
ಹಮ್ ಶರಾಬ ಪೀನೇಸೆ ದಿಲ್ ತನ್ ತಹೂರ ಬನ್‍ಗಯಾ || ಪ || ರಮ್‍ಜ ಇಸ್ಲಾಮ ಮೊಹಮ್ಮದಕಾ ಕಲ್ಮಾಪಾಕ ರಹಾ || ಅ. ಪ. || ದೇಖತೆ ಇರಫಾನಿ ಇರಾದೆ ಸೂಯತೀತೋ ಐನಕಾ ಭೂಕ ಪ್ಯಾಸ ಉಢರಹೆ ಏಕನೈನ ದಿಸರಹಾ || ೧ || ಲಾಲ ವಿಲಾಯತಮೆ ಶಿಶುನಾಳ ಓ ರೋಶನ್ ಹುವಾ ಬೋಲ...
ದರ್ಬಾರ ಮದೀನಶಾರದೊಳು ಸದರ ಮಹಮ್ಮದ ಪೀರಪೈಗಂಬರ ಚದುರತನದಿ ಚಲ್ವರಿದು ಮೆರೆಯುವ || ಪ || ತಾಬೂತಿನೊಳಗೊಂದು ಹಸ್ತವು ಶೋಭಿತ ಆರಸನ ಪರ್ದಿಯೊಳಗೆ ಬಂದು ಮಾಬೂಬನವರಿಗೆ ಮಹಿಮೆ ತೋರಿ || ೧ || ಸ್ಯೆಯದೀನ ಕಾಸೀಮ ಸಮರದಿ ಧಾಮಶಪುರ ಗಡಿಶೀಮೆ ಗೆಲಿದು ಭೂ...
ಇಳಿಪಾಲಯ ಇಮಾಮರು ಕಳಿಕಾಲ ಕಾಮನ || ಪ || ಕತ್ತಲ ಶಹಾದತ್ತ ಮಥನವು ಎರಡಕೆ ರತನಜ್ಯೋತಿ ರಾಜಿಸುವ ರಾಜ || ಅ. ಪ, || ಅರಿಶಿನ ಶರಗತ ಹೊರಟಿತು ತಾಬೂತ ಧರಿಗೆ ಮದೀನದಿ ಮೆರದಿತು ಮೋರಮ ತೆರದಿಟ್ಟ ಐಸುರ ಈಶ್ವರ || ೧ || ದಶದಿನಕೆ ಭೂಷಣ ಶಿಶುನಾಳಧೀಶನ ...
ಚಲೋ ಜೀನಾ ಚಲೋ ಬಾಹಿರೆ ಸುಲ್ತಾನೆ ಆಲಮ್ ಜಗತ್ || ಪ || ಕಂಜರಬೋಲಿ ಪಂಜರಲೋಲೆ ರಂಜ್ಯಾ ರಂಜ್ಯಾ ನೈನಮೆ ಬನಾಯಾ || ೧ || ಆಶುಮರನೆ ಚ್ಯಾಯಾ ಅಮರನೆ ಸಂಯ್ಯಾ ಸಂಯ್ಯಾ ಬಿನಜ್ಯಾ ಚಾಯೋರೆ || ೨ || ಸದರ ಗುಜರತಾ ಮದನಮೆ ಫಿರತಾ ಸದರ ಶಿಶುನಾಧೀಶಾಶೆ || ...
ನಾವು ಬಾಲಕರಹುದೋ ನೀವೆಲ್ಲರು ಕಾವಲಾಗಿರಬಹುದೋ || ಪ || ಪಾವನಾತ್ಮಕ ಯಾ ಮಹಮದ ಈ ಮಹಾಮಂತ್ರವನು ಜಪಿಸುತ ದೇವಲೋಕದ ಅಸ್ತ್ರ ಪಿಡಿದು ಆ ಯಜೀದನ ಸಮರಮುಖದಲಿ || ಅ. ಪ. || ಹೋಗಿ ಕರ್ಬಲದೊಳಗೆ ಕೂಗ್ಯಾಡುತ ಸಾಗಿ ಮಾರ್ಬಲದೊಳಗೆ ಈಗಳೇ ದಾಮಶದ ಪೇಟಿಯ ಬೇ...
ಶೆಟ್ಟಿ ಅದೇ ಊಟ ಮುಗಿಸಿ, ಎಲೆ ಅಡಿಕೆ ಮೆದ್ದು ಅಣಿಗೊಳಿಸತೊಡಗಿದ್ದಾನೆ. ಪ್ರಯಾಣದ ಸಿದ್ಧತೆಯೆಂದು ತೋರುತ್ತದೆ. ರುದ್ರಾಕ್ಷಿ ಪೇಟೆಯ ಧೋತರ ಉಟ್ಟಿದ್ದಾನೆ. ಅವೆಂಥವೋ ಚಮ್ಮಳಿಗೆ ಮೆಟ್ಟದ್ದಾನೆ. ಬೆರಳಲ್ಲಿ ಉಂಗುರ. ಎದೆಯ ಮೇಲೆ ಸಜ್ಜೇದ ಚೌಕ, ಕೈಯಲ್...
ಹೊಲದಲ್ಲಿ ನಿಂತು ನಕ್ಷತ್ರಗಳನ್ನು ಕೈ ಬೀಸಿ ಕರೆಯುತ್ತಾಳೆ ತನ್ನೊಲುಮೆಯ ಹೂವಿಗಾಗಿ, ಬಿಸಿರಕ್ತದ ಪರಿಮಳಕ್ಕಾಗಿ ಕ್ರೂರ ಪ್ರೀತಿಗಾಗಿ. ಬೇಡ ಗೆಳತಿ, ಇನ್ನೆಷ್ಟು ದಿನ ಉಳಿದೀತು ಈ ಅಸಹಾಯಕ ಜಗತ್ತು? ಹಗಲಿನ ವೇಷದಲ್ಲಿ ರಾತ್ರೆಗಳನ್ನು ಹೊದೆಯ...
ಆಫೀಸಿನಲ್ಲಿ ಬೇಕಿಲ್ಲ ಗೋಡೆಗೆ ಗಡಿಯಾರ ತೂಕಡಿಕೆ, ಆಕಳಿಕೆ ನಿಮಿಷಕೆ ಎಷ್ಟು ಬಾರಿ ಎಂದು ಗುಣಿಸಿದರೆ ಸಾಕು ಸಿಕ್ಕೀತು ಮನೆಗೆ ಧಾವಿಸುವ ಗಂಟೆ ***** ...
ಹೈಯಾರೊ ಲೇವ್‍ಮೇರೆ ಮುಜರೆ ಸಲಾಮ || ಪ || ಶಬ್ಬೀರೋ ಶಬ್ಬರಕೆ ತೌಂಕರತಾಂವ್ ಮೈನೆ ಮುಜರಾ ಸಿದ್‍ಕೆ ದಿಲ್‍ಸೆ ಅಪನಾ ಪನ್ನಾಸೆ ಕರನಾ ಹೈ ಶಾಹಿರಕು ಸಲಾಮ || ೧ || ಹೈಯಾರೋ ಮುಸ್ಕಿಲ್ ಕುಶಾಕು ಸಲಾಮ ಹಸನಹುಸನ್ಕು ತೌಂಕರತಾಂವ್ ಮೈನೆ ಮುಜರಾ ಅಬ್ಬಸಕು...
ನನ್ನೊಳಗೆ ನೂರಾರು ಹಕ್ಕಿಗಳಿದ್ದವು. ಅವುಗಳಿಗೆ ಅವುಗಳದೇ ನೂರಾರು ಹಕ್ಕುಗಳಿದ್ದವು. ಒಂದು ದಿನ ದೇವತೆಗಳು ಬಂದರು. ಸ್ವರ್ಗಕ್ಕೆ ಕರೆದರು. ಹಕ್ಕಿಗಳು ನಾವು ಸ್ವಚ್ಛಂದ ಅಲೆದೆವು. ಹಾರಲು ನೀಲ ಆಕಾಶ ಪದ ಊರಲು ಇಂದ್ರಾಸನ. ದೇವತೆಗಳು ಬೆರಗಾದರು. ನಮ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....













