆ ಸಮಯ ಸಾಲುದಿಲ್ಲ” ಎಂದರು ಮಹೇಶ.  ನಾನು ಮತ್ತೆ ಟ್ರ್ಯಾಕ್ಸ್ ಹತ್ತಬೇಕಾಯಿತು.  ಆಗ್ರಾದ ಕೋಟೆಯ ಹೆಬ್ಬಾಗಿಲಿನಲ್ಲಿ ಒಳ್ಳೆಯ ಗೈಡ್ ಸಿಕ್ಕ.  ಅವನ ಇತಿಹಾಸ ಪ್ರಜ್ಞೆ ಚುರುಕು ಮತ್ತು ಲವಲವಿಕೆಯದ್ದಾಗಿತ್ತು.  ಬಹಾದ್ಹೂರವ ಮೊಗಲ್ ಬಾದಶಹ ಆಕಬರ್ ನಿರ್ಮಿಸಿದ ಕೆಂಪುಕಲ್ಲಿನ ಕೋಟೆ ಅತ್ಯಂತ ಅದ್ಭುತ, ಅಲ್ಲಿನ ಜಹಾಂಗೀರ್ ಮಹಲ್, ಅಂಗೂರಿಬಾಗ್, ಖಾಸಮಹಲ್, ದಿವಾನ್-ಏ-ಖಾಸ್, ಶೀಶ್ ಮಹಲ್‍ಗಳ ವೈಭವಗಳನ್ನು ಆಸ್ವಾದಿಸುತ್ತ ಸುಮ್ರಾನ್ ಬುರ್ಜ್ ತಲುಪಿದೆವು.  ಪತ್ನಿ ನೂರಜಹಾನ್‍ಳಿಗೆಂದೇ ಜಹಾಂಗೀರ್ ನಿರ್ಮಿಸಿದ ಈ ಇಮಾರತು ಅಮೂಲ್ಯ ಮತ್ತು ಬಣ್ಣ ಬಣ್ಣದ ಕಲ್ಲುಗಳಿಂದ ಆಕರ್ಷಕವೆನಿಸಿತ್ತು.  ಇಲ್ಲಿಯೇ ಶಾಹಜಹಾನ್‍ನ ಅವಸಾನನವಾಗಿದ್ದೆಂದು ಗೈಡ್ ಹೇಳಿದ.  ದೊರೆ ತನ್ನ ಆಕ್ಕರೆಯ ಪುತ್ರಿ ಜಹಾನ್ ಆರಾಳ ತೊಡೆಯ ಮೇಲೆ ಮಲಗಿಕೂಂಡೆ ಕೊನೆಯ ಉಸಿರು ಇರುವವರೆಗೆ ತಾಜಮಹಲ್ ನೋಡುತ್ತಿದ್ದನಂತೆ.  ಇಲ್ಲಿಂದ ಮುಮತಾಜಳ ಸಮಾಧಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹೊಳೆವ ಚಂದ್ರ ತುಕಡಿಯೋ, ಸ್ವರ್ಗದಿಂದ ಭೂಮಿಗೆ ಬಿದ್ದ ಒಂದು ಸುಂದರ ಮಹಲೋ ಎಂಬಂತ್ತಿದ್ದ ತಾಜ್‍ಮಹಲ್‍ನ್ನು ನಾನು ಹೃದಯ ತುಂಬಿಕೊಂಡೆ.

ಆ ಜಾಗೆಯಿಂದ ಕದಲುವಷ್ಟರಲ್ಲಿ `ಸಲಾಂ ಸಾಹೇಬ್’ ಎಂಬ ಧ್ವನಿ ಕೇಳಿಸಿತು.
“ಸಲಾಂ ಅಮರಬಾಬು, ಠೀಕ್ ಹೈನಾ ?’ ಗೈಡ್ ಕೇಳಿದ.  ನಾನತ್ತ ಹೊರಳಿದೆ.  ನಿನ್ನೆ ತಾಜ್‍ನ ಬಳಿ ಕಂಡ ವ್ಯಕ್ತಿ ಕುತೂಹಲ ಹುಟ್ಟಿಸಿದ.  ಮುಂದೆ ಬರುತ್ತಿದ್ದಂತೆ ಗೈಡನನ್ನು ಕೇಳಿದೆ ನಾನು “ಆ ಅಮರಬಾಬು ಯಾರು ?”

“ಇದೇ ಊರಿನವನು. ಬಹಳ ದಿನಗಳಿಂದ ಈ ಕಿಲ್ಲಾ ತಾಜಮಹಲ್ ಎಂದು ಸುತ್ತಮುತ್ತ ಓಡಾಡಿಕೊಡಿರುತ್ತಾನೆ.  ಎಷ್ಟೋಜನ ಆವನನ್ನು ಪಾಗಲ್ ಎನ್ನುತ್ತಾರೆ.  ಆದರೆ ಆವನು ಹಾಗೆ ವರ್ತಿಸುವುದಿಲ್ಲ ನನ್ನ ನೋಡಿದಾಗಲೆಲ್ಲ ಸಲಾಂ ಹೇಳುತ್ತಾನೆ.  ಪಾಪ, ಆವನು ಪ್ರೇಮಿಸಿದ ಹುಡುಗಿ ಪ್ರೀತಿ, ನೀಚರಿಗೆ ಬಲಿಯಾದಳು.  ಇವನು ಆಕೆಯನ್ನು ಹುಡುಕುತ್ತ ಈಗಲೂ ಆಲೆದಾಡುತ್ತಿದ್ದಾನೆ.” ಗೈಡ್ ಇಷ್ಟು ಹೇಳಿ ಮುಖ್ಯ ದ್ವಾರದಲ್ಲಿ ನಮ್ಮನ್ನು ಬೀಳ್ಕೊಟ್ಟು ಬೇರೆ ಪ್ರವಾಸಿಗರತ್ತ ಸರಿದು ಹೋದ.

“ನಾವೀಗ ಊಟಕ್ಕೆ ಹೋಗೋಣ” ಎಂದರು ಮಹೇಶ.
“ಸಾಸಿವೆ ಎಣ್ಣಿ ಊಟ ಬ್ಯಾಡ. ಗಂಟಲು ಕೆರಿತೈತಿ” ಹಂಚಾಟೆ ಹೇಳಿದರು.
“ತುಸು ದೂರದಲ್ಲಿ ಉಡುಪಿ ಹೋಟೆಲು ಇದೆ. ನಮ್ಮ ಕಡೆಗಿನ ಊಟ ಸಿಗುವುದು” ಎಂದರು ಮುರುಗನ್.  ಅರ್ಜುನ ಕೂಡಲೇ ಸಮ್ಮತಿಸಿದರು.  ವ್ಯಾನು ಏರಿ ಕುಳಿತೆವು.

ಕೆಂಪು ಕಿಲ್ಲಾದ ಗುಂಗಿನಲ್ಲಿದ್ದ ಕೋರಟಕರ “ಮೊಗಲ್ ಬಾದಶಹರು ಸೌಂದರ್ಯ ಆರಾಧಕರು!” ಎಂದು ಸಂತಸ ವ್ಯಕ್ತಪಡಿಸಿದರು.

“ಅದಕ್ಕೆಽಽ ಆವರಿಗೆ ತಾಜಮಹಲ್‍ನಂಥ ಸುಂದರ ಇಮಾರತಿ ಕಟ್ಟಾಕ ಸಾಧ್ಯ ಆತು”  ಶಿರಹಟ್ಟಿಮಠ ಸಾಕ್ಷಿಯೊದಗಿಸಿದರು.

ತಾಜ್ ಮತ್ತೆ ನನ್ನ ಕಣ್ಣಿದುರಿಗೆ ಬಂದು ನಿಂತಿತು. ಜೂತೆಗೆ ಅಮರ ಬಾಬು ಕೂಡ.  ಏನವನ ಕಥೆ ? ಕುತೂಹಲ ನನ್ನೊಳಗ ಹೆಪ್ಪುಗಟ್ಟಿತ್ತು.

“ನಾನು ತಾಜಮಹಲ್ ಖರೀದಿಸಬೇಕು” ಊಟದ ನಡುವೆ ಹೇಳಿದೆ ನಾನು.

“ಆಗ್ರಾನ ಖರೀದಿ ಮಾಡ್ಕೊಂಡು ಹೋಗ್ರಲ್ಲಾ” ಕೋರಟಕರ ತಟ್ಟನೆ ಜೋಕ್ ಮಾಡಿದರು.

“ಹತ್ತಾರು ಗೆಳೆಯರು ಹಣಾ ಕೊಟ್ಟಾರ ಅವರಿಗೆ ಸಂಗಮವರಿ ಕಲ್ಲಿನ ತಾಜ್, ಮಾದರಿಗಳನ್ನ ಒಯ್ಯಬೇಕು” ಎಲ್ಲರ ನಗುವಿನ ಮಧ್ಯೆ ಹೇಳಿದೆ ನಾನು.

“ನಾಳೆ ನಿಮ್ಮನ್ನು ಹ್ಯಾಂಡಿಕ್ರಾಫ್ಟ್ ಅಂಗಡಿಗೆ ಕರೆದುಕೂಂಡು ಹೋಗ್ತೇನೆ. ಅಲ್ಲಿ ನಿಮಗೆ ಬೇಕಾದ ಮಾದರಿಗಳು ಸಿಗ್ತಾವೆ” ಮುರುಗನ್ ಹೇಳಿದರು.

– ೩ –

ಹುಣ್ಣಿಮೆಯ ಬೆಳದಿಂಗಳಲ್ಲಿ ತಾಜ್ ನೋಡುವ ಅತ್ಯಾಸಕ್ತಿಯಿಂದ ಜನಸಂದಣಿ ವಿಪರೀತವಾಗಿತ್ತು.  ಸೌಂದರ್ಯಾನುಭೂತಿಗಾಗಿ ತವಕಿಸುವ ಮನುಷ್ಯನ ನಿತಾಂತ ಆಸ್ಥೆ ಕಂಡು ಸಂತಸವೆನಿಸತು ನನಗೆ.  ಪ್ರಪಂಚ ಕ್ರೂರವಾಗುತ್ತ ನಡೆದಿದೆ.  ಜೀವ ಪ್ರೀತಿಯ ಅಮಾಯಕರನ್ನು ಚಾಕೂ, ಮಚ್ಚು, ಖಡ್ಗ ತ್ರಿಶೂಲಗಳಿಂದ ಇರಿದಿರಿದು ಕೊಲ್ಲಲಾಗುತ್ತಿದೆ.  ಬಾಂಬು ಸ್ಪೋಟಿಸಿ ಛಿದ್ರಿಸಲಾಗುತ್ತಿದೆ.  ಬದುಕಿಸುವ ಪ್ರಕೃತಿಯನ್ನು ಅದರ ಚೆಲುವನ್ನು ನಿರ್ದಾಕ್ಷಿಣ್ಯವಾಗಿ ವಿಕಾರಗೊಳಿಸುವ, ಅಧಮವಾಗಿ ಉಡಾಯಿಸುವ ರಾಕ್ಷಸಿ ಪ್ರವೃತ್ತಿಯವರಿಗೆ ಎಲ್ಲವನ್ನೂ ಸುಡಗಾಡು ಮಾಡುವ ತವಕ. ಚಿಂತಿತನಾಗಿದ್ದ ನಾನು.  ಕೋರಟಕರ ಬಾಳೆಹಣ್ಣು ಹುಡುಕಿಕೂಂಡು ಹೋಗಿದ್ದರು.  ಅವರ ಜೊತೆಯಲ್ಲಿ ಶಿರಹಟ್ಟಿಮಠ ಇದ್ದರು ಬಾಗವಾನ, ಮಹೇಶ, ಮುರುಗನ್ ತಿಕೀಟು ಕೌಂಟರ್‍ನ ಸರದಿಯಲ್ಲಿದ್ದರು.

ಅಮರಬಾಬು ದೂರದಿಂದ ಬರುವುದು ಕಾಣಿಸಿತು. “ಸರ್, ಆ ವ್ಯಕ್ತಿ ಈ ಕಡೆಗೆ ಬರಾಕ ಹತ್ಯಾನ” ನಾನು ಹಂಚಾಟೆಯವರಿಗೆ ಹೇಳಿದೆ. “ಅವನ ಬಗ್ಗೆ ನಿಮಗೊಳ್ಳೆ ಆಸಕ್ತಿ ಹುಟ್ಟಿಕೊಂಡೈತಿ” ಎಂದರವರು.  ಅವನು ನಮ್ಮ ವ್ಯಾನ್ ಸಮೀಪ ಬಂದ.  ತುಸು ದೂರದಲ್ಲಿ ನಿಂತು ಸಿಗರೇಟು ಸೇದುತ್ತಿದ್ದ ರಸೀದನಿಗೆ ಮಾಮೂಲಿಯಾಗಿ `ಸಲಾಂ’ ಹೇಳಿದ. ಹೊಗೆ ಉಗುಳುತ್ತ ರಸೀದ್ “ಕಲ್ ಪಾಂಚ್ ರುಪೆ ದೇದಿಯಾ ನಾ ?” ಎಂದ.

“ಜೀ..ಸಾಬ್” ಸೆಲ್ಯೂಟ್ ಮಾಡಿದ ಕೈಯನ್ನು ಹಣೆಯ ಮೇಲಿಂದ ತೆಗೆಯದೆ ಹೇಳಿದ ಆಮರಬಾಬು.  “ಫಿರ್..ಕ್ಯಾ ಚಾಯಿಯೆ?” ಧ್ವನಿಯೆತ್ತರಿಸಿದ ರಸೀದ್.  ಈಗ ಅಮರಬಾಬು ಮಾತಾಡಲಿಲ್ಲ. ಮೈಮೇಲಿನ ಹರಕು ಶರ್ಟು ಬಿಚ್ಚಿ ಮೌನವಾಗಿ ವ್ಯಾನ್ ಮೇಲಿನ ಧೂಳು ಒರೆಸತೊಡಗಿದ.  ಅವನದು ಮೂವತ್ತು ಮೂವತ್ತೈದರ ಪ್ರಾಯ ಇರಬಹುದು. ಎತ್ತರದ ಸಪೂರ ದೇಹ.  ಮುಖದ ಕಾಂತಿಯನ್ನು ಮರೆಮಾಚಿದ ಕುರುಚಲು ಗಡ್ಡ-ಮೀಸೆ.  ತಲೆತುಂಬ ದಟ್ಟ ಜಿದ್ದುಗಟ್ಟಿದ ಗುಂಗುರು ಕೂದಲು.  ದಿಟ್ಟಿಸುವ ಕಣ್ಣುಗಳಲ್ಲಿ ಮಡುಗಟ್ಟಿದ ನೈರಾಶ್ಯ.  ವ್ಯಾನ್ ಮೇಲಿನ ಧೂಳು ಕೂಡವಿ, ಶರ್ಟನ್ನು ಮುದ್ದೆಮಾಡಿ ಬಗಲನಲ್ಲಿಟ್ಟುಕೊಂಡು ನಿಂತ ಆಮರಬಾಬು. ಅವನ ವಿಶಾಲ ಎದೆಯಲ್ಲಿದ್ದ ಹಚ್ಚೆಯಲ್ಲಿ ತಾಜಮಹಲ ಚಿತ್ತಾರ ಕಂಡಿತು.  ಅದರ ಮಧ್ಯೆ ಪ್ರೀತಿ ಎಂಬ ಹಿಂದಿ ಲಿಪಿ.  ಅದಮ್ಯ ವಿಸ್ಮಯ ನನಗೆ.  ಅದನ್ನು ಗಮನಿಸಿದವನಂತೆ ರಸೀದ್ ಹೇಳಿದ.  “ಶಾಹಜಹಾನ್ ಬೇಗಮ್‍ಳಿಗೆ ನೆಲದ ಮೇಲೆ ತಾಜಮಹಲ್ ಕಟ್ಟಿಸಿದ.  ಅಮರಬಾಬು ತನ್ನ ಹುಡುಗಿಗಾಗಿ ಎದೆಯ ಮೇಲೆ ತಾಜ್‍ನ ಹಚ್ಚೆ ಹಾಕಿಸಿಕೂಂಡಿದ್ದಾನೆ.”

ಅಪಹಾಸ್ಯದ ಧಾಟಿಯಿರಲಿಲ್ಲ ಅವನ ಮಾತಿನಲ್ಲಿ.

“ಅಮರಬಾಬು ನೀನು ಪ್ರೇಮಿಸಿದ ಹುಡುಗಿ ಯಾರು?” ಹಿಂದಿಯಲ್ಲಿ ಕೇಳಿದ ನಾನು.
“ಪ್ರೀತಿ” ಉತ್ಸಾಹದಿಂದ ಹೇಳಿದ ಅವನು.
“ತುಮ್ ಪ್ರೀತಿಕೊ ಬಹುತ್ ಪ್ಯಾರ್ ಕರತೆ ಥೆ ನಾ?” ರಸೀದ್ ಕೇಳಿದ.
“ಆಜ್‍ಬಿ ಕರತಾ ಹೂಂ. ಆಖರಿ ದಮ್‍ತಕ್ ಕರತಾ ರಹುಂಗಾ” ಅಮರಬಾಬುವಿನ ಅಂತರಾಳ ಉಸುರಿತ್ತು.  ಅದರ ಜಾಡಿನಲ್ಲಿಯೇ ಕೇಳಿದೆ ನಾನು “ಫಿರ್ ಓ ಕಹಾನಿ ಕ್ಯಾ ಹೈ?”

ಆಮರಬಾಬು ನನ್ನತ್ತ ಮುಖ ತಿರುಗಿಸಿದ.  ಅವನ ಕಣ್ಣು ಒದ್ದೆಯಾಗಿದ್ದವು.

ಕಸಿವಿಸಿಯೆನಿಸಿತು ನನಗೆ “ಚಾಯ್ ಪೀವೋಗೆ?” ಕೇಳಿದೆ ನಾನು.  ಅವನು ಶರ್ಟಿನಿಂದ ಕಣ್ಣೀರು ಒರೆಸಿಕೊಳ್ಳುತ್ತ `ಹೂಂ’ ಎನ್ನುವಂತೆ ಕತ್ತು ಅಲ್ಲಾಡಿಸಿದ.  “ಠೀಕ್ ಹೈ ಚಲೋ” ರಸೀದ್ ಅವನನ್ನು ಮುಂದೆ ಹಾಕಿಕೊಂಡು ನಡೆದ.  ನಾನು ಹಿಂಬಾಲಿಸಿದೆ.

ಚಹದ ಗಾಡಿಯೆದುರು ನಿಂತಾಗ “ಕುಚ್ ತೊ ಖಾಲೇನಾ ?” ಎಂದೆ. ಆಮರಬಾಬು ಎರಡು ಕಚೋರಾಗಳನ್ನು ಗಬಗಬನೆ ತಿಂದು, ಚಹ ಕುಡಿದ.  ಹಸಿವು ಹಿಂಗಿತೇನೋ, ಕಣ್ಣಿನಿಂದಲೇ ಕೃತಜ್ಞತೆ ಸೂಚಿಸಿದ ಆವನು.  ನಾವೂ ಚಹಾ ಕುಡಿದೆವು.  ಹಣ ಇಸಿದುಕೂಳ್ಳುವಾಗ ಹೊಟೇಲಿನವನು ಕೇಳಿದ “ಆಮರಬಾಬುನ ಕಥೆ ಕೇಳಿದಿರಾ?”

“ನಿಮಗೂ ಗೊತ್ತು ಅವನ ಕಥೆ ?” ಪ್ರತಿಯಾಗಿ ಕೇಳಿದೆ ನಾನು.

“ಅವನದು ಮುಗಿಯದ ಕಥೆ” ಎಂದು ನಕ್ಕ ಆವನು.

ಈಚೆಗೆ ಬಂದಾಗ ರಸೀದ್ ಹೇಳಿದ “ಅಮರಬಾಬು, ತಾಜಮಹಲ್‍ನತ್ತ ದೃಷ್ಟಿ ಹೊರಳಿಸಿ `ಏಕ್ ಶಾಹಜಹಾನ್ ಬನವಾ ಕೆ ಹಸಿ ತಾಜಮಹಲ್ | ಹಮ್ ಗರಿಬೋಂಕಿ ಮೊಹಬತ್ ಕಾ ಉಡಾಯಾ ಹೈ ಮಜಾಕ್ ||” ಸಾಹಿಲ್‍ನ ಕವಿತೆಯ ಸಾಲೊಂದನ್ನು ಉಲಿಯುತ್ತ ತಲೆಯ ಮೇಲೆ ಶರ್ಟನ್ನು ಬೀಸುತ್ತ ಹೊರಟೇ ಹೋದ.

ರಸೀದ್ ನಕ್ಕ. ನನಗೆ ನಿರಾಶೆಯೆನಿಸಿತು. ವ್ಯಾನ್ ಹತ್ತಿರಕ್ಕೆ ಬಂದಾಗ ರಸೀದನೆ ಆಮರಬಾಬುವಿನ ಕಥೆ ಹೇಳಿದ.

– ೪ –

ಆಗ್ರಾ ಶಹರದ ಕೊಳಗೇರಿ ಪ್ರದೇಶದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಆಮರಬಾಬು.  ಸೈಕಲ್ ರಿಕ್ಷಾ ತುಳಿಯುತ್ತಿದ್ದ, ಅವನ ತಂದೆ ಎದೆನೋವಿನಿಂದ ಆಸುನೀಗಿದಾಗ ಅವನಿಗಿನ್ನು ಚಿಕ್ಕ ವಯಸ್ಸು.  ತಾಯಿ ತಾಜ್‍ಮಹಲ್ ಬಗೀಚನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಅರಮಬಾಬು ಪ್ರೇಮಿಸಿದ ಹುಡುಗಿ ಪ್ರೀತಿ.  ಅವಳ ತಂದೆ ಆಲ್ಲಿ ಕೂಲಿಯಾಗಿದ್ದ.  ತಾಯಿಗೂ ಕೂಲಿಯ ಕೆಲಸವಿತ್ತು ಅವರ ಝೊಪಡಿಗಳು ಕೂಡ ಎದುರು-ಬದುರಾಗಿದ್ದವು.  ಪರಸ್ಪರರಲ್ಲಿ ಸಂಬಂಧವೂ ಅನ್ಯೋನ್ಯವಾಗಿತ್ತು.  ತಾಜಮಹಲಿನ ಪರಿಸರದಲ್ಲಿಯೇ ಅಮರಬಾಬು-ಪ್ರೀತಿ ಆಡಿಕೊಂಡು ಬೆಳೆದಿದ್ದರು.

ಅವನು ಮೆಟ್ರಿಕ್ಯುಲೇಶನ್ ಓದುತ್ತಿರುವಾಗ ಪ್ರೀತಿ ಏಳನೆಯ ತರಗತಿಯಲ್ಲಿ ಆಭ್ಯಸಿಸುತ್ತಿದ್ದಳು.  ಓದಿನ ಹಂಬಲದ ನಡುವೆಯೂ ಆವನು ಸ್ಯೆಕಲ್ ರಿಕ್ಷಾ ನಡೆಸುತ್ತಿದ್ದ.  ಪ್ರೀತಿಯನ್ನು ಶಾಲೆಗೆ ಬಿಟ್ಟು ಮತ್ತೆ ಕರದು ತರುವ ಜವಾದ್ದಾರಿಯೂ ಅವನದೇ ಆಗಿತ್ತು.  ಆಕೆ ಹೈಸ್ಕೂಲಿಗೆ ಸೇರಿಕೊಂಡ ಮೇಲೆ ಅಮರಬಾಬು ಪಗಾರದ ಮೇಲೆ ರಿಕ್ಷಾ ಓಡಿಸಲಾರಂಭಿಸಿದ್ದ.  ಆದೇ ಹೊತ್ತಿಗೆ ಪ್ರೀತಿ ಮೈನೆರೆದಿದಳು.  ಅವಳ ದೇಹದಲ್ಲಿ ಬದಲಾವಣೆ ಕಂಡಿತ್ತು.  ಪರಿಮಳ ಸೂಸುವ ಹೂವಿನಂತಿದ್ದ ಆಕೆಯ ಮಾತಿನಲ್ಲಿ ನೋಟದಲ್ಲಿ ಲಜ್ಜೆ ಅಪೂರ್ವವೆನಿಸಿತ್ತು.  ಅಮರಬಾಬು ಅವಳಿಗೆ ತೀವ್ರ ಆಕರ್ಷಿತನಾಗಿದ್ದ.

ತಾಜಮಹಲ್ ಅವರಿಬ್ಬರಲ್ಲಿ ಮೊಹಬತ್ ಸೃಜಸಿತ್ತು.  ಯಮುನೆಯ ತೀರ, ಕೆಂಪುಕಿಲ್ಲಾ ಅವರ ಕನಸುಗಳಿಗೆ ರಂಗು ತುಂಬಿದ್ದವು. ಅವರ ಪ್ರೇಮದ ಒಡನಾಟದಿಂದ ಹಿರಿಯರಿಗೆ ಸಂತೋಷ ಅನಿಸಿತ್ತು.  ಪ್ರೀತಿ ಮೆಟ್ರಿಕ್ ಮುಗಿಸುತ್ತಿರುವಂತೆ ಅಮರಬಾಬು ರಿಜರ್ವ್ ಪೋಲೀಸ್ ಹುದ್ದೆಗೆ ಆಯ್ಕೆಯಾಗಿದ್ದ.  ತರಬೇತಿಗೆ ಹೋಗುವ ಮೊದಲು ಮದುವೆಯಾಗಲು ಪ್ರೀತಿ ಅವನನ್ನು ಒತ್ತಾಯಿಸಿದ್ದಳು.  ತನ್ನ ಮೇಲೆ ವಿಶ್ವಾಸವಿಡು ಎಂದಿದ್ದ ಅಮರಬಾಬು. “ನೌಕರಿ ಮಾಡುವವರಿಗೆ ವರದಕ್ಷಿಣೆ ಆಸೆ ಹೆಚ್ಚು” ಎಂದಾಕೆ ಕೆಣಕಿದ್ದಳು.  “ನಾನು ನೌಕರಿ ಮಾಡುವುದು ನಿನ್ನ ಸಲುವಾಗಿ. ನಿನ್ನನ್ನು ರಾಣಿಯಂತೆ ಇಡುವ ಆಸೆ ನನಗೆ” ಅಮರಬಾಬು ಒಡಲ ಮಾತು ಹೇಳಿದ್ದ.

“ನಾನು ಬಡವರ ಹುಡುಗಿ” ವಾಸ್ತವ ನೆನೆಪಿಸಿ ಕೊಟ್ಟಿದ್ದಳಾಕೆ.

“ನಾನೇನು ಅಮೀರನೆ ?” ಅವನು ಕೇಳಿದ್ದ.

“ನೌಕರಿ ಬಂದ ಮೇಲೆ ನೀನು ಆಮೀರನಾಗುತ್ತಿ” ಆಕೆ ಗಂಭೀರವಾಗಿ ಹೇಳಿದ್ದಳು. “ನೀನೂ ಆಮೀರಳಾಗುತ್ತಿ” ಎಂದು ಅವಳನ್ನು ತನ್ನ ಎದೆಯಲ್ಲಿ ಹುದುಗಿಸಿಕೂಂಡಿದ್ದ ಅಮರಬಾಬು.

“ನನ್ನ ಮೇಲೆ ಅಷ್ಟು ಪ್ರೀತಿಯೆ ನಿನಗೆ ?” ಪರೀಕ್ಷಿಸುವಂತೆ ಕೇಳಿದ್ದಳು ಪ್ರೀತಿ.

“ನೀನಿಲ್ಲದಿದ್ದರೆ ಈ ಎದೆಗೆ ಉಸಿರಾಟವೇ ಇಲ್ಲ” ತಟ್ಟನೆ ಹೇಳಿದ್ದ ಆಮರಬಾಬು.

“ಬಾದಶಾಹ ಶಾಹಜಹಾನ ಮುಮತಾಜ್‍ಳನ್ನು ಹೀಗೆ ಪ್ರೀತಿಸುತ್ತಿದ್ದ”

“ಹೂಂ”

“ಅವಳ ಪ್ರೀತಿಗಾಗಿ ಈ ತಾಜ್‍ಮಹಲ್ ಕಟ್ಟಿಸಿದ”

“ಹೂಂ”

“ನನ್ನ ಸಲುವಾಗಿ ನೀನೇನು ಮಾಡುತ್ತಿ?” ಹುಡುಗಾಟ ಮಾಡಿದ್ದಳಾಕೆ
.
“ನಾನಂತೂ ಶಾಹಜಹಾನ ಅಲ್ಲ ಆದರೆ ನನ್ನದೆಯ ಮಹಲಿನೊಳಗೆ ನಿನ್ನನ್ನು ತುಂಬಿಕೂಂಡಿರುತ್ತೇನೆ” ಗಾಢವಾಗಿ ಉಲಿದಿದ್ದ ಆವನು.

ಮರುದಿನ ನೋಡಿದರೆ ಅವನು ಎಂಥ ಸಂಕಟ ಆನುಭವಿಸತೊಡಗಿದ್ದ.  ತನ್ನ ಎದೆಯ ತುಂಬ ತಾಜಮಹಲ್‍ನ ಹಚ್ಚೆ ಹಾಕಿಸಿಕೊಂಡು ಆವಳೆದುರು ನಿಂತಿದ್ದ.
ಹೆಪ್ಪುಗಟ್ಟಿದ ರಕ್ತಕಣಗಳಲ್ಲಿ ಅಸಾಧ್ಯ ಯಾತನೆ.  ಅದು ಪ್ರೀತಿಗಾಗಿಯೇ ಅಂದಿದ್ದ.  ಅವನ ತಾಯಿ, ಆತ್ತೆ-ಮಾವ ಗಾಬರಿಯಾಗಿದ್ದರು.  ಅವನ ಹುಚ್ಚಾಟ ಕಂಡು ನಕ್ಕಿದ್ದರು ಕೂಡಾ. ಪ್ರೀತಿ ತನ್ನೊಡಲ ಉಸಿರಿನಿಂದ ಅವನೆದೆಯ ಗಾಯ ಮಾಯಿಸಿದ್ದಳು.  ಪೋಲೀಸ್ ತರಬೇತಿಗೆ ಸಂತೋಷದಿಂದ ಬೀಳ್ಕೊಟ್ಟಳು.

ಯಮುನೆ ಹರಿಯುತ್ತಿದ್ದಳು. ಸೂರ್ಯ-ಚಂದ್ರ ಬೆಳಗುತ್ತಿದ್ದರು.  ತಾಜಮಹಲ್ ನೋಡುವ ಜನರ ಧಾವಂತದಲ್ಲಿ ಸಡಗರವಿತ್ತು ಒಮ್ಮೆಯಾದರೂ ಪ್ರೀತಿ ಆ ಕಡೆಗೆ ಸುಳಿದಾಡಲಿಲ್ಲ.  ಅಮರಬಾಬು ಅವಳಿಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದ.

ಆ ದಿನ ಬೆಳಗಿನ ಹೊತ್ತು ಒಲೆಯ ಮುಂದೆ ಕುಳಿತ ಪ್ರೀತಿ ಪರೋಟ ಬೇಯಿಸುತ್ತಿದ್ದಳು.  ಅವಳ ತಾಯಿ-ತಂದೆ ಮನೆಯಲ್ಲಿಯೇ ಇದ್ದರು.  ಇದ್ದಕ್ಕಿದ್ದಂತೆ ಆ ಏರಿಯಾದ ಕಾರ್ಪೋರೇಟರ್ ಸಂಜಯಗುಪ್ತಾ ತನ್ನ ಹೆಂಡತಿ, ಮಗನನೊಂದಿಗೆ ಕಾರಿಳಿದು ಝೊಪಡಿ ಹೊಕ್ಕಿದ್ದ.  ಸುತ್ತುಬಳಸಿ ಮಾತಾಡದೆ ಪರಸ್ಪರ ಬೀಗರಾಗೋಣ ಅಂದಿದ್ದ.  ಅವನ ಮಗ ರಾಜೇಂದ್ರನ ಕಣ್ಣು ಪ್ರೀತಿ ಮೇಲೆ ನೆಟ್ಟಿತ್ತು ಅವಳ ರೂಪಕ್ಕೆ ತಲೆಕೆಡಿಸಿಕೊಂಡಿದ್ದ ಅವನು.  ಅವಳನ್ನೆ ಮದುವೆಯಾಗುವುದಾಗಿ ಹಠ ಹಿಡಿದಿದ್ದ. ತನ್ನ ವರ್ಚಸ್ಸಿನ ಪ್ರಭಾವದಲ್ಲಿ ಉಡಾಳರ ಗ್ಯಾಂಗ್ ಲೀಡರಾಗಿ ಅಧ್ವಾನಗಳನ್ನು ಎಸಗುತ್ತಿದ್ದ ಮಗನನ್ನು ನಿಯಂತ್ರಿಸಲು ಗುಪ್ತಾನಿಗೆ ಈ ಸಂಬಂಧ ಆನಿವಾರ್ಯವೆನಿಸಿತ್ತು.  ಪ್ರೀತಿಯನ್ನು ತನ್ನ ಸೊಸೆಯನ್ನಾಗಿ ಮಾಡಿಕೊಳ್ಳಲು ಅವನು ತೀರ್ಮಾನಿಸಿದ್ದ.  ಪ್ರೀತಿ ಅವನ ನಿರ್ಧಾರವನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಳು.  ಅಮರಬಾಬುನೊಂದಿಗೆ ಆಕೆಯ ನಿಶ್ಚಿತಾರ್ಥ ಆಗಿದೆಯೆಂದು ತಂದೆ-ತಾಯಿ ಸ್ಪಷ್ಟಪಡಿಸಿದ್ದರು. “ಪ್ರೀತಿ ನನ್ನ ಹೆಂಡತಿಯಾಗದಿದ್ದರೆ ನಾನು ವಿಷ ಕುಡಿಯುತ್ತೇನೆ.  ಯಮುನೆಗೆ ಹಾರಿಕೂಳ್ಳುತ್ತೇನೆ” ಎಂದು ರಾಜೇಂದ್ರ ಹೆದರಿಸಿದ್ದ.

“ನೀನು ಸತ್ತರೆ ನನಗೇನು? ನಾನು ಅಮರಬಾಬುನ ಹೆಂಡತಿ” ಪ್ರೀತಿ ದೃಢಪಡಿಸಿದ್ದಳು.  ಅವಮಾನದ ಮುಖ ಹೊತ್ತು ಹೋಗಿದ್ದ ರಾಜೇಂದ್ರ.  ಈ ಸಂಗತಿಯನ್ನು ಯಾರು ಆಮರಬಾಬುವಿನ ಕಿವಿಗೆ ತಾಕಿಸಲಿಲ್ಲ.  ಪ್ರೀತಿ ಅವನಿಗೆ ಬರೆದ ಕಾಗದದಲ್ಲಿ “ನೀನು ಬಂದ ಕೂಡಲೇ ಮದುವೆ” ಎಂದು ತಿಳಿಸಿದ್ದಳು.

ಅದರ ನಂತರದ ನಾಲ್ಕಾರು ದಿನಗಳಲ್ಲಿ ಆಘಾತಕರ ಸುದ್ದಿ ಆಮರಬಾಬುವಿನ ಎದೆಯೊಡೆಸಿತ್ತು.  ಪ್ರೀತಿ ಯಮುನಾ ನದಿಯಲ್ಲಿ ಮುಳುಗಿ ಸತ್ತಳು.  ಧಾವಿಸಿ ಬಂದ ಅಮರಬಾಬು ಆವಳ ಮುಖ ನೋಡಲಿಲ್ಲ.  ಅವಳ ಬೆತ್ತಲೆಯ ಶರೀರ ನೀರಲ್ಲಿ ನೆನೆದು ಮುಟ್ಟಲು ಆಸಾಧ್ಯವೆನಿಸಿತ್ತು.  ಪೋಲೀಸರು ಗಡಿಬಿಡಿಯಲ್ಲಿ ಮಹಜರು ನಡೆಸಿ ನದಿಯ ದಡದಲ್ಲಿಯೇ ಹೂಳುವ ವ್ಯವಸ್ಥೆ ಮಾಡಿದ್ದರು.

ಅಮರಬಾಬು ಅಲ್ಲಿ ಕುಳಿತು ಇಡೀ ದಿನ ರೋಧಿಸಿದ್ದ.

ರಾಜೇಂದ್ರನ ರಾಕ್ಷಸಿಯೊಡಲಲ್ಲಿ ಅವಮಾನದ ಕೆಂಡ ಪ್ರಜ್ವಲಿಸಿತ್ತು.  ಅವನು ಆ ನಡುಹಗಲಲ್ಲಿ ಗುಡಿಸಲು ಹೊಕ್ಕು ಪ್ರೀತಿಯನ್ನು ಕಾರಿನೊಳಕ್ಕೆ ಹಾಕಿಕೊಂಡು  ಹೋಗಿದ್ದ ಅವನೊಂದಿಗೆ ಇನ್ನೂ ನಾಲ್ಕು ಹುಡುಗರಿದ್ದರು.  ಅವಳ ತಲೆಯ ಮತ್ತು ದೇಹದ ಮೇಲೆ ಪರಚಿದ ಗಾಯಗಳಿದ್ದವು.  ಸಾಮೂಹಿಕ ಅತ್ಯಾಚಾರಕ್ಕೆ ಪ್ರೀತಿ ಒಳಗಾಗಿದ್ದಳು.  ಆದರೆ ಪೋಲೀಸರು ತಮ್ಮ ಮಹಜರಿನ ವರದಿಯಲ್ಲಿ ಗಾಯದ ಗುರುತುಗಳನ್ನು ದಾಖಲಿಸಲಿಲ್ಲ.  ವೈದ್ಯರ ಸರ್ಟಿಫಿಕೇಟ್ ಅವಳ ಮೇಲೆ ಆತ್ಯಾಚಾರ ಸಂಭವಿಸಿಲ್ಲವೆಂದು ಖಚಿತಗೊಳಿಸಿತ್ತು. ಪತ್ರಿಕೆಗಳು ಅವಳದ್ದು ಆತ್ಯಹತ್ಯ ಪ್ರಕರಣ ಎಂದು ಹೂತು ಹಾಕಿದ್ದವು.  ರಾಜೇಂದ್ರ ಮತ್ತು‌ ಅವನ ಗೆಳೆಯರು ರಾಜಾರೋಷವಾಗಿ ತಿರುಗಾಡಿಕೊಂಡಿದ್ದರು.  ಪ್ರೀತಿಯ ತಾಯಿ-ತಂದೆಗಳ ಸಂಕಟ, ಹೋರಾಟಗಳು ಗುಪ್ತಾನ ಹಣ ಮತ್ತು ಅಧಿಕಾರಗಳೆದುರು ನಪುಂಸಕವೆನಿಸಿದ್ದವು.  “ನನ್ನ ಪ್ರೀತಿಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು” ಎಂದು ಆಮರಬಾಬು ರಸ್ತೆಗಿಳಿದು ಕೂಗಿಕೂಂಡ.  ಅವನನ್ನು ಪಾಪ ಎನ್ನುವಂತೆ ನೋಡಿದರು ಜನ.  ಬೂರ್ಜ್ವಾ ವ್ಯವಸ್ಥೆಯಿಂದ ಬೇಸತ್ತ ಅಮರಬಾಬು ಕೆರಳಿದ.  ತಲೆ ಕೆದರಿಕೊಂಡ.  ಅಂಗಿ ಹರಿದುಕೊಂಡ.  ಆಮೇಲೆ ಗಹಗಹಿಸಿ ನಕ್ಕ. ಕೆಲವರು ಆವನನ್ನು ಹುಚ್ಚ ಎಂದರು. ಆ ಅವಸ್ಥೆಯಲ್ಲಿ ಅವನು ಆಗ್ರಾದ ಕಿಲ್ಲಾ, ತಾಜಮಹಲು, ಯಮುನಾ ತೀರಗಳಲ್ಲಿ ಪಿರಿಪಿರಿ ತಿರಿಗಿದ, ಪ್ರೀತಿ
ಸತ್ತಿಲ್ಲ ಎನ್ನುವಂತೆ.

ಹೀಗೆ ತಿರುಗಾಡಿಕೂಂಡು ಬಂದು ಪ್ರೀತಿಯನ್ನು ಹೂಳಿದ ಜಾಗೆಯಲ್ಲಿ ಕುಳಿತುಕೊಳ್ಳುತ್ತಿದ್ದ.  ಅವನ ಅವಸ್ಥೆ ತಾಯಿಯ ಸಂಕಟ ಹೆಚ್ಚಿಸಿತ್ತು.  ಅದು ಕೊರಗಾಗಿ ಅವಳನ್ನು ಬಲಿ ತೆಗೆದುಕೊಂಡಿತ್ತು.  ಅತ್ತೆ ಮಾವ ಅವನನ್ನು ಕರೆದೊಯ್ದು ಮನೆಯಲ್ಲಿ ಇರಿಸಿಕೊಂಡರೂ ಪ್ರೀತಿ…. ಪ್ರೀತಿಯೆಂದು ಕನವರಿಸುತ್ತಿದ್ದ ಅಮರಬಾಬು ಮತ್ತೆಮತ್ತೆ ತಾಜಮಹಲ್ ಪರಿಸರಕ್ಕೆ ಬಂದು ಬಿಡುವನು.  ಪ್ರೀತಿಗೊಂದು ಸಮಾಧಿ ಕಟ್ಟುವ ವಾಂಛೆಯಿಂದ ಏನೋ ಅವನು ಅಲ್ಲಿ ಇಲ್ಲಿಂದ ಕಲ್ಲು ಹೊತ್ತು ತರುವನು. ಆಸ್ಥೆಯಿಂದ ಎಂಬಂತೆ ಸಮಾಧಿ ಕಟ್ಟುವನು.  ಮುಮ್ತಾಜಳ ಭಾಗ್ಯ ಪ್ರೀತಿಗಿರಲಿಲ್ಲ.  ಶಹಜಹಾನನ ದೌಲತ್ತು ಅಧಿಕಾರ ಅಮರಬಾಬುಗಿರಲಿಲ್ಲ.  ತಾಜಮಹಲಿನ ಪಕ್ಕ ತನ್ನ ಪ್ರೀತಿಯ ಹುಡುಗಿಯ ಸಮಾಧಿಯನ್ನು ಸ್ಥಿರಗೊಳಿಸಬೇಕೆನ್ನುವ ಅವನ ಉತ್ಕಟ ಹಂಬಲ ಕ್ಕೆಗೂಡಲಿಲ್ಲ.  ದುರಾದೃಷ್ಟವೆನ್ನುವಂತೆ ವರ್ಷಕ್ಕೊಮ್ಮೆ ಉಕ್ಕಿ ಬರುವ ಯಮುನೆ ಈ ಸಮಾಧಿಯನ್ನು ಕೊಚ್ಚಿಕೊಂಡುಹೋಗಿಬಿಡುತ್ತಾಳೆ.  ಬಡವರ ಪ್ರೀತಿಗೆ ಯಾವ ಕುರುಹುಗಳು ಇರಬಾರದೆನ್ನುವಂತೆ.

ಕಥೆಯನ್ನು ಹೇಳಿ ಮುಗಿಸಿದ ರಸೀದನ ಧ್ವನಿಯಲ್ಲಿ ವಿಷಾದವಿತ್ತು.

ಅಮರಬಾಬುವಿನ ಎದೆಯ ಮೇಲಿನ ತಾಜಮಹಲ್ ಚಿತ್ತಾರ ನನ್ನ ಕಣ್ಣುಕಟ್ಟಿತ್ತು. ಒಳಗೆ ತಳಮಳ, ಮಿಡಿತ.  ಮಹೇಶ ಮತ್ತು ಮುರುಗನ್ ನಮ್ಮೆದುರು ಬಂದು ನಿಂತರು.  ಹುಣ್ಣಿಮೆ ಬೆಳಕಲ್ಲಿ ತಾಜಮಹಲ್ ನೋಡುವ ಜನಸಂದಣಿಯಲ್ಲಿ ತಾವು ಪ್ರವೇಶ ತಿಕೀಟು ದೊರಕಿಸಿಕೊಳ್ಳಲು ಹೋರಾಟ ಮಾಡಿದ ಸಾಹಸಗಾಥೆಯನ್ನು ಉತ್ಸಾಹದಿಂದ ವಿವರಿಸಿದರು.  ನನಗದು ಅಗಾಧವೆನಿಸಲಿಲ್ಲ.  ಆಕಾಶದಲ್ಲಿ ಪೂರ್ಣ ಚಂದಿರ ಆಪೂರ್ವವೆನಿಸತೊಡಗಿದ್ದ.  ತನಗೆ ತಾಜ್ ನೋಡಬೇಕೆನಿಸಲಿಲ್ಲ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾದಾಯಿ
Next post ಕಲ್ಯಾಣಿಯು ಕರುಣವಾಯಿತು ನಮಗ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…