ಬಿರುಗಾಳಿ

ನೋವಿನ ಬಿರುಗಾಳಿ
ಬಾಳಲಿ ಬೀಸುತಲಿ
ಬರೆ ನೀಡುತ…
ಬಡಿದು-ನೋಯಿಸುತ
ತನು-ಮನ ಕಲುಕುತಿಹದು
ಪ್ರತಿಭೆ-ಪ್ರಸನ್ನತೆಗಳ
ಭ್ರಮನಿರಸನದ ಆದರ್ಶ
ಬವಣೆಯಲಿ ಬಳಲುತಿಹದು

ಅನಾಚಾರ… ಕಂದಾಚಾರ
ರಾರಾಜಿಸುತ… ರಂಜನೆಯಲಿ
ಎಲ್ಲೆಡೆ ಹರಡಿಹವು
ಏಕನಾದದಿ ಮಿಡಿಯುತ
ಮಾರಕ ಯಾತನೆಯಲಿ
ಗಹ… ಗಹಿಸುತಿಹವು

ಸುಪ್ತ ಮನಸ್ಸುಗಳ
ಆಳದಿ ತುಂಬಿ…
ಬದುಕಿನ ಪ್ರಶ್ನೆಗಳೇ…
ಕೇಳುತಲಿ ಹಲವು
ಜೀವಂತ ಹೆಣವಾಗಿಸುವ
ಹುನ್ನಾರದಿ ಆತ್ಮ ಸ್ಥೈರ್ಯ
ಅಂತರಾಳದಿ ಎಚ್ಚರಗೊಳಿಸುತಿಹವು

ಏಳಬೇಕು… ಎಚ್ಚರದಿ
ಎದ್ದೇಳಬೇಕು… ಮನಸ್ಸು
ಆತ್ಮ – ಗುಂಡಾಗಿಸಿ…
ಸಿಡಿಯುತಲಿ ಉರುಳಬೇಕು
ಕತ್ತಲೆ ಸೀಳುವ ಮಿಂಚಾಗಿ
ದೀವಿಗೆಯ ಬೆಂಕಿ ಬೆಳಕಾಗುತ

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರೆಂದರೆ
Next post ಹೌದಪ್ಪ ಹೌದೋ ನೀನೇ ದೇವರಾ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…