ರಸಿಕ ಕವಿಗೆ….

ಶತಶತಮಾನಗಳಿಂದ ನಿನಗ ‘ಅವಳು’ ಅರ್ಥವಾದದ್ದೆಷ್ಟು? ಬರೀ ಇಷ್ಟೇ ಇಷ್ಟು! ಸಾಕಪ್ಪ ಸಾಕು ನಿನ್ನೀ ಕಾಗಕ್ಕ-ಗುಬ್ಬಕ್ಕನ ಕಥೆ ‘ಅವಳ’ ಅಂಗಾಂಗ ವರ್ಣಿಸುತ್ತಾ ನಿನ್ನದೇ ಅತೃಪ್ತ ಕಾಮನೆ ತಣಿಸುತ್ತಾ ಅಡ್ಡಹಾದಿಗೆಳೆವ ರಸಿಕತೆ! ಆ ಸಂಸ್ಕೃತ ಕವಿಗಳ ಅಪರಾವತಾರ...

ಈಗ ಯಾರ ಕ್ಷಮಿಸಬೇಕು?

ಮೊದಮೊದಲು ಎಲ್ಲವೂ ಹೀಗಿರಲಿಲ್ಲ ಹೌದು ಎಲ್ಲವೂ ಹೀಗಿರಲಿಲ್ಲ! ಭಾವುಕ ಕವಿಯ ಭಾವಗೀತೆಗಳಂತೆ ಮೊಗ್ಗೊಂದು ತನ್ನಷ್ಟಕ್ಕೇ ಬಿರಿದರಳಿದಂತೆ ಥೇಟ್ ಮಗುವಿನ ನಗುವಂತೆ ಉತ್ಸಾಹದಿ ನಳನಳಿಸುತ್ತಿದ್ದ ಹುಡುಗಿ ಇದ್ದಕ್ಕಿದ್ದಂತೆ ಹೀಗೆ, ಪ್ರೌಢ ಹೆಣ್ಣಾಗಿದ್ದು ಹೇಗೆ? ಈರುಳ್ಳಿ ಹೆಚ್ಚುತ್ತಾ...

ಅಶರೀರ ಜೀವ

ಹಲವುಳಿದ ಅಶರೀರ ಹೆಣ್ಣು ಭ್ರೂಣಗಳ ಆಕ್ರಂದನ ಮಿಡಿವ ಎದೆ ನರಳಿ, ಮಿಕ್ಕವರಿಗೆ ಖಾಲಿ ಮೌನ ಅಮ್ಮಾ... ಅಮ್ಮಾ... ಗಾಳಿಯೊಡಲು ಸೀಳಿ ತೇಲಿ ಬರುವ ನೂರಾರು ಹೆಣ್ಣು ಉಲಿ. ಗರ್ಭದೊಳಗೇ ಜೀವ ಅಸ್ಪಷ್ಟ ರೂಪವಾದಂತೆ ಕೊಬ್ಬಿದ...

ಗರದಿ ಗಮ್ಮತ್ತಿನ ಪೆಟ್ಟಿಗೆ

ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ ಎಂಥೆಂತಾ ಚಿತ್ರಗಳು, ವಿಚಿತ್ರಗಳು! ತಾಜಮಹಲು, ಕುತುಬ್‌ಮಿನಾರು ದೊಡ್ಡಾನುದೊಡ್ಡ ಬಾಹುಬಲಿ ಮತ್ತಿನ್ನಿನೇನೇನೋ... ಗರದಿಯವ ಚಕ್ರ ತಿರುಗಿಸಿದಂತೆಲ್ಲಾ ಬದಲಾಗುವ ಬಣ್ಣದೊಂದಿಗೆ ಚಿತ್ರವೂ ಬದಲಾಗುತ್ತದೆ ಒಂದಿಗೇ ನೇಸರ ಬದಲಾದಂತೆಲ್ಲಾ ಬಣ್ಣ ಬದಲಿಸುವ ಮೇಘದಂತೆ ಒಂದೊಂದು...

ಸಾರ್ಥಕ್ಯ

ಎಲ್ಲಿಂದಲಾದರೂ ಪ್ರಾರಂಭಿಸಬಹುದು ಹೊಸ ಅಧ್ಯಾಯಗಳನ್ನು ಅರ್ಥೈಸುವುದು ಹೇಗೆ? ತಳಪಾಯವಿಲ್ಲದೇ ಮನೆ ಕಟ್ಟಿದ ಹಾಗೆ! ಎಲ್ಲಿಟ್ಟು ಎಲ್ಲಿ ನೆಟ್ಟು ಏಣಿ ಹತ್ತಿದರೂ ಅಟ್ಟಗಳು ಸಿಕ್ಕಬಹುದು ದಿಗಂತ ಸಿಕ್ಕುವುದೆಂತು? ನಡೆಯಬಹುದು ಹೀಗೇ... ಉದ್ದಕ್ಕೂ ಕಾಲುಸಾಗಿದೆಡೆಗೆ ಗುರಿ ಸೇರದಾ...

ಅಮೃತಕೆ – ಮಂಥನ

ಹೆಪ್ಪಿಟ್ಟ ಕೆನೆ ಮೊಸರು ಹುಳಿಯಾಗುವ ಮುನ್ನ ನಿರಂತರ ಕಡೆಯಬೇಕು! ಉಕ್ಕಲಿ ನೊರೆನೊರೆಯ ಹಾಲಾಹಲ! ಏಕೆ ಕೋಲಾಹಲ? ಮೇಲೆಲ್ಲವೂ ಕಾರ್ಕೋಟಕ ವಿಷವೇ ಆಳಕ್ಕಿಳಿದಷ್ಟೂ ಅಮರತ್ವದ ಅಮೃತವೇ! ಎಷ್ಟು ಮಹಾ ಉಕ್ಕೀತು ವಿಷ? ಆಪೋಶಿಸಿದರೊಂದೇ ಗುಟುಕು ಕಣ್ತೆರೆಯಲು...

ಎಚ್ಚರ

ಯಾರೋ ಒದ್ದು ಚೆಲ್ಲಾಪಿಲ್ಲಿ ಹರಡಿದ ತನ್ನ ಕನಸುಗಳನೆಲ್ಲಾ ಬಾಚಿ ಗುಡ್ಡೆ ಹಾಕಿ ಗಂಟು ಕಟ್ಟಿ ಬೆನ್ನಿಗೇರಿಸಿ ಹೊರಟುಬಿಡುತ್ತಾಳೆ ಎಲ್ಲಾ ಧಿಕ್ಕರಿಸಿ! ಕಾಡು, ಕಂದರ, ಪರ್ವತ ಸಮುದ್ರ, ನದೀ ತಟ ಬಿಚ್ಚಿದ ಆಕಾಶ ಮುಚ್ಚಿದ ಭೂತಟ...

ಗೋಡೆಗಳು

ಅವರಿವರ ಕೈಜಾರಿ ಇಟ್ಟಿಗೆ ಬಿದ್ದಲ್ಲೆಲ್ಲಾ ಧುತ್ತನೆ ಎದ್ದು ನಿಂತ ನನಗೆ ನಾನೇ ನಿರ್ಮಿಸಿಕೊಂಡ ಎತ್ತರೆತ್ತರ ಗೋಡೆಗಳು ನಿಜ ಮುಖ ತೋರದ ಮುಸುಗುಗಳು! ಗೋಡೆ ಮೇಲೊಂದು ಗೋಡೆ ಕಿರಿಗೋಡೆ, ಮರಿಗೋಡೆ ಬಾನಿನೆತ್ತರಕ್ಕೆ ಏರಿನಿಂತ ಹಿರಿಗೋಡೆಗಳು! ನನಗೆ...

ಎಕ್ಕಡಗಳು

ಎಷ್ಟೊಂದು ವರ್ಷಗಳಿಂದ ನನ್ನಲ್ಲಿಯೇ ಉಳಿದುಬಿಟ್ಟ ನನ್ನವಲ್ಲದ ಹಳೆಯ ಎಕ್ಕಡಗಳೂ! ದಂತದ ಕುಸುರಿ ಮಾಡಿದ ಗಮಗುಡುವ ಗಂಧದ ಪೆಟ್ಟಿಗೆಯಲ್ಲೇ ಅವುಗಳ ವಾಸ ಎಲ್ಲಿ ಹೋದರೂ ಎಲ್ಲಿ ಬಂದರೂ ಹಳೆಯ ಎಕ್ಕಡಗಳ ಗಂಧದ ಪೆಟ್ಟಿಗೆಯ ಬೆನ್ನಿನ ಮೇಲೆಯೇ...

ಬಂದು ಬಿಡಬಹುದೇ ಹೀಗೆ?

ಕಪ್ಪಡರಿದ ಕಂದೀಲು ನಾನಿನ್ನೂ ಉಜ್ಜಿ ಹೊಳಪೇರಿಸೇ ಇಲ್ಲ! ದೇವರ ಮುಂದಲ ನಂದಾದೀಪ ಯಾವಾಗಲೋ ಆರಿ ಬತ್ತಿ ಸುಟ್ಟು ಕರಕಾಗಿತ್ತಲ್ಲ! ಹೀಗೆ ಇದ್ದಕ್ಕಿದ್ದಂತೆ ಮೋಡ ಮುಸುಕಿ ಕತ್ತಲಾವರಿಸುತ್ತದೆಂದು ಯಾರಿಗೆ ಗೊತ್ತಿತ್ತು? ಗುಟ್ಟಾಗಿ ಬಸಿರಾದ ಮೋಡ ಯಾವ...