ಇನ್ನೇನು ನಾ ಬೇಡಲಿ ನಿನ್ನ
ನನ್ನ ಮನವೇ ನಿನ್ನದಾಗಿದೆ
ನನ್ನ ಮನವ ನಡೆಸುವಾತ ನೀನು
ನನ್ನದೆಲ್ಲವು ಈಗೊ ನಿನ್ನದಾಗಿದೆ
ಆಕಾಶದೆತ್ತರಕ್ಕು ಹಾರಲಿ ನಾನು
ಬುವಿಪಾತಾಳದಲಿ ಅಡಗಲಿ ನಾನು
ಗಾಳಿಯಲಿ ತೇಲಲಿ ನಾನು
ನನ್ನ ಮನವೆಲ್ಲ ತುಂಬಲಿ ನೀನು
ಅನಂತಕೋಟಿ ಬ್ರಹ್ಮಾಂಡಗಳ
ಒಡೆಯ ಪರಮಾತ್ಮ ನೀನು
ನನ್ನ ಮನದಂತರಾಳದಲ್ಲೂ ನಿ
ನಿತ್ಯ ಬೆಳಗುವವನು ನೀನು
ನಿನ್ನಹೊರತು ಇನ್ನೇನು ನಾನು
ಬೇಡದಂತೆ ನಿ ಮಾಡು
ನಿನ್ನೆ ನನ್ನ ದೈವದ ಇಂಬು
ಮಾಣಿಕ್ಯ ವಿಠಲ ನನ್ನ ಹಾಡು
*****














