ರತ್ನ

ದಾರೀಲ್ ಆರೆ ಗುದ್ಲಿ ಯಿಡ್ದಿ
ರತ್ನ ಅಳ್ಳ ತೋಡ್ತಾನೆ
ಮೇಸ್ತ್ರಿ ನೋಡ್ತಾನೆ;
ತೋಡ್ತಿದ್ದಂಗೆ ಏನೋ ನೋಡ್ತ
ಆರೇ ವೂರಿ ನಿಲ್ತಾನೆ!
ಬೆಪ್ಪಂಗ್ ನಿಲ್ತಾನೆ! ೧

ಎದುರಿನ್ ಬೇಲೀಲ್ ಬಿಟ್ಟಿದ್ ಊವು
ರತ್ನನ್ ಕಣ್ಗೆ ಬೀಳ್ತಾದೆ
ನೆಪ್ಗೊಳ್ ಏಳ್ತಾದೆ;
ಊವಿನ್ ಮುಡಿದಿದ್ ನಂಜೀ ಬೊಂಬೆ
ಕಣ್ಣಿನ್ ಮುಂದೆ ಯೇಳ್ತಾದೆ
ಆಸೆ ಕೆಳ್ತಾದೆ. ೨

ಯಿಡಿದಿದ್ದ್ ಆರೇನ್ ಅಂಗೇ ಬುಟ್ಟಿ
ರತ್ನ ಕುಡಿದಂಗ್ ಓಗ್ತಾನೆ
ಮೇಸ್ತ್ರಿ ಕೂಗ್ತಾನೆ;
ಮನೆಗೋಗೋನ್ಗೆ ‘ಲೋ’ ಅಂತಂದಿ
ಕೂಗ್ತ ಲಾಗ ಆಕ್ತಾನೆ!
ಕೂದ್ರೆ ಕೂಗ್ತಾನೆ! ೩

ಅಟ್ಟೀಲ್ ಕಾಡಿಗೆ ಕಣ್ಣಿನ್ ನಂಜಿ
ರತ್ನನ್ ಕಂಡಿ ಉಕ್ತಾಳೆ
ಕಣ್ಣಲ್‌ ಮುಕ್ತಾಳೆ;
ನಿಂತಿದ್ ನಂಜೀನ್ ನೋಡ್ತಿದ್ದಂಗೇ
ಇಬ್ಬರ್‌ ಮನಸೂ ಯಿಗ್ತಾದೆ
ಎಳ್ಡ್ ಒಂದಾಗ್ತದೆ! ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಣಿಜೀವನ
Next post ಪ್ರೇಮೋಪನಿಷತ್ತು

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…