Home / Ravi Kotaragasti

Browsing Tag: Ravi Kotaragasti

ಬವಣೆಯ ಬದುಕು ಭರವಸೆಯಲಿ ಸವೆಸುತ್ತಾ ದುಡಿಮೆಯಲಿ ಕಾಲ ಕಳೆಯುತ್ತಾ ತಿನ್ನುವ ಅನ್ನವ ತೊರೆದು ಹೊರಟೆಯೇನಣ್ಣ ಆತ್ಮಹತ್ಯೆಗೆ ಆತುರಬೇಡ… ಅವಸರಬೇಡ ನಿನ್ನ ಒಡಲ ಕುಡಿಗಳಿಹರು ಆತಂಕಬೇಡ ನಾವಿರುವೆವು ನಿಮಗಾಗಿ ಹಸಿವೆ.. ಹರಿ ಹಾಯ್ದರೂ… ನಾ...

ನಭೋ… ಮಂಡಲದಿ.. ಮಿನುಗು-ತಾರೆಗಳನೇಕ.. ಸೂರ್ಯನ ಪ್ರಕಾಶ ಮೀರುತಲಿ ಕತ್ತಲೆಯೊಂದಿಗ್ಗೆ – ಹೋರಾಡುತ ಬೆಳಗು… ಮುನ್ನ ಕರಗುವವು ರಾಷ್ಟ್ರ… ಮಂಡಲದಿ… ಮಿಂಚಿದ ದೇಶಪ್ರೇಮಿಗಳನೇಕ ನೇತಾಜಿ, ಭಗತ್, ಚಂದ್ರಶೇಖರ ರಾಯಣ್...

ನವ ಶತಮಾನದಲಿ ಕಾಲಿಡುತಿಹೆವು ಸ್ವಾತಂತ್ರ್ಯದ ಸುವರ್ಣ ಹಬ್ಬದ.. ಸಡಗರದ… ಸಂತಸಗಳಲಿ ಗತಿಸಿ ಹೋದ ನಲವತ್ತೇಳರ ಘಟನೆಗಳ ನೆನೆಯುತ ಬಲಿದಾನದ ವೀರಸೇನಾನಿಗಳ ತ್ಯಾಗದ ರೂಪ ಕಾಣುತ ಸಾಗಿಹದು ಸ್ವಾತಂತ್ರ್ಯಯ ಸುವರ್ಣೋತ್ಸವ ಸೌಂದರ್ಯರಾಣಿ… ಮ...

ನೋವಿನ ಬಿರುಗಾಳಿ ಬಾಳಲಿ ಬೀಸುತಲಿ ಬರೆ ನೀಡುತ… ಬಡಿದು-ನೋಯಿಸುತ ತನು-ಮನ ಕಲುಕುತಿಹದು ಪ್ರತಿಭೆ-ಪ್ರಸನ್ನತೆಗಳ ಭ್ರಮನಿರಸನದ ಆದರ್ಶ ಬವಣೆಯಲಿ ಬಳಲುತಿಹದು ಅನಾಚಾರ… ಕಂದಾಚಾರ ರಾರಾಜಿಸುತ… ರಂಜನೆಯಲಿ ಎಲ್ಲೆಡೆ ಹರಡಿಹವು ಏಕನ...

ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ ತೊರೆ, ನದಿಗಳ ಹಿಮದ ಜಾರುಂಡೆಗಳಲಿ ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ ನರ್ತನ ಗೈಯ್ಯುತಿದ್ದವು ಸಾವು ನೋವುಗಳು ತಾಂಡವ ರೂಪದ ವೀರಯೋಧರು ಭಾರತಾಂಬೆಯ ಹೆಮ್ಮೆ ಕುವರರು ಚಳಿಗಾಳಿ ಹಸಿವೆನ್ನದೆ ಜೈಹಿಂದ್ ಎನ್ನು...

ತಂಗಾಳಿ… ಬೀಸುತಲಿ ಮೈ…ಮನ ಅರಳುತ ತೇಲಿ… ಬರುತಿಹದು ನಿನ್ನ…ಮಧುರ ನೆನಪು ಬಾನಂಗಳದಿ ಬಯಕೆ ಬೇಡುತಿಹ ಸಂಗವು ಕರಾಳ ರಾತ್ರಿಯಾಗಿ ಏಕಾಂಗಿತನದ ನೋವು ಗಾಯಗೊಳಿಸುತಲಿ… ತರುತಿಹದು ಸವಿನೆನಪು ಮನವೆಲ್ಲಾ ಅರಳಿಸಿಹದು ...

ಹೊಸತನವ ಅರಸುತ ಮನದಿ-ಮುದಡಿ ಆಕ್ರೋಶದಿ ಅರಚುತ ಕೊರಗುವ ಕರಳು ನೋವು ಅರಿಯುವರಾರು ಹಟ್ಟಿ… ಬೆಟ್ಟಗಳ ನಡುವಲಿ.. ಹುಟ್ಟಿ ಬೆಳೆದು ಬಾಳಿದ ದಶ-ದಶಕಗಳ ಕಾಲ ಗತಿಸಿದರೂ ಕಾಣದು-ತಿಳಿಯದ ಹೊಸ ಬಗೆಯ.. ಹಸನ ಬದುಕು ಕಾಡು… ಮೋಡಗಳ ದಟ್ಟ ಕಣಿವ...

ಅವ್ವಾ… ಅವ್ವಾ… ಹೇಳು ದೇವದಾಸಿ ಅಂದರೇನು ನಿನಗೇಕೆ… ಅನ್ನುವರು ದೇವರ… ದಾಸಿ ನಿನ್ನ ಹಾಗೆಯೇ… ಇರುವ ನೆರೆಮನೆಯ ಸೀನು… ಶೇಖರನ… ಅವ್ವಂದಿರಿಗೇಕೆ… ಅನ್ನುವುದಿಲ್ಲ… ದೇವದಾಸಿ ಬೇಡವ...

ಸಹಕಾರ ನಮ್ಮ ಉಸಿರು ಸಹೋದರತೆ ನಮ್ಮ ಹಸಿರು ಸಮಬಾಳ್ವೆ ಮಂತ್ರವೆಮಗಿರಲಿ ದುಡಿದು… ದಣಿದ ಬಂಧುಗಳೇ ಬದುಕಲಿ ಬಳಲುತ ಬೆವರು ಸುರಿಸುವ ಬಾಂಧವರೆ ಕಾಯಕ ಕೈಲಾಸವೆಂಬ ಬಸವ ಘೋಷದಲಿರುವ ಅಗಾಧ ಶಕ್ತಿಯ ಅರಿವು ತಿಳಿಯಿರಿ ಸಹಕಾರ ತತ್ವದಡಿ ಬಸವಯುಗದಲಿ...

ಹದಿನಾಲ್ಕು ವರುಷಗಳ ಮೇಲೆ ಸವಿನೆನಪುಗಳ ಬುತ್ತಿಯಲಿ ಏನೇನೊ ಹಲವು ಕನಸನೆ ಹೊತ್ತು ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ ಕರಿಮಣ್ಣಿನ ಏರೆಹೊಲದ ದಿಬ್ಬದಿ ನನ್ನೂರು ಕಾಣುವ ತವಕದಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ ಜುಳು… ಜುಳು… ...

1...4567

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...