ಎಂಥ ಮಾತುಗಳ ಹೇಳಿದೆ ಗುರುವೇ

ಎಂಥ ಮಾತುಗಳ ಹೇಳಿದೆ ಗುರುವೇ ನಮಸ್ಕಾರ ನೂರು ಇಂಥ ನೀತಿಗಳ ಹೇಳಬಲ್ಲವನು ಕಬೀರನಲ್ಲದೆ ಯಾರು? ಹಿಂದೂ ಮುಸ್ಲಿಮ ಗಂಧಗಳೆಲ್ಲಾ ಮಣ್ಣಿನ ಶರೀರಕಷ್ಟೇ; ಆತ್ಮಕೆ ಮತದ ಬಂಧನವೆಲ್ಲಿದೆ? ಇರುವುದು ಸತ್ಯದ ನಿಷ್ಠೆ ವೇದ ಖುರಾನು ಗ್ರಂಥಸಾಹಿಬ...

ಇಂದ್ರಗಿರಿಯ ನೆತ್ತಿಯಲ್ಲಿ

ಇಂದ್ರಗಿರಿಯ ನೆತ್ತಿಯಲ್ಲಿ ನಿಂತ ಮಹಾಮಾನವ ನೀಡು ನಮಗೆ ನಮ್ಮೊಳಗನು ಕಂಡುಕೊಳುವ ಧ್ಯಾನವ ಹೌದು ನೀನೇ ಮಹಾಬಲಿ, ಹೆಣ್ಣು ಹೊನ್ನು ಗೆದ್ದೆ ನಿಜದ ಬೆಳಕ ಕಾಣಬಯಸಿ ನಿದ್ದೆಯಿಂದ ಎದ್ದೆ ; ಕಾಳಗದಲಿ ಗೆದ್ದೆ ನಿಜ, ಅದಕಿಂತಲು...

ಇತಿಹಾಸಕು ಹಿಂದೆಯೇ ಹೊತ್ತಿ ಉರಿದ ಜ್ಯೋತಿ

ಇತಿಹಾಸಕು ಹಿಂದೆಯೇ ಹೊತ್ತಿ ಉರಿದ ಜ್ಯೋತಿಯೇ ಹಸಿದ ವರ್ತಮಾನಕೆ ಹಾಲುಣಿಸುವ ಮಾತೆಯೇ ಬರಲಿರುವ ನಾಳೆಗೂ ಭರವಸೆಯಾ ಹಸಿರೇ ರಾಮನು ಬರೀ ಹೆಸರೇ, ಅಲ್ಲವೆ ನಮ್ಮುಸಿರೇ? ಬೆಳೆವ ಮರದ ಸತ್ವ ಮೊಳಕೆಯಲ್ಲೆ ಕಾಣದೆ? ಋಷಿ ಯಜ್ಞವ...

ಹೊಸ ಸಹಸ್ರಮಾನಕೆ

ಹೊಸ ಸಹಸ್ರಮಾನಕೆ ಪ್ರೀತಿಯ ಸುಸ್ವಾಗತ ಆರತಿ ಎತ್ತಿದೆ ವಿಶ್ವದ ಕಲ್ಯಾಣಕೆ ಭಾರತ ಶ್ರುತಿನುಡಿಸಲಿ ಈ ವರ್ಷ ಶತಮಾನದ ಚಲನೆಗೆ, ಸತ್ಯ ಸಹನೆ ಅಹಿಂಸೆಗಳ ತವರು ಮನೆಯ ಹಾಡಿಗೆ ಆಧ್ಯಾತ್ಮದ ಮೂರ್ತಿ ಹೊತ್ತ ವಿಜ್ಞಾನದ ರಥಕೆ...

ಎಂದಿಗಾದೀತು ಈ ದೇಶ

ಎಂದಿಗಾದೀತು ಈ ದೇಶ ಎಲ್ಲರಂತೆ ತಾನೂ? ಎಂದಿಗಾದೀತು ಇರದಂತೆ ತರತಮ ಏನೇನೂ? ಜನಮನಗಳ ನಡುವೆ-ಗೋಡೆ ಎಂದಿಗೆ ಉರುಳುವುವು? ಬಡವರ ಇರುಳುಗಳು-ಎಂದಿಗೆ ಪೂರಾ ಕರಗುವುವು? ಸೆರೆಯೊಳಿರುವ ಲಕ್ಷ್ಮಿ-ದೀನರ ಕಡೆ ಹೊರಳುವಳೆಂದು? ಗಾಳಿ ಬಿಸಿಲಿನಂತೆ - ಎಲ್ಲರ...

ಜಾತಿಯ ಉರಿಯಾರಲಿ

ಜಾತಿಯ ಉರಿಯಾರಲಿ ಕೋಪದ ಧಗೆ ತೀರಲಿ ಧಗಧಗಿಸುವ ದ್ವೇಷದ ಜ್ವಾಲೆ ನಂದಿಹೋಗಲಿ; ತಂಪು ಬೆಳಕ ಚೆಲ್ಲುವ ಚಂದ್ರ ಮೇಲಕೇರಲಿ ಮಕ್ಕಳೆಲ್ಲ ಮನಸು ಕಲೆತು ಮುಂದೆ ಸುಖದಿ ಬಾಳಲಿ. ವಿದ್ಯೆಯೆಂಬ ಗಂಗೆಯಲ್ಲಿ ಮೀಯಲೆಲ್ಲ ಮಕ್ಕಳು, ಸಹನೆಯೆಂಬ...

ಬೆರೆಯದ ವಾಣಿಗಳು

ಯಾರೋ ಬೇಡುವ ಯಾರೋ ಹಾಡುವ ಬೆರೆಯದ ವಾಣಿಗಳು, ಯಾರೋ ಮುಗಿಲಲಿ ಯಾರೊ ಕಣಿವೆಯಲಿ ಹೊಂದದ ಚಿತ್ರಗಳು! ತಿನ್ನಲಾರದೆ ಅನ್ನವ ಮೋರಿಗೆ ತೂರುವ ಹಸ್ತಗಳು, ಮಣ್ಣಿನ ಜೊತೆ ಬೆರತನ್ನವೆ ಎಷ್ಟೋ ಒಡಲಿಗೆ ವಸ್ತುಗಳು, ಚಿನ್ನದ ಭಾರಕೆ...

ದೀನ ನೀನು ಹೇಗೆ

ದೀನ ನೀನು ಹೇಗೆ ಮಹಾಮಾನಿಯೇ? ನಾವೇ ಋಣಿ ನಿನಗೆ ಹಿರಿಯ ದಾನಿಯೇ ಚಳಿ ಬಿಸಿಲಿನ ಪರಿವೆಯಿರದೆ ನಮ್ಮ ಮನೆಯ ಕಟ್ಟಿದೆ, ಮಳೆಯಲಿ ಬರಿಮೈಲಿ ದುಡಿದು ನಮ್ಮ ಮಾನ ಮುಚ್ಚಿದೆ, ಹಿಡಿ ತಂಗಳು ತಿಂದು ಮನೆಯ...

ತುಂಬಿದ ಕಪ್ಪನೆ ನೇರಿಳೆ

ತುಂಬಿದ ಕಪ್ಪನೆ ನೇರಿಳೆಯಂತೆ ಮಿರಿ ಮಿರಿ ಮಿಂಚುವ ಮಗುವೊಂದು ಚಿಂದಿಯನುಟ್ಟಿದೆ, ಚರಂಡಿ ಬದಿಗೆ ಮಣ್ಣಾಡುತ್ತಿದೆ ತಾನೊಂದೆ ದಾರಿಯ ಎರಡೂ ದಿಕ್ಕಿಗೆ ವಾಹನ ಓಡಿವೆ ಚೀರಿವೆ ಹಾರನ್ನು, ಮಗುವಿನ ಬದಿಗೇ ಭರ್ರನೆ ಸಾಗಿವೆ ನೋಡದಂತೆ ಆ...

ಆರದಿರಲಿ ಆಸೆ

ಆರದಿರಲಿ ಆಸೆ ಉರಿಗೆ ಬೀಳದಿರಲಿ ಕನಸು, ನೋಯದಿರಲಿ ಭಾರ ಹೊತ್ತ ಬಡವರ ಹೂಮನಸು. ಯಾರ ಅನ್ನ ಎಲ್ಲೋ ಬೆಳೆವ ರೈತನ ಬಲದಾನ ಯಾರ ಭಾರ ಏಕೋ ಹೊರುವ ಕೂಲಿಯವನ ಮಾನ ಬೀದಿ ಗುಡಿಸಿ ಕೊಳೆನೆಲದಲಿ...