ದೇವದಾಸಿ

ಅವ್ವಾ… ಅವ್ವಾ… ಹೇಳು
ದೇವದಾಸಿ ಅಂದರೇನು
ನಿನಗೇಕೆ… ಅನ್ನುವರು
ದೇವರ… ದಾಸಿ

ನಿನ್ನ ಹಾಗೆಯೇ…
ಇರುವ ನೆರೆಮನೆಯ
ಸೀನು… ಶೇಖರನ…
ಅವ್ವಂದಿರಿಗೇಕೆ…
ಅನ್ನುವುದಿಲ್ಲ… ದೇವದಾಸಿ

ಬೇಡವೆಂದನೆ…
ಆ ದೇವರು…
ಅವರಿಗೆಲ್ಲಾ, ಇಲ್ಲಾ…
ಅವರೆ ಒಲ್ಲೆಂದರೆ
ದೇವದಾಸಿ…

ನೀನೇಕೆ… ದೇವದಾಸಿ?
ಬೇಡವೆಂದಿದ್ದರೆ….
ನೀ ಬರಿ ನನ್ನವ್ವ ಆಗಿದ್ದಿ
ಅವರ ಹಾಗೆ ಇರುತ್ತಿದ್ದಿ

ನಮ್ಮೆಲ್ಲರ ದೇವರು
ನಮ್ಮೂರಿನ ಪೂಜಾರಿ…
ಗೌಡ-ಕುಲಕರ್ಣಿಗಳವರ
ಮಗಳು-ಮಡದಿಯರನ್ನು
ಮಾಡ್ಯಾನು ದೇವರದಾಸಿ

ನೀನಾಗ… ಅವರಂತೆ
ಮನೆ ಒಡತಿ…
ಮಕ್ಕಳ ತಾಯಿಯಾಗಿಹ
ಪ್ರೀತಿ-ವಾತ್ಸಲ್ಯದ…
ನನ್ನವ್ವ-ನೀನಲ್ಲವೇ.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂತೆಯಲ್ಲಿ ನಿಂತು ಕನ್ನಡವ ನೆನೆದೇವು
Next post ಅವರು

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…