ನಮ್ಮ ಮನೆಗೆ ತಂದೆವು ಟಿ.ವಿ
ನೋಡಬೇಕಿತ್ತಾಗ ನಮ್ಮ ಠೀವಿ
ಬಗೆಬಗೆಯ ಚಾನೆಲ್ ಇದರಲ್ಲಿ
ಅಪರಿಮಿತ ಸಂತೋಷ ನಮ್ಮ ಮನದಲ್ಲಿ
ಅಪ್ಪನಿಗೆ ನ್ಯೂಸ್ ನೋಡುವ ಚಟ
ತಂಗಿಗೆ ಕಾರ್ಟೂನ್ ಬೇಕೆಂಬ ಹಠ
ಧಾರಾವಾಹಿ ನೋಡಲು ಕಾತರ ಅಮ್ಮನಿಗೆ
ಕ್ರಿಕೆಟ್‌ನಲ್ಲಿ ಕುತೂಹಲ ತಮ್ಮನಿಗೆ
ಇದರಲ್ಲಿ ವೈವಿಧ್ಯಮಯ ಕಾರ್ಯಕ್ರಮ
ನಮಗೆ ಮನರಂಜನೆಯ ಸಂಭ್ರಮ
ಟಿ.ವಿ ಬಿಟ್ಟು ಮೇಲೇಳಲಾಗದ ಮೋಹ
ಇದನ್ನು ಕಂಡುಹಿಡಿದವರಿಗೆ ನಮೋನಮಃ
ಒಂದೇ ತಿಂಗಳಲ್ಲಿ ಟಿ.ವಿ.ಕೈಕೊಟ್ಟಿತು
ನಿರಂತರ ಬಳಕೆಯಿಂದ ಕೆಟ್ಟಿತ್ತು
ರಿಪೇರಿಗೆಂದು ಎಲೆಕ್ಟ್ರಿಶಿಯನ್ ಬಂದ
ಅರ್ಥವಾಗದ್ದನ್ನು ಹೇಳಿ ಐದು ಸಾವಿರತಿಂದ
ಅಷ್ಟರಲ್ಲಾಗಲೇ ಟಿ.ವಿ.ಯ ಸಹವಾಸ
ನಮಗೆ ಸಾಕಾಗಿತ್ತು
ಅಪ್ಪ ಗೊಣಗುತ್ತಿದ್ದರು- “ಟಿ.ವಿ ತರುವ
ಉಸಾಬರಿ ಯಾಕೆ ಬೇಕಾಗಿತ್ತು?”
*****

















