ನಾವು ಬಾಲಕರಹುದೋ

ನಾವು ಬಾಲಕರಹುದೋ
ನೀವೆಲ್ಲರು ಕಾವಲಾಗಿರಬಹುದೋ || ಪ ||

ಪಾವನಾತ್ಮಕ ಯಾ ಮಹಮದ
ಈ ಮಹಾಮಂತ್ರವನು ಜಪಿಸುತ
ದೇವಲೋಕದ ಅಸ್ತ್ರ ಪಿಡಿದು
ಆ ಯಜೀದನ ಸಮರಮುಖದಲಿ || ಅ. ಪ. ||

ಹೋಗಿ ಕರ್ಬಲದೊಳಗೆ ಕೂಗ್ಯಾಡುತ
ಸಾಗಿ ಮಾರ್ಬಲದೊಳಗೆ
ಈಗಳೇ ದಾಮಶದ ಪೇಟಿಯ
ಬೇಗನೆ ಮದೀನಶಾರದ
ಚಾಗಕ್ಹೋಗಿ ಹೊಂದುನು ಬಾ || ೧ ||

ಹಸುಳರೆಲ್ಲರು ನೆರೆದು ವಾರಿಗಿತಕ್ಕ
ಹೊಸ ಅಸ್ತ್ರವನು ತೊರಿದು
ವಸುಧಿಪತಿ ಶಿಶುನಾಳಧೀಶನು
ಮಸೆದು ಕೊಟ್ಟಂಥಸ್ತ್ರ ಪಿಡಿದು
ಅಸುವಗೊಂಬುವ ಈ ಕ್ಷಣದಿ ಗಡ
ಹುಸಿಯ ಮಾತುಗಳಾಡದೆ ನಡಿ || ೨ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲವಯ್ಯ ಶೆಟ್ಟಿ
Next post ಚಲೋ ಜೀನಾ ಚಲೋ ಬಾಹಿರೆ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…