ಭರತವಾಕ್ಯ

ಹೊಸತೆ ಇರಲಿ, ಹಳತೆ ಇರಲಿ, ಒಳಿತು ಯಾವುದೊ, ಬಾಳ್ಗೆ ಬರಲಿ! ಮೂಡಲೇನು, ಪಡುವಲೇನು? ಬೆಳಕ ಬದುಕಿಗೆ ಹೂಡಿ ತರಲಿ ! ಹಳ್ಳ-ತಿಟ್ಟು ಸರಿಯಲಿ- ಒಳ್ಳೆ ದಾರಿ ಸಮೆಯಲಿ! ೧ ಸೃಷ್ಟಿ ದೇವಿ ಕೊಟ್ಟ ಪಯಿರ...

ಅವಿರತ ಯಜ್ಞ

ಭುವಿಯ ಚೇತನಾಗ್ನಿಯಲ್ಲಿ ಸೂರ್‍ಯ ಬಲಿಯು ನೀಡುವ; ಅಮೃತಗರ್ಭನಾದ ಸೋಮ ಸೋಮರಸವನೂಡುವ. ಅಗಣಿತ ಗ್ರಹ-ತಾರಕಾಳಿ ಮಧುಹೋಮವ ನಡೆಸಿವೆ; ಮೋಡ- ಗುಡುಗು, ಮಿಂಚು-ಸಿಡಿಲು ಉದಧಿಗರ್ಘ್ಯ ಕೊಡುತಿವೆ! ೫ ಸಾಗರ ಹೋತಾರನಾಗಿ ಸೂರ್ಯಗೆ ಬಲಿ ನೀಡುವ; ಸೂರ್ಯನು ದಾತಾರನಾಗಿ...

ಬರಲಿರುವ ದಿನ

- ಪಲ್ಲವಿ - ಬೇಗನೆ ಬಾ, ಬರಲಿರುವಾ ಸವಿದಿನ ನೀನು... ಸಾಗಿಸುವೆನು ಇಂದಿನ ಈ ಕಹಿಬವಣೆಯನು! ೧ ನಿನ್ನೆಯ ದಿನ ಹೋಯ್ತು, ಸಾಗಿ ಬೇಕಿಹುದನು ಕೊಡಲೆ ಇಲ್ಲ; ಇಂದಿನ ದಿನ ನಡೆದಿರುವುದು ಹೇಗೊ ಕಾಲ...

ಬೆಳಕಿಗೆ ಸ್ವಾಗತ

- ಪಲ್ಲವಿ - ಬಾ, ತರಣಿಯ ತುಂಬಿದ ಹೊಂಬೆಳಕೇ, ಈ ತಮವನು ತೊಳೆಯಲು ನೆಲಕೆ! ೧ ‘ಕಾರಿರುಳನು ಬಿಡಿ, ಬೆಳಕಿಗೆ ಕಾಲಿಡಿ! ಸಾರುತಿದೆಯಿಂತು ದೈವದ ತಿಳಿನುಡಿ; ಆರಯ್ಯುವುದಿಳೆ ನಿನ್ನ ಬರವಿನಡಿ, ತೂರುತ ಕಿರಣವ ಕೆಲಕೆಲಕೆ.......

ಸಂಕ್ರಾಂತಿ

- ಪಲ್ಲವಿ - ಕಳೆದು ಭ್ರಾಂತಿ ತುಳಿದಶಾಂತಿ ಹೊಳೆಯಿತು ಸಂಕ್ರಾಂತಿ! ಇಳೆಯೊಳಿಡಿದ ಕುಳಿರನಳಿದು ಬಲಿಯಲು ಹೊಸಕಾಂತಿ! ಮೂಡುಗಾಳಿ ಬೀಸಿ ಬೀಸಿ, ನಾಡ ಬೆಳೆಯ ಕಸುಕ ಸೋಸಿ, ಮಾಡಿ ವಿವಿಧಧಾನ್ಯರಾಶಿ, ಹಸಿವೆಗೀಯೆ ಶಾಂತಿ... ಕಳೆದು ಭ್ರಾಂತಿ...

ಮಾಯದ ನೋವು

(ಶೋಕಗೀತ) ೧ ಶಕ್ತಿದೈವತದ ಬಲಗೈಯ ಕರವಾಲವೇ, ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೇ, ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ, ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ! ಭಾಯಿ, ವಲ್ಲಭಭಾಯಿ ಭಾರತಿಯ ಕಣ್ಮಣಿ- ನಿನ್ನನೂ ಕಬಳಿಸಿದಳೇ ಮೃತ್ಯುರಾಣಿ ? ೨ ಓ, ಮೃತ್ಯು...

ಸಾವಲ್ಲದ ಸಾವು!

೧ ಇದ್ದರೂ ಸತ್ತಂತ ಇರುವವರೆ ಬಹುಜನರು, ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು, ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವು- ಮಾಡಿಕೊಂಡವರು ಹಲರು! ಇದ್ದಾಗ ನಿನ್ನಂತೆ ಇದ್ದವರು ಯಾರಿಹರು? ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ ಸಿದ್ದಿ ತುಂಬಿದರಾರು, ನಿನ್ನವೊಲು...

ದೀವಳಿಗೆಯ ದರ್ಶನ

- ಪಲ್ಲವಿ - ಕುಣಿಯುತ ಬಂದಿದೆ ದೀವಳಿಗೆ- ಝಣ- ಝಣಿರೆನೆ ನೂಪುರ ಅಡಿಗಡಿಗೆ ! ತಣಿವನು ಹಂಚಲು ಎಡೆಯೆಡೆಗೆ- ಕುಣಿ- ಕುಣಿಯುತ ಬಂದಿದೆ ದೀವಳಿಗೆ ! ೧ ಮುಸುಕಿದ ಮೋಡವು ಮಸುಳಿತಿದೇನು ? ಹಸನು...

ಇದೊ, ಶ್ರಾವಣ ಬಂದಿದೆ!

(ಭಾರತ ಸ್ವಾತಂತ್ರ್ಯೋದಯದ ರೂಪಕ) ಇದೊ, ಶ್ರಾವಣಬಂದಿದೆ ಭೂವನಕೆ, ಜನಜೀವನ ಪಾವನ ಗೈಯಲಿಕೆ- ಇದೊ, ಶ್ರಾವಣ ಬಂದಿದೆ ಭಾರತಕೆ ! ೧ ತೆರಳಿತು ವೈಶಾಖದ ಬಿರುಬಿಸಿಲು, ಸರಿಯಿತು ಮೃಗಜಲದಾ ಹುಸಿಹೊನಲು ; ಮರೆಯಾಯಿತು ಸುಟ್ಟುರೆಗಳ ಹೊಯಿಲು,...

ಶ್ರಾವಣಸಮೀರ!

ಬಾ, ಶ್ರಾವಣ ಶುಭಸಮೀರ ಬಾರಾ! ಬಾರೈ ಶ್ರಾವಣ ಸಮೀರ, ಕಾಲನೊಲುಮೆಯೋಲೆಕಾರ, ಸುಖನಾಟಕ ಸೂತ್ರಧಾರ, ಬುವಿಯ ಬೇಟಗಾರಾ! ಬಾ, ಶ್ರಾವಣ ಶುಭಸಮೀರ ಬಾರಾ! ೧ ಪಡುಗಡಲಿಗೆ ತೆರೆಯು ಹೇರಿ, ಜಡಿಯು ಮುಗಿಲ ಕೆಳೆಯ ಸೇರಿ, ನಿಡುಮಲೆಗಳ...