ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್ ಹೋಗಬೇಕು, ನಾಳಿಗೆ ಹೋಗಬೇಕು ಹೇಳಿ ಯೆಷ್ಟೋ ದಿವಸ ಕಳದ ಹೋಯ್ತು. ಆ ದಿವ್ಸ ರಾಜರ ಮನಿಹತ್ರ ಹೇಳ್ದ. ‘ನಾ ಇವತ್ತ್ ನೆಂಟ್ರ ಮನಿಗ್ ಹೋಗಬೇಕು’ ಹೇಳಿ ನೆಡ್ದೆ ಬಿಟ್ಟ . ಅವ ಮೊಳೆಯಾಗಿ ಯೆಲ್ಲಾ ವಯ್ ಸ್ತ್ರ ಅದ್ದಿ, ವಂದ್ ಅಜ್ಜಿ ಮುದ್ಕಿ ಮನಿಲ್ ಹೋಗಿ ಕೂತ ಶನೀಪದಲ್ ವಂದ್ ಊರಲ್ಲಿ.
ಆ ಅಜ್ಜಿ ಮುದ್ಕಿ ಹತ್ರ ಹೇಳ್ತ ಯೇನಂದಿ? “ನಾನು ಇಲ್ಲೆ ಬಗಿಲ್ ಮನಿಕಳೆನೆ. ಸಲ್ಪ ಜಾಗ ಕೊಡ್ಬೇಕು” ಅಂದ. ಅಜ್ಜಿ ಮುದ್ಕಿ ಯೇನ್ ಹೇಳ್ತಾಳೆ? ಹೇಳದ್ರೆ, “ನಿನ್ಗೆ ಜಾಗಕೊಡ್ಲಿಕ್ಕೆ ಅಡ್ಡಿಲ್ಲ. ಹೊದಿಲಿಕ್ಕೆ ಮಾಡ್ಲಿಕ್ಕೆ ಯೆಲ್ಲಾ ಕೊಡ್ತೇನೆ. ನಾನು ವಂದ್ ರಾಜ್ರ ಮನಿಲಿ ಕೆಲ್ಸಕೆ ಹೋಗ್ತೆ ಇದ್ದೆ. ಅಲ್ಲಿ ಆ ದಿವಸ ಯೇನಾಗಿದೆ? ನಂದು, ರಾಜ್ರ ಮನಿ ಹುಡುಗಿಗೆ ಆಳು ಅಲ್ಲಿದ್ ನಾನು ಅದ್ ಕೆ ಕತೆ ದಿನಾಲೂ ಹೇಳ್ಬೇಕು. ಇವತ್ ನಂದ ಬಾರಿ ಬಂದದೆ. ಅದ್ಕೆ ಕತೆ ಹೇಳು ದಿವಸ ಇವತ್ತೆ ಆಗದೆ. ನನ್ಗೆ ಕೆಲ್ಸ ಮಾಡಿ ಸಾಕಾಗದೆ ಕತೆನ್ನ ನೀನ್ ಹೇಳಬೇಕು.”
ಆವಾಗ ಇವ ಹೇಳ್ತಾನೆ. ಯೇನಂದ್ರೆ? “ಹಾಗಾದ್ರಜ್ಜಿ, ನೀನು ಆ ಹುಡ್ಗೀನೇ ಇಲ್ ಕರಕಂಬಾ. ನಮ್ಮನಿಲ್ ವಬ್ಬ ಮೊಮ್ಮಗ ಬಂದನೆ. ಚಲೋಕತೆ ಹೇಳ್ತಾನೆ; ಹೇಳಿ ಕರಕಂಡ ಬಾ ನಿನ್ ಮನಿಗೆ” ಅಂದ.
ಆವಾಗ ಅಜ್ಜಿ ಮುದ್ಕಿ ಅಲ್ ಹೋಗಿ ಆ ಹುಡ್ಗಿ ಹತ್ರೆ, “ಮಗಾ ಇವತ್ತೆ ನನ್ ಮೊಮ್ಮಗ ಬಂದನೆ ನನ್ನ ಮನಿಗೆ ನನಕಿಂತಾ ಚಲೋ ಕತೆ ಹೇಳ್ತಾನೆ. ಮತ್ತು ನಂಮನಿಗೆ ಹೋಗ್ವ ಬಾ” ಹೇಳಿ ಕರಕಂಡ ಬಂತು ಅಜ್ಜಿ ತನ್ ಮನಿಗೆ. ಆವಾಗೇ ಇವ್ರ ಊಟ ಬೀಟ ಮಾಡಿ, ಸಲ್ಪ ಮನಗದ್ರು. ಆವಾಗೇನಾಯ್ತು ಹೇಳಿದ್ರೆ ಅಜ್ಜಿಗೆ ಕೆಲ್ಸ ಮಾಡಿ ಸಾಕಾಗ್ ಹೋಗಿತ್ತು. ಅಜ್ಜಿಗೆ ಚಲೋ ನಿದ್ದೇನೆ ಬಿತ್ತು. ಆವಾಗ ಇವ ಕತೆ ಹೇಳ್ತಾನೆ ಹುಡ್ಗಿ ಹತ್ರ.
ಹುಡ್ಗಿ ಹತ್ರೆ ಕತೆ, “ವಂದ್ ಊರಲ್ಲಿ ವಂದ ರಾಜನ ಮನ್ಯಲ್ಲಿ ವಂದ ಮಡವಾಳರವ ಇದ್ದ. ಅವನಿಗೆ ನೆಂಟ್ರಮನಿಗೆ ವಂದ್ ದಿವಸ ಹೋಗಬೇಕು ಹೇಳದ್ರೆ ವಂದ್ ದಿವಸನೂ ಬಟ್ಟೆ ಶೆಳದಿ ಪುರಸತಿ ಹೇಳೊದಿಲ್ಲ. ಆವಾಗೆ ವಂದಲ್ಲ ವಂದ್ ದಿವಸ ಆ ಮಡವಾಳರವನಿಗೆ ಸಲ್ಪ ಸಿಟ್ ಬಂದ್ ಹೋಯ್ತು. ನೆಂಟ್ರಮನಿಗೆ ಹೋಗಲೇಬೇಕು ಹೇಳ್ ಕಾಣಿಸ್ತು.” ಆವಾಗೆ ಇವಯೇನ್ ಹೇಳ್ತ, ಹುಡಗಿ ಹತ್ರ “ನೀ ಅಷ್ಟದೂರ ಮನಿಕಂಡಿದ್ರೆ ಕೇಳವಾಂಗಿಲ್ಲ. ಚಲೋ ಕತೆ ಇದೆ.” ಮುಂದೆ ಬಂತು. “ಸಲ್ಪ ನನ್ನ ಬುಡಕೆ ಬಂದಿ ಮನಿಕೊ” ಹೇಳಿ ಹೇಳ್ತ. ಅದು ಹತ್ರ ಬಂತು. ವಂದಾನೊಂದು ದಿವಸ ಮಡವಾಳರವ ನೆಂಟ್ರ ಮನಿಗೆ ಹೋಗಕಾಗದೆಯ ವಂದ್ ಅಜ್ಜಿ ಮುದ್ಕಿ ಮನಿಲಿ ಉಳಕಂಡ. ಆಗೆ ಆ ಹುಡಗಿ ಹತ್ರೆ ಕತೆ ಹೇಳತೆ ಹೇಳತೆ ಇರಬೇಕಾದ್ರೆ ಹುಡ್ಗಿ ಮೇಲೆ ಕೆಲಸ ಸಲ್ಪ ಪೂರೈಸಿದ. ಬೆಳಿಗ್ಗೆ ಎದ್ದಿ ಮಡವಾಳದವ ಮನಿಗೆ ಹೋದ. ಆ ಹುಡಗೀನು ಮನಿಗೆ ಹೋಯ್ತು. ಹೋಗಿ ಅಪ್ಪನ ಹತ್ರ ಈ ಹುಡುಗಿ ಹೇಳತಾಳೆ “ದಿವಸಾ ವಬ್ಬಬ್ಬ ಕತೆ ಹೇಳುವುದಾಗಿತ್ತು. ಇನ್ನು ಕತೆ ನನಗೆ ಬೇಡ.”
*****
ಹೇಳಿದವರು : ಶ್ರೀ ದೇವಪ್ಪ ಅಣ್ಣಪ್ಪ, ನಾಯ್ಕ, ಹೊದ್ಕೆ, ದಿನಾಂಕ :-೨೫-೧೨-೧೯೭೧
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯಲ್ಲಿ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.