
ದಲಿತರು ಶೂದ್ರರು ಮೆರಿಟ್ ವಿದ್ಯಾರ್ಥಿಗಳಿಗೆ ಎಂದಿಗೂ ಸಮವಲ್ಲ ಬಿಡ್ರಿ. ಮೀಸಲಾತಿ ಬೆಂಬಲದಿಂದ ಸೀಟು ಗಿಟ್ಟಿಸಿ, ನೌಕರಿ ಗಿಟ್ಟಿಸಿದ ಪ್ರಾರಬ್ದ ಮುಂಡೇವು ಯಾವತ್ತಿಗೂ ಎಫೀಶಿಯಂಟ್ಸ್ ಅಲ್ಲ. ಎಂಜಿನೀರ್ ಗಳಾದರೆ ಧಡಾರಂತ ಸೇತುವೆಗಳು ಉರುಳಿಬಿದ್ದೇ ಹ...
ಬಾಲ್ಯದ ಬರಿಮೈ ತಿರುಗಾಟ ಬೆಳೆದಂತೆಲ್ಲಾ ನಾಚಿಕೆ ಇಷ್ಟಿಷ್ಟೆ ಮೈಮುಚ್ಚಿತು ಮೀಸಲ ಸೊಬಗು ನೋಡಿದವರು ಹಾಡಿದರು ಆಗ ಹರಿದದ್ದೆಲ್ಲಾ ಸಿದ್ಧ ರಸ-ತರುವೆಲ್ಲ ಕಲ್ಪತರು ದನವೆಲ್ಲಾ ಕಾಮಧೇನು ಇತ್ಯಾದಿ ಇತ್ಯಾದಿ ಮೈತುಂಬ ಮರ್ಯಾದೆಯುಟ್ಟು ಪ್ರಸನ್ನತೆ ಮುಡಿ...
ಭೂಲೋಕದಿಂದ ತನ್ನ ಕಡೆಗೆ ಬಂದ ವಿಪುಲ ಅರ್ಜಿಗಳ ಒಟ್ಟಣೆಯನ್ನು ನೋಡಿ, ಅವುಗಳಿಗೆಲ್ಲ ಉತ್ತರ ಬರೆಯಿಸುತ್ತ ಕುಳಿತುಕೊಳ್ಳುವುದಕ್ಕಿಂತ ಸ್ವತಃ ಭೂಲೋಕಕ್ಕೆ ಹೋಗಿ, ಅಲ್ಲಿಯವರಿಗೆ ಬೇಕಾದ ಪರಿಹಾರವನ್ನು ಒದಗಿಸಿ ಬರುವುದು ಲೇಸೆಂದು ಬಗೆದು ಬ್ರಹ್ಮದೇವನು...
ಕೆಂಪು ತಾವರೆಯ ಮಾದಕ ಕಂಪಿಗೆ ಕಂಪಿಸಿದೆ ಈ ಮನ ಹೂವಿನ ಮಾಯೆಗೆ ಹೋಳಾಗಿದ ಎದೆ ಕನಸಿಗೆ ಕರೆದಿದೆ ದಿನಾ! ಗಾಳಿಗೆ ತಲೆದೂಗಾಡುವ ಹೂವಿಗೆ ತಾರೆಗು ಇಲ್ಲದ ಮೆರಗು ಅರಬಿರಿದಾ ಆ ಕೆಂಪು ದಳಗಳಿಗೆ ಅಪ್ಸರೆ ಕೆನ್ನೆಯ ಬೆಳಗು ಕೊಳದಲ್ಲಿದು ಕೊಯ್ಯಲು ಬಾರದು ...
ಶ್ಯಾಮ: “ಅಲ್ಲಯ್ಯಾ, ನಿನಗೆ ನಾಯಿಕಚ್ಚಿತಂತೆ; ಹೌದಾ?” ಶೀನು: “ಹೌದು ಬೊಗಳುವ ನಾಯಿ ಕಚ್ಚೋಲ್ಲ ಎಂಬ ಗಾದೆ ಇದೆಯಲ್ಲಾ ಹಾಗಾಗಿ ನಾನು ಬೊಗಳುತ್ತಿದ್ದ ನಾಯಿ ಹತ್ತಿರ ಬಂದು ಅದರ ಬಾಯೊಳಗೆ ಹಲ್ಲು ಎಷ್ಟಿದೆ ನೋಡೋಣ ಆಂತ ಬಾಯಿ ಮು...
ಐವರು ಯಾವ ಕಂಪನಿಯ ಮೇಕಪ್‌ಗಳಿರಬೇಕಿವು! ಇಪ್ಪತ್ನಾಲ್ಕೂ ತಾಸು ಆಕಾಶ ಏನೆಲ್ಲ ಬಣ್ಣ ಹಚ್ಚಿಕೊಳ್ಳುತ್ತದಲ್ಲ, ಕಾಲೇಜಿಗೊ, ಕ್ಲಬ್ಬಿಗೊ ಮದುವೆಗೊ ಮಸಣಕೊ ಹೋಗುವಂತೆ ಅದೆಷ್ಟು ಬಣ್ಣಗಳದಕೆ ಅರೆರೆ! ಇದಾವ ಸರಕಾರಿ ಪೋಸ್ಟ್‌ಮ್ಯಾನ್ ಹೊಳೆಹಳ್ಳ ಕೆರೆಬೆಟ್...
ಸಂಕಟ ಬಂದಾಗ ವೆಂಕಟರಮಣ ಅನ್ನೋ ಗಾದೆ ಓಲ್ಡಾತು. ಕಾಲಂ ಕೂಡ ಮಾರಿಪೋಚಿ. ಕಾಲಕ್ಕೆ ತಕ್ಕ ಆಟ, ಆಟಕ್ಕೆ ತಕ್ಕ ವೇಷ ಕಣ್ರಿ ಈಗ. ಸಂಕಟ ಅಟಕಾಯಿಸಿಕ್ಯಂಡಾಗ ವೆಂಕಟರಮಣಂತಾವ ಹೋಗಿ ಗುಂಡು ಹೊಡಸ್ಕೊಂಡು ಬರೋದು ಶುದ್ಧ ಓಲ್ಡ್ ರಿಚುಯಲ್ಸ್ ಆತು. ಈಗ “...
ಇರುಳು ಸುಮ್ಮನೆ ಬೆಳಕಾಗಿ ಅರಳುವುದಿಲ್ಲ ಮುಗಿಲು ಸುಮ್ಮನೆ ಮಳೆ ಸುರಿಸುವುದಿಲ್ಲ ಶಿಲುಬೆಗೇರಿದ ಕತ್ತಲು ನೋವುಗಳಿಗೆ ಮೈಯೊಡ್ಡಿ ಹದ ಬೆಂದು ಬೆಳಕಾಗಬೇಕು ತಕ್ಕಡಿಯಲಿ ಕೂತ ತುಂಬು ಬಸುರಿನ ಮುಗಿಲು ಹಿಂಸೆಯನುಭವಿಸುತ್ತಲೇ ಈಗಲೋ – ಆಗಲೋ ಅನುಮ...
ಆಗಮ ಹಗಲೂ ಅಲ್ಲ ಇರುಳೂ ಅಲ್ಲದ ಹೊತ್ತು ಮುರಿದ ಹುಬ್ಬು ಹುರಿದ ಕಣ್ಣು ಅರ್ಧ ಜಾಗ್ರದಾವಸ್ಥೆ ಪಡುಕೋಣೆಯ ರಂಗಮಹಲಿನ ಮೇಲೆ ದೇವಾನುದೇವತೆಗಳ ಅರೆನಗ್ನ ನರ್ತನ ಪೂರ್ವದೇಗುಲದಲ್ಲಿ ಘಂಟೆ ಜಾಗಟೆ ಮದ್ದಲೆಗಳ ಮೇಳ ಲೋಪ ಬಡ ಹೊಟ್ಟೆಯ ಮೇಲರಳಿದ ಕಮಲದ ತಲೆ ತ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....













