ರಾಷ್ಟ್ರಚೇತನ

ನಭೋ… ಮಂಡಲದಿ..
ಮಿನುಗು-ತಾರೆಗಳನೇಕ..
ಸೂರ್ಯನ ಪ್ರಕಾಶ ಮೀರುತಲಿ
ಕತ್ತಲೆಯೊಂದಿಗ್ಗೆ – ಹೋರಾಡುತ
ಬೆಳಗು… ಮುನ್ನ ಕರಗುವವು

ರಾಷ್ಟ್ರ… ಮಂಡಲದಿ…
ಮಿಂಚಿದ ದೇಶಪ್ರೇಮಿಗಳನೇಕ
ನೇತಾಜಿ, ಭಗತ್, ಚಂದ್ರಶೇಖರ
ರಾಯಣ್ಣ… ರಾಜಗುರು…

ಝಾಂಸಿ ಲಕ್ಷ್ಮೀಬಾಯಿ… ಕೆಳದಿ…
ಕಿತ್ತೂರ… ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ
ಮಿನುಗಿದ ರಾಷ್ಟ್ರಚೇತನಗಳು

ದೇಶ ಪ್ರೀತಿಸುತ…
ದಾಸ್ಯ-ಸಂಕೋಲೆ ಕಡಿಯಲು
ಬದುಕು… ಪಣವಾಗಿಸಿ…
ಗಗನ ತಾರೆಗಳ-ತರಹ

ಸ್ವಾತಂತ್ರ್‍ಯ ಮೊಳಗುವ ಮುನ್ನ
ಮರೆಯಾದರು ಸಂತಸದ
ಬೆಳಗು ಮುಂಜಾನೆಯಲಿ

ಸ್ವಾತಂತ್ರ್‍ಯದ ಹಗಲಲಿ ನೆನೆಯುತ
ಉತ್ಸವ, ಹರಿ ಹಬ್ಬಗಳಲಿ…
ಕೊಂಡಾಡಿ ಬರಿ ಮಾತಲ್ಲಿ ಮೆರೆದಾಡಿ…
ಮೋಜಿನಲಿ ಮರೆಯುತಿಹೆವು
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಜೈಮೇಳ
Next post ಬೀಳಬಾರದೋ ಕೆಸರಿನೊಳು ಜಾರಿ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…