ಹಳೆಗನ್ನಡದ ಆಸೆ

ಹಳೆಗನ್ನಡದ ಆಸೆ ಕರೆಯಿತು ನನ್ನ ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ ಪರಂಪರೆಗೆ, ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ. ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ ಹರಳುಗಳು...

ಮಹಾಪ್ರಸ್ಥಾನವನ್ನು ಇನ್ನೊಮ್ಮೆ ಓದಿದಾಗ

ಅನಿಸುತ್ತದೆ ನನ್ನ ಕಥಾನಾಕನನ್ನು ಹೀಗೆ ಒಂಟಿಯಾಗಿ ಬಿಡಬಾರದಾಗಿತ್ತು ಎಂದು.  ಆದರೆ ಬಿಟ್ಟಿದ್ದನೆಲ್ಲಿ ಇವುನು ನನ್ನನ್ನು ವರ್ಷಗಟ್ಟಲೆ ಸದಾ ತಲೆಯೊಳಗೆ ಹೊಕ್ಕು ಊಟ ನಿದ್ದೆಗೆ ಬಿಡದೆ ಮಳೆಗೆ ಸೋರುವ ಬಿಸಿಲಿಗೆ ಸುಡುವ ಬಾಡಿಗೆಮನೆಯಲ್ಲೂ ಮಂಚದ ಮೇಲೆ...

ಗಂಗೋತ್ರಿಯಲ್ಲಿ ರಾತ್ರಿ

ಗಂಗೋತ್ರಿಯಲ್ಲಿ ರಾತ್ರಿ ರೋಡುಗಳೇಕೆ ನಡೆಯುವುದಿಲ್ಲ ಕಟ್ಟಡಗಳೇಕೆ ತೆರೆಯುವುದಿಲ್ಲ ಮರಗಳು ನಿಂತದ್ದೇಕೆ ಮಣ್ಣು ಮಲಗಿದ್ದೇಕೆ ಸಮಯ ಯಾಕೆ ತುಂಡಾಗಿದೆ ಹೀಗೆ ಯಾಕೆ ಲೈಟು ಕಂಬಗಳಿಂದ ಬೆಳಕು ಸ್ಖಲಿಸಿ ವ್ಯವಾಗುತ್ತಿದೆ ನನಗೆ ಗೊತ್ತಿರುವ ಸಮುದ್ರದಂಡೆಗೆ ಎಷ್ಟು ದೂರ...

ನಾವೇನು ಮಾಡೋಕಾಗತ್ತೆ

ನಾವೇನು ಮಾಡೋಕಾಗತ್ತೆ ಎಂದರೆ ಕೆಲಸ ಹೇಗೆ ಗಿಟ್ಟಿಸಿಕೊಂಡಿರಿ? ಮನೆ ಹೇಗೆ ಕಟ್ಟಿಸಿಕೊಂಡಿರಿ? ಮಕ್ಕಳನ್ನು ಹೇಗೆ ಅಮೇರಿಕೆಗೆ ಕಳಿಸಿದಿರಿ? ಒಂದು ದಿನ ಸಮೀಪ ಭರ್‍ರೆಂದು ಧಾವಿಸಿಹೋದ ಕಾರು ನಮ್ಮಿಬ್ಬರ ಮೇಲೂ ರಾಡಿ ಎರಚಿದ್ದು ನೆನಪಿಲ್ಲವೆ? ನಂತರ...

ಸಹಾರಾ

ಸಹಾರಾ ಎಂದರೆ ಅರೆಬಿಕ್ ಭಾಷೆಯೊಳಗೆ ಶೂನ್ಯವೆಂದು ಅರ್ಥ ಮೈಲುಗಟ್ಟಲೆ ಮರುಭೂಮಿಯ ಮೇಲೆ ಹೊಗೆಯಿಲ್ಲದೆ ಹಬೆಯಿಲ್ಲದೆ ಕಾದ ಮರುಳು ಮುಕ್ಕಳಿಸುವ ಬಯಲು ಚಿಗುರದೆ ಹೂ ಬಿಡದೆ ಬಿಸಿಲ ಝಳಕ್ಕೆ ಅಪರೂಪ ತೇಲುವ ಓಯಸಿಸ್ ಎಟುಕದ ಆಕಾಶಕ್ಕೆ...

ಗಾಂಧಿಗೆ

ಕೆಲವು ವರ್ಷಗಳ ಹಿಂದೆ ರೇಲ್ವೇಸ್ಟೇಷನಿನ ಕ್ಯಾಂಟೀನಿನಲ್ಲಿ ಚಹಾ ಕುಡಿಯುತ್ತಿರುವಾಗ ಬಟ್ಟಲಿನಲ್ಲಿ ಗಾಂಧಿ ಟೋಪ್ಪಿಗೆ ಕಂಡು ಚಕಿತನಾದೆ.  ಆಗ ಆ ಕುರಿತು ಆಲೋಚಿಸಲು ಸಮಯವಿರಲಿಲ್ಲ. ಅವಸರವಸರವಾಗಿ ಮಂದಿಯ ಮಧ್ಯೆ ಓಡೋಡಿ ಗಾಡಿ ಹತ್ತಿದೆ.  ನಿಂತವರ ನಡುವೆ...

ಕ್ವ್ರಾಕ್

ಆ ಅಪರಾಹ್ನ ಥಟ್ಟನೆ ಬಂದು ನನ್ನ ಮನಸ್ಸನ್ನು ಆಕ್ರಮಿಸಿದ ಶಬ್ದ: ಕ್ರ್‍ವಾಕ್. ದಣಿದಿದ್ದೆ.  ಮಧ್ಯಾಹ್ನ ಊಟ ತಡವಾಗಿ ಮುಗಿಸಿ ಬೆತ್ತದ ಈಸಿಚೇರಿನಲ್ಲಿ ಅಡ್ಡಾಗಿದ್ದೆ. ನಿದ್ದೆಯೇನೂ ಹಿಡಿದಿರಲಿಲ್ಲ.  ಮಂಪರಿನಲ್ಲೂ ಇರಲಿಲ್ಲ. ಮನಸ್ಸಿನಲ್ಲೆ ಮೆಸ್ಸಿನ ಲೆಕ್ಕ ಕೂಡಿಸುತ್ತಿದ್ದೆ...

ಚೇಳೂ ಏಡಿಯೂ

ಚೇಳಿನ ಮೈ ತಾಮ್ರದ ಕಿಲುಬಿನ ಹಾಗೆ ಕಡುಪಚ್ಚೆ.  ಏಡಿಯ ಮೈ ಶ್ರೀಮಂತೆಯ ಉಗುರಿನ ಹಾಗೆ ನಸುಗೆಂಪು. ಚೇಳು ಒಂದೇ ಶಿಲೆಯಿಂದ ಕೆತ್ತಿ ಕಡೆದು ತೆಗೆದಂತಿದೆ.  ಏಡಿಯ ಕೈಕಾಲುಗಳು ಹೊಲಿದು ಸೇರಿಸಿದಂತಿವೆ. ಚೇಳು ಭಯೋತ್ಪಾದಕನಂತೆ ನಿಶ್ಚಿಂತೆಯಿಂದಿದೆ....

ಚಿಟ್ಟೆಗಳನ್ನು ಹಿಡಿಯುವುದು

ಚಿಟ್ಟೆಗಳನ್ನು ಹಿಡಿಯುವುದಕ್ಕೆ ಮೊದಲು ಒಂದು ಹೂದೋಟ ಬೇಕು, ಹೂದೋಟದಲ್ಲಿ ಹೂವುಗಳು ಬೇಕು, ಹೂವುಗಳಲ್ಲಿ ಚಿಟ್ಟೆಗಳು ಕೂತುಕೊಳ್ಳಬೇಕು. ಈಗ ಹೊರಡಿರಿ ಮೆಲ್ಲನೆ. ಎಷ್ಟು ಮೆಲ್ಲನೆ ಎಂದರೆ ಒಣಗಿದ ಸೊಪ್ಪುಗಳ ಮೇಲೆ ಬೆಕ್ಕು ನಡೆಯುವ ಹಾಗೆ.  ಮುಂದೆ...

ಆಮೆ

ಆಮೆ ಏಡಿಯಂತಲ್ಲ ಅದು ಸರೋವರದ ನಡುಗಡ್ಡೆಯಂತೆ ಪ್ರಶಾಂತವಾಗಿರುತ್ತದೆ. ಏಡಿಯೋ ಕೆಟ್ಟದಾಗಿ ಕಟ್ಟಿದ ಗಂಟಿನಂತೆ ಅಸ್ವಸ್ಥವಾಗಿರುತ್ತದೆ. ಆಮೆ ಆನೆಯಂತಲ್ಲ ಅದು ಬೇಕೆಂದಾಗ ಕೈಕಾಲುತಲೆಗಳನ್ನು ಒಳಗಿಟ್ಟುಕೊಳ್ಳುತ್ತದೆ. ಆನೆಯೋ ಭಾರವಾದ ಸೊಂಡಿಲನ್ನು ಕೂಡ ತೂಗಿಕೊಂಡೇ ನಡೆಯಬೇಕಾಗುತ್ತದೆ. ಆಮೆ ಮೊಲದಂತಲ್ಲ...